Site icon Suddi Belthangady

ಗ್ರಾ.ಪಂ. ನೌಕರರ ಹೋರಾಟ : ಮೂಲ ಬೇಡಿಕೆಗಳಿಗೆ ಅಸ್ತು ಎಂದ ಸರಕಾರ

ಗ್ರಾಮ ಪಂಚಾಯತ್ ನೌಕರರ ಬೇಡಿಕೆಯನ್ನು ಈಡೇರಿಸಲು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಆಯೋಜಿಸಲಾಗಿದ್ದ ಸರ್ಕಾರದ ವಿರುದ್ಧ ಪ್ರತಿಭಟನೆಯಲ್ಲಿ ನೌಕರರ ಮೂಲ ಬೇಡಿಕೆಗಳಿಗೆ ಅಸ್ತು ಎಂದ ಸರಕಾರ, ಕೂಡಲೇ ಮೂರು ಬೇಡಿಕೆಗಳನ್ನು ಈಡೇರಿಸುವಂತೆ ಸರಕಾರಿ ಆದೇಶ ಮಾಡುವುದಾಗಿ ಮುಖ್ಯ ಮಂತ್ರಿಗಳ ನಿರ್ದೇಶನ ಮೇರೆಗೆ ಕೋಟ ಶ್ರೀನಿವಾಸ ಪೂಜಾರಿ ವಿಧಾನ ಸೌದದಲ್ಲಿ ಹೇಳಿದರು.

ಗ್ರಾಮೀಣಾಭಿವೃಧ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳು ಕಳೆದ ಎಂಟು ವರ್ಷಗಳಿಂದ ಪಂಚಾಯತ್ ನೌಕರರುಗಳೇ ಸೇರಿ ಸಂಘಟಿತರಾಗಿ ಯಾವುದೇ ಹೋರಾಟ ಮುಷ್ಕರಗಳಲ್ಲಿ ಸೇರದೆ ನೇರವಾಗಿ ಸರಕಾರ, ಇಲಾಖಾ ಸಚಿವರು ಹಾಗೂ ಇಲಾಖಾ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಮೂಲಕ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಬೇಡಿಕೆಗಳನ್ನು ಸಲ್ಲಿಸುತ್ತಾ ಬಂದಿದ್ದಾರೆ. ಅದರಂತೆ ಹಲವಾರು ಬಾರಿ ಸಂಘಟನೆಯ ಮೂಲಕ ಮನವಿಗಳನ್ನು ಸಲ್ಲಿಸಲಾಗಿಯೂ, ಸಹ ಬಡ ನೌಕರರ ಬೇಡಿಕೆಗಳಿಗೆ ಮತ್ತು ಸಮಸ್ಯೆಗಳಿಗೆ ಯಾವುದೇ ರೀತಿಯ ಸ್ಪಂದನೆ ಸಿಗದೇ ಇದ್ದ ಕಾರಣ ಬೆಳಗಾವಿ ಅಧಿವೇಶನದ ಮೊದಲ ದಿನ ಸಹಸ್ರ ಸಂಖ್ಯೆಯಲ್ಲಿ ನೌಕರರು ಸೇರಿ ಪ್ರತಿಭಟನೆ ಮಾಡಿ ಸರಕಾರಕ್ಕೆ ಮನವಿ ಸಲ್ಲಿಸಿದ ನಂತರ ಇಲಾಖೆಯಿಂದ ಯಾವುದೇ ರೀತಿಯ ಸ್ಪಂದನೆ ಸಿಗದ ಕಾರಣ ಫೆ. 6 ಮತ್ತು 7 ರಂದು ಬೆಂಗಳೂರಿನ ಪ್ರೀಡಂ ಪಾರ್ಕಿನಲ್ಲಿ ಸಹಸ್ರ ಸಂಖ್ಯೆಯಲ್ಲಿ ಪಂಚಾಯತ್ ನೌಕರರು ಸೇರಿ ಪ್ರತಿಭಟನೆ ಮಾಡಿದ ಪರಿಣಾಮ, ಗ್ರಾಮ ಪಂಚಾಯತ್ ನೌಕರರ ನಿಯೋಗವನ್ನು ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರು ಶಾಸಕರ ಭವನಕ್ಕೆ ಕರೆಸಿ ಸುದೀರ್ಘವಾಗಿ ನಿಯೋಗದೊಂದಿಗೆ ಮತ್ತು ಮುಖ್ಯ ಮಂತ್ರಿಗಳೊಂದಿಗೆ ಚರ್ಚಿಸಿದ ನಂತರ ನೌಕರರ ಬೇಡಿಕೆಗಳನ್ನು ಈಡೇರಿಸುಂತೆ , ವಿಧಾನ ಸೌಧದ ಸಚಿವರ ಕಚೇರಿಯಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ಅಧ್ಯಕ್ಷತೆಯಲ್ಲಿ ಗ್ರಾಮೀಣಾಭಿವೃಧ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಎಲ್ ಕೆ ಅತೀಕ್ ರವರ ಉಪಸ್ಥಿತಿಯಲ್ಲಿ ಶ್ರೇಯೋಭಿವೃಧ್ಧಿ ಸಂಘದ ನಿಯೋಗದೊಂದಿಗೆ ಸುದೀರ್ಘವಾದ ಚರ್ಚೆಯನ್ನು ನಡೆಸಿ ಕೊಟ್ಟ ಮಾತಿನಂತೆ ನೌಕರರ ಬೇಡಿಕೆಗಳನ್ನು ಮುಖ್ಯ ಮಂತ್ರಿಗಳ ನಿರ್ದೇಶನದಂತೆ ಈಡೇರಿಸಿ ಕೂಡಲೇ ಸರಕಾರಿ ಆದೇಶ ಮಾಡುವುದಾಗಿ ತಿಳಿಸಿದರು.

ಗ್ರಾಮ ಪಂಚಾಯತ್ ನೌಕರರನ್ನು ಸಿ ಮತ್ತು ಡಿ ದರ್ಜೆಗೆ ಮೇಲ್ದರ್ಜೆಗೇರಿಸಲು ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆಗೆ ಸಲ್ಲಿಸಲು ಸೂಚಿಸಲಾಯಿತು.

Exit mobile version