Site icon Suddi Belthangady

ಲಾಯಿಲ ಪುತ್ರಬೈಲು ಗ್ರಂಥಾಲಯ ಕಟ್ಟಡಕ್ಕೆ ಶಿಲಾನ್ಯಾಸ

ಬೆಳ್ತಂಗಡಿ: ಕೆಆರ್ ಡಿಎಲ್ ಗ್ರಾಮ ಪಂಚಾಯತ್ ಲಾಯಿಲ ಸಹಕಾರದಲ್ಲಿ ಪರಿಶಿಷ್ಟ ಜಾತಿ ಪಂಗಡಗಳ ಯೋಜನೆಯಡಿಯಲ್ಲಿ ಲಾಯಿಲ ಗ್ರಾಮದ ಪುತ್ರಬೈಲು ಎಂಬಲ್ಲಿ ರೂ. 10 ಲಕ್ಷ ಅನುದಾನದ ಗ್ರಂಥಾಲಯಕ್ಕೆ ಶಿಲಾನ್ಯಾಸ ನೆರವೇರಿತು. ಗ್ರಾಮ ಪಂಚಾಯತ್ ಅಧ್ಯಕ್ಷೆ ಆಶಾ ಸಲ್ದಾನ ಶಿಲಾನ್ಯಾಸ ನೆರವೇರಿಸಿ ಗ್ರಾಮ ಪಂಚಾಯತ್ ಗ್ರಾಮದ ಸಮಗ್ರ ಅಭಿವೃದ್ಧಿಯ ಬಗ್ಗೆ ಯೋಜನೆಗಳನ್ನು ಸಿದ್ಧಪಡಿಸಿಕೊಂಡು ಹಂತ ಹಂತವಾಗಿ ಅಭಿವೃದ್ಧಿಯತ್ತ ಚಿಂತನೆ ನಡೆಸಲಾಗುವುದು ಎಂದರು. ಉಪಾಧ್ಯಕ್ಷ ಗಣೇಶ್ ಆರ್ ಮಾತನಾಡಿ ಈಗಾಗಲೇ ಗ್ರಾಮಗಳಲ್ಲಿ ಹಲವಾರು ಅಭಿವೃದ್ಧಿ ಕೆಲಸಗಳು ಪೂರ್ಣಗೊಂಡಿದ್ದು ಪಂಚಾಯತ್ ಸದಸ್ಯರುಗಳ ಹಾಗೂ ಗ್ರಾಮಸ್ಥರ ಸಹಕಾರದಲ್ಲಿ ಇನ್ನಷ್ಟು ಅಭಿವೃದ್ಧಿ ಪರ ಯೋಜನೆಗಳು ಅನುಷ್ಠಾನವಾಗಲಿದೆ ಎಂದರು.
ಮಸ್ತಕದ ಹಸಿವನ್ನು ನೀಗಿಸಿ ಜ್ಞಾನ ಭಂಡಾರ ಹೆಚ್ಚಿಸಲು ಇಂತಹ ಗ್ರಂಥಾಲಯಗಳು ಸಹಕಾರಿಯಾಗಲಿದೆ ಆದ್ದರಿಂದ ಗ್ರಾಮಗಳಲ್ಲಿ ಸುಸಜ್ಜಿತ ಗ್ರಂಥಾಲಯಗಳನ್ನು ನಿರ್ಮಿಸಬೇಕು ಈ ಮೂಲಕ ಸಾರ್ವಜನಿಕರು ಓದುವ ಗೀಳನ್ನು ಹೆಚ್ಚಿಸಿಕೊಳ್ಳಬೇಕು. ಲಾಯಿಲ ಗ್ರಾಮದ ಈ ಗ್ರಂಥಾಲಯ ಎಲ್ಲ ಓದುಗರನ್ನು ಆಕರ್ಷಿಸಿ ತಾಲೂಕಿನಲ್ಲೇ ಮಾದರಿ ಗ್ರಂಥಾಲಯವಾಗಿ ಮೂಡಿಬರಲಿ ಎಂದು ಸದಸ್ಯ ಪ್ರಸಾದ್ ಶೆಟ್ಟಿ ಅಭಿಪ್ರಾಯ ಪಟ್ಟರು. ಸದಸ್ಯ ದಿನೇಶ್ ಶೆಟ್ಟಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರುಗಳಾದ ಮಹೇಶ್ ಕುಲಾಲ್, ಸವಿತ ಶೆಟ್ಟಿ, ಹರಿಕೃಷ್ಣ, ಸೇರಿದಂತೆ , ರಾಜೇಶ್ ಶೆಟ್ಟಿ, ಗಣೇಶ್ ಸಪಲ್ಯ, ಗುತ್ತಿಗೆದಾರ ರಮೇಶ್ ಲಾಯಿಲ ,ಸುಂದರ್ ಪುತ್ರಬೈಲ್, ಸುರೇಶ್ ಬೈರ ಪುತ್ರಬೈಲು, ಯಶೋಧ ರಾಘವೇಂದ್ರ ನಗರ, ಪಂಚಾಯತ್ ಸಿಬ್ಬಂದಿಗಳಾದ ಮೋಹನ್, ಹರ್ಷಿತಾ, ಹಾಗೂ ಸ್ಥಳೀಯರು ಉಪಸ್ಥಿತರಿದ್ದರು. ಜಾನಪದ ಕಲಾವಿದ ಉದಯ್ ಕುಮಾರ್ ಲಾಯಿಲ, ಕಾರ್ಯಕ್ರಮ ನಿರ್ವಹಿಸಿ ಧನ್ಯವಾದವಿತ್ತರು.

Exit mobile version