Site icon Suddi Belthangady

ನಾಳ ದೇವಸ್ಥಾನಕ್ಕೆ ಗೇರುಕಟ್ಟೆ ಯುವವಾಹಿನಿ ವತಿಯಿಂದ ಡೋಲು ಗಂಟೆ ಕೊಡುಗೆ

ನಾಳ: ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವದ ಸಂದರ್ಭದಲ್ಲಿ ಗೇರುಕಟ್ಟೆ ಯುವವಾಹಿನಿ ಸಂಚಲನ ಸಮಿತಿ ವತಿಯಿಂದ ಡೋಲು ಗಂಟೆಯನ್ನು ಕೊಡುಗೆಯಾಗಿ ನೀಡಲಾಯಿತು.ಅಧ್ಯಕ್ಷ ನವೀನ್ ಕೋಟ್ಯಾನ್, ಸಂಘಟನ ಕಾರ್ಯದರ್ಶಿ ಯೋಗೀಶ್ ಕುಮಾರ್ ಅಡ್ಡಕೊಡಂಗೆ, ಕಾರ್ಯದರ್ಶಿ ಸಚಿನ್ ಗೇರುಕಟ್ಟೆ ಹಾಗೂ ಸದಸ್ಯ ವಸಂತ ಮುರತ್ತಮಜಲ್ ಹಾಗೂ ಸಮಿತಿಯ ಸದಸ್ಯರ ಸಹಕಾರದೊಂದಿಗೆ ದೇವಸ್ಥಾನಕ್ಕೆ ನೀಡಲಾಯಿತು.
ಈ ಸಂದರ್ಭದಲ್ಲಿ ನಾಳ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಭುವನೇಶ್.ಜಿ., ದೇವಸ್ಥಾನದ ಪ್ರಧಾನ ಅರ್ಚಕರಾದ ವೇ.ಮೂ.ರಾಘವೇಂದ್ರ ಅಸ್ರಣ್ಣರು, ಜಾತ್ರೋತ್ಸವ ಸಮಿತಿ ಸದಸ್ಯರಾದ ಸುರೇಶ್ ಕುಮಾರ್ ಆರ್.ಎನ್., ವಿಠಲ ಶೆಟ್ಟಿ ಉಪ್ಪಡ್ಕ, ಗೇರುಕಟ್ಟೆ ಯುವವಾಹಿನಿ ಸಂಚಲನ ಸಮಿತಿಯ ಪದಾಧಿಕಾರಿಗಳು, ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

Exit mobile version