Site icon Suddi Belthangady

ಅಳದಂಗಡಿ ಶ್ರೀ ಮಹಾಗಣಪತಿ ದೇವರ ಬ್ರಹ್ಮಕಲಶೋತ್ಸವ

ಅಳದಂಗಡಿ: ಶ್ರೀ ಮಹಾಗಣಪತಿ ದೇವರ ಬ್ರಹ್ಮಕಲಶೋತ್ಸವದ 4 ನೇ ದಿನದ ಧಾರ್ಮಿಕ ಸಭೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯಕಾರಿಣಿ ಆಮಂತ್ರಿತ ಸದಸ್ಯ ಡಾ. ಪ್ರಭಾಕರ ಭಟ್ ಕಲ್ಲಡ್ಕ ಧಾರ್ಮಿಕ ಉಪನ್ಯಾಸ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ.ಪದ್ಮಪ್ರಸಾದ ಅಜಿಲರು ವಹಿಸಿದ್ದರು.

ವೇದಿಕೆಯಲ್ಲಿ ನಾವೂರು ಆರೋಗ್ಯ ಕ್ಲಿನಿಕ್ ನ ಡಾ.ಪ್ರದೀಪ್ ನಾವೂರು, ಬಿಜೆಪಿ ಬೆಳ್ತಂಗಡಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ಬೆಂಗಳೂರು ಸಾನ್ವಿ ಗ್ರೂಪ್ ಆಫ್ ಕಂಪೆನಿ ಮತ್ತು ಅನ್ನಪೂರ್ಣ ಹಾಸ್ಪಿಟಾಲಿಟಿ ಸರ್ವಿಸ್ ಸಿಇಓ ಹರೀಶ್ ಶೆಟ್ಟಿ ಕಂರ್ಬಿತ್ತಿಲ್, ಪ್ರಗತಿಪರ ಕೃಷಿಕ ಶ್ರೀನಿವಾಸ್ ರಾವ್ ದೊರಿಂಜ, ಮಂಗಳೂರು ಉದ್ಯಮಿ ಸದಾನಂದ ಎಂ ನಾವರ, ಅಳದಂಗಡಿ ಶ್ರೀ ಸತ್ಯದೇವತಾ ದೈವಸ್ಥಾನದ ಆಡಳಿತದಾರ ಶಿವಪ್ರಸಾದ್ ಅಜಿಲ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಸದಾನಂದ ಪೂಜಾರಿ ಉಂಗೀಲಬೈಲು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ.ಶಶಿಧರ ಡೋಂಗ್ರೆ, ಪ್ರ.ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ ನೊಚ್ಚ ಉಪಸ್ಥಿತರಿದ್ದರು.

ಡಾ. ಶಶಿಧರ ಡೋಂಗ್ರೆ ಪ್ರಾಸ್ತಾವಣೆಗೈದು ಸ್ವಾಗತಿಸಿದರು, ಯುವ ಸಾಹಿತಿ ಚಂದ್ರಹಾಸ ಬಳಂಜ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ದೇಗುಲದ ಅಭಿವೃದ್ಧಿ ಕೆಲಸಕ್ಕೆ ಸಹಕಾರ ನೀಡಿದ ಮಹನೀಯರಾದ ಡಾ. ಎನ್.ಎಂ ತುಳಪುಳೆ, ಉದ್ಯಮಿ ಹರೀಶ್ ಶೆಟ್ಟಿ ಕಂರ್ಬಿತ್ತಿಲ್ ನಾಲ್ಕೂರು, ಉದ್ಯಮಿ ಸದಾನಂದ ನಾವರ, ಶ್ರೀನಿವಾಸ ರಾವ್ ದೊರಿಂಜ ಇವರನ್ನು ಸನ್ಮಾನಿಸಿದರು.

Exit mobile version