ನಿಟ್ಟಡೆ: ಇಲ್ಲಿಯ ಶ್ರೀ ದುರ್ಗಾಪರಮೇಶ್ವರಿ ಮತ್ತು ನವಗುಳಿಗ ಕ್ಷೇತ್ರ ಬರ್ಕಜೆಯಲ್ಲಿ ಫೆ.4ರಿಂದ 5ರವರೆಗೆ 8ನೇ ವರ್ಷದ ಜಾತ್ರಾ ಮಹೋತ್ಸವವು ವಿಜೃಂಭಣೆಯಿಂದ ಜರುಗಿತು.
ಫೆ. 4ರಂದು ರಾತ್ರಿ ಶ್ರೀ ದುರ್ಗಾದೇವಿ ಗುಡಿಯಲ್ಲಿ ವಾಸ್ತು ಪೂಜೆ, ವಾಸ್ತು ಹೋಮ, ದಿಕ್‌ಬಲಿ ಜರುಗಿತು.
ಫೆ.5 ರಂದು ಬೆಳಿಗ್ಗೆ ನಾಗಬನದಲ್ಲಿ ಶ್ರೀ ನಾಗದೇವರಿಗೆ ತಂಬಿಲ, ಶ್ರೀ ದುರ್ಗಾದೇವಿ ಗುಡಿಯಲ್ಲಿ ಚಂಡಿಕಾಯಾಗ, ಪಂಚಾಮೃತ ಅಭಿಷೇಕ, ಸತ್ಯನಾರಾಯಣ ಪೂಜೆ, ಭಜನಾ ಕಾರ್ಯಕ್ರಮ, ಬೆಳಿಗ್ಗೆ ವಿಶೇಷ ರಂಗ ಪೂಜೆ ಮತ್ತು ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು. ಮಧ್ಯಾಹ್ನ ಪರಿವಾರ ದೈವಗಳಾದ ಮೈಸಂದಾಯ, ದುಗಲಾಯ, ಪಂಜುರ್ಲಿ, ಮೈಯಂತಿ, ಮಂತ್ರದೇವತೆ, ಸನ್ಯಾಸಿ ಗುಳಿಗ, ಕೊರಗಜ್ಜ ದೈವಗಳ ಗಗ್ಗರ ಸೇವೆ ನಡೆಯಿತು. ಸಂಜೆ ನವ (9) ಗುಳಿಗಗಳ ವಿಶೇಷ ಗಗ್ಗರ ಸೇವೆ ನಡೆಯಿತು.