Site icon Suddi Belthangady

ಜೆ.ಇ.ಇ ಮೈನ್ಸ್: ಗುರುವಾಯನಕೆರೆ ಎಕ್ಸೆಲ್ ಕಾಲೇಜು ವಿದ್ಯಾರ್ಥಿಗಳ ಅಭೂತ ಪೂರ್ವ ಸಾಧನೆ

ಗುರುವಾಯನಕೆರೆ: ಜೆ.ಇ.ಇ ಮೈನ್ಸ್ ಫಲಿತಾಂಶ ಪ್ರಕಟವಾಗಿದ್ದು, ಗುರುವಾಯನಕೆರೆಯ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅಭೂತ ಪೂರ್ವ ಸಾಧನೆ ಮಾಡಿದ್ದಾರೆ. ಪವನ್ ಶೆಣೈ 99, ಪ್ರಣವ್ ಎಸ್ 99, ಧನುಷ್ ಕೆ 97.5, ಆದಿತ್ ಜೈನ್ 96.3, ಅಪರಾಜಿತ ಚಂದನ್ 94, ಸಂಜನಾ ಇರೈನವರ್ 93, ಚೇತನ್ ಗೌಡ 93, ನವತೇಜ್ 91, ಶ್ರೀಹರಿ 90.7 ಹಾಗೂ ದಿಯಾ ಜಾನ್ಕಿ 90 ಶೇಕಡವಾರು ಅಂಕ ಪಡೆದುಕೊಂಡಿದ್ದಾರೆ
ಶೈಕ್ಷಣಿಕ ಸಾಧಕರನ್ನು ಎಕ್ಸೆಲ್ ವಿದ್ಯಾ ಸಂಸ್ಥೆಗಳ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ ಬಿ, ಪ್ರಾಂಶುಪಾಲರು ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

Exit mobile version