ಉಜಿರೆ : ದ. ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಫೆ.3 ರಿಂದ ಉಜಿರೆ ಕೃಷ್ಣಾನುಗ್ರಹದಲ್ಲಿ ನಡೆದ ದ. ಕ. ಜಿಲ್ಲಾ 25 ನೇ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭ ಫೆ.5 ರಂದು ದ. ಕ. ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಎಂ. ಪಿ. ಶ್ರೀನಾಥ್ ವಹಿಸಿದ್ದರು.
ಮುಂಬಾಯಿ ವಿಶ್ವ ವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಪಕ ತಾಳ್ತಜೆ ವಸಂತ ಕುಮಾರ ಸಮಾರೋಪ ಭಾಷಣ ಗೈದರು. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಘನ ಉಪಸ್ಥಿತರಿದ್ದರು. ಸಮ್ಮೇಳನದ ಸರ್ವಾಧ್ಯಕ್ಷರು ಹೇಮಾವತಿ ವಿ. ಹೆಗ್ಗಡೆ ಅಧ್ಯಕ್ಷೀಯ ನುಡಿ ಮಾತನಾಡಿದರು. ಉಡುಪಿ ಜಿಲ್ಲಾ ಕ. ಸಾ. ಪ. ಅಧ್ಯಕ್ಷ ನೀಲಾಧರ ಸುರೇಂದ್ರ ಅಡಿಗ ಮುಖ್ಯ ಅಭ್ಯಾಗರರಾಗಿ ಭಾಗವಹಿಸಿದ್ದರು. ಸಮ್ಮೇಳನ ಸಂಯೋಜನಾ ಸಮಿತಿಯ ಗೌರವ ಅಧ್ಯಕ್ಷ ಡಿ. ಹರ್ಷೇಂದ್ರ ಕುಮಾರ್, ಅಧ್ಯಕ್ಷ ಶರತ್ ಕೃಷ್ಣ ಪಡುವೆಟ್ನಾಯ, ರಾಜ್ಯ ಕ. ಸಾ. ಪ. ಸದಸ್ಯ ಮಾಧವ ಎಂ. ಕೆ. ಜಿಲ್ಲಾ ಕ. ಸಾ. ಪ. ಗೌರವ ಕಾರ್ಯದರ್ಶಿ ರಾಜೇಶ್ವರಿ ಎಂ.ಉಜಿರೆ ಗ್ರಾ. ಪ. ಅಧ್ಯಕ್ಷೆ ಪುಷ್ಪಾವತಿ ಆರ್. ಶೆಟ್ಟಿ, ವಿವಿಧ ತಾಲೂಕಿನ ಅಧ್ಯಕ್ಷರುಗಳು ಉಪಸ್ಥಿತರಿದ್ದರು. ವಿವಿಧ ಕ್ಷೇತ್ರದಲ್ಲಿ ಸಾಧನೆ ಗೈದ 12 ಮಂದಿಯನ್ನು ಸನ್ಮಾನಿಸಲಾಯಿತು. ತಾಲೂಕು ಕ ಸಾ. ಪ. ಅಧ್ಯಕ್ಷ ಡಿ.ಯದುಪತಿ ಗೌಡ ಸ್ವಾಗತಿಸಿ, ಸಮ್ಮೇಳನ ಸಂಯೋಜನಾ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ಭಟ್ ಬೆಳಾಲು ವಂದಿಸಿದರು. ದೇವುದಾಸ್ ನಾಯಕ್ ಮತ್ತು ಅಜಿತ್ ಕುಮಾರ್ ಕೊಕ್ರಾಡಿ ನಿರೂಪಿಸಿದರು. ಬೆಳಿಗ್ಗೆಯಿಂದ ವಿವಿಧ ಗೋಷ್ಠಿಗಳು ನಡೆದಿತ್ತು