Site icon Suddi Belthangady

ಅಳದಂಗಡಿ ಶ್ರೀ ಮಹಾಗಣಪತಿ ದೇವರ ನೂತನ ಬಿಂಬ ಪ್ರತಿಷ್ಠೆ, ಕಲಶಾಭಿಷೇಕ, ಚಂಡಿಕಾ ಹೋಮ

ಅಳದಂಗಡಿ : ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಅಷ್ಠಬಂಧ ಬ್ರಹ್ಮಕಲಶೋತ್ಸವವು ಫೆ. 4 ರಿಂದ ಪ್ರಾರಂಭಗೊಂಡು ಫೆ. 9ರವೆಗೆ ನಡೆಯಲಿದೆ.

ಫೆ. 7 ರಂದು ಬೆಳಿಗ್ಗೆ ಗಣಹೋಮ, ಅಧಿವಾಸೋದ್ಧಾರ ಪ್ರಾಸಾದ ಪ್ರತಿಷ್ಠೆ ಪುಣ್ಯಾಹ ನಪುಂಸಕ ಕಲೆಯಲ್ಲಿ ರತ್ನಾವಿನ್ಯಾಸ , ಪೀಠ ಪ್ರತಿಷ್ಠೆ ಪರವಾಹನೆ ಸ್ಥೂಲವಾಹನೆ, ಬೆಳಿಗ್ಗೆ 9.15 ಕ್ಕೆ ಶ್ರೀ ಮಹಾಗಣಪತಿ ದೇವರ ನೂತನ ಬಿಂಬ ಪ್ರತಿಷ್ಠೆ , ಕುಂಬೇಶ ಕಲಶಾಭಿಷೇಕ , ನಿದ್ರಾ ಕಲಶಾಭಿಷೇಕ, ಜೀವ ಕಲಶಾಭಿಷೇಕ, ಆವಾಹನೆ ಶಿಖರ ಪ್ರತಿಷ್ಠೆ, ಪರಿವಾರ ಪ್ರತಿಷ್ಠೆ, ಕಲಶಾಭಿಷೇಕ, ಚಂಡಿಕಾಹೋಮ ನಡೆಯಿತು.

ಬೆಳಿಗ್ಗೆ 8 ಕ್ಕೆ ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ವತಿಯಿಂದ ಸಾಮೂಹಿಕ ವಿಷ್ಣು ಸಹಸ್ರನಾಮ ಪಠಣ ನಡೆಯಿತು.

ಕ್ಷೇತ್ರದ ತಂತ್ರಿಗಳಾದ ವೇದಬ್ರಹ್ಮ ಶ್ರೀ ವಿದ್ವಾನ್ ಕೆ.ಅನಂತ ಪದ್ಮನಾಭ ಉಪಾಧ್ಯಾಯರ ನೇತೃತ್ವದಲ್ಲಿ ವೈದಿಕ ವಿಧಿ ವಿಧಾನಗಳು ನಡೆಯಿತು.

ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿ ಗೌರಾವಾಧ್ಯಕ್ಷ ,ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ.ಪದ್ಮಪ್ರಸಾದ ಅಜಿಲರು, ಧಾರ್ಮಿಕ ಪರಿಷತ್ ಸದಸ್ಯ ದೇವೇಂದ್ರ ಹೆಗ್ಡೆ ಕೊಕ್ರಾಡಿ, ಅಧ್ಯಕ್ಷ ಡಾ.ಶಶಿಧರ ಡೋಂಗ್ರೆ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗಂಗಾಧರ ಮಿತ್ತಮಾರು, ಬ್ರಹ್ಮಕಲಶೋತ್ಸವ ಸಮಿತಿ ಪ್ರ.ಕಾರ್ಯದರ್ಶಿ ಸಂತೋಷ್ ಕುಮಾರ್ ಕಾಪಿನಡ್ಕ, ಪ್ರಧಾನ ಆರ್ಚಕ ಸೋಮನಾಥ ಮಯ್ಯ, ಜೀರ್ಣೋದ್ಧಾರ ಸಮಿತಿ ಪ್ರ.ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ, ಸ್ವಾಗತ ಸಮಿತಿ ಅಧ್ಯಕ್ಷ ಶಿವಪ್ರಸಾದ ಅಜಿಲ, ಕೋಶಾಧಿಕಾರಿ ಅನಿಲ್ ಕೊಟ್ಟಾರಿ, ಆರ್ಥಿಕ ಸಮಿತಿ ಸಂಚಾಲಕ ಸೋಮನಾಥ ಬಂಗೇರ, ಸಮಿತಿಯ ಪ್ರಮುಖರಾದ ವಿಜಯ ಕುಮಾರ್ ಜೈನ್, ಸುಪ್ರಿತ್ ಜೈನ್, ಜಯಂತಿ ಜಗನ್ನಾಥ ಶೆಟ್ಟಿ, ವೈಶಾಲಿ ಸುರೇಶ್ ಶೆಟ್ಟಿ, ಸದಾನಂದ ಮಾಳಿಗೆ, ಸುಧೀರ್ ಸುವರ್ಣ ,ಬೇಬಿ ಪೂಜಾರಿ, ತಿರುಮಲೇಶ್ವರ ಪ್ರಸಾದ್ ಡಾ.ಎನ್.ಎಂ ತುಳಪುಳೆ, ಸದಾನಂದ ಎಂ ನಾವರ, ನವೀನ್ ಸಾಮಾನಿ, ಉಮೇಶ್ ಸುವರ್ಣ, ಸುಭಾಶ್ಚಂದ್ರ ರೈ, ಮೋಹನ್ ದಾಸ್, ಚಂದ್ರಶೇಖರ್, ಸಂಜೀವ ಪೂಜಾರಿ ಕೊಡಂಗೆ, ನಿರಂಜನ್ ಜೋಶಿ, ವಿಶ್ವನಾಥ ಹೊಳ್ಳ, ಹೇಮಂತ್ ಯರ್ಡೂರು, ಜೈದೀಪ್, ಯಶೋಧರ ಸುವರ್ಣ, ಶ್ರೀರಂಗ ಮಯ್ಯ, ಪ್ರಕಾಶ್ ಬೊಕ್ಕಸ, ದಿನೇಶ್ ಅಂತರ, ಕರುಣಾಕರ ಹೆಗ್ಡೆ, ಸುಂದರ ಶೆಟ್ಟಿ, ಶಿವ ಭಟ್ ಕಟ್ಟೂರು,ಪ್ರವೀಣ್ ಮಯ್ಯ, ಪ್ರಸನ್ನ ಮಯ್ಯ, ದಿನೇಶ್ ಪಿ‌ಕೆ,ಪ್ರಶಾಂತ್ ಜಶನ್, ಮಾಲ ಎಂ.ಕೆ, ಸುಮಂಗಲ, ಹರಿಣಾಕ್ಷಿ ಕೆ ಶೆಟ್ಟಿ, ಗಣೇಶ್ ದೇವಾಡಿಗ, ಕೃಷ್ಣಪ್ಪ ಬಿಕ್ಕಿರ, ವಿಶ್ವನಾಥ ಬಂಗೇರ, ಹರೀಶ್ ಕುಲಾಲ್, ಗಿರೀಶ್ ಕುಮಾರ್ ಪಿಲ್ಯ, ಜಗದೀಶ್ ಹೆಗ್ಡೆ, ರತ್ನರಾಜ ಜೈನ್, ವೀರೇಂದ್ರ ಕುಮಾರ್, ಧರ್ಮಸಾಮ್ರಾಜ್ಯ, ಹರೀಶ್ ಆಚಾರ್ಯ, ಹಾಗೂ ವಿವಿಧ ಸಮಿತಿಯ ಪದಾಧಿಕಾರಿಗಳು, ಊರವರು ಉಪಸ್ಥಿತರಿದ್ದರು.

ಶ್ರೀದೇವಿ ಸಚಿನ್ ಮತ್ತು ತಂಡ ನಿನಾದ ಕ್ಲಾಸಿಕಲ್, ಮುಂಡ್ರುಪ್ಪಾಡಿ ಇವರಿಂದ ದಾಸವಾಣಿ ಹಾಗೂ ಸುಗಮ ಸಂಗೀತ ನಡೆಯಿತು.

Exit mobile version