Site icon Suddi Belthangady

ಅನುಗ್ರಹದಲ್ಲಿ ಯು.ಕೆ.ಜಿ ಮಕ್ಕಳ ಪದವಿ ಪ್ರದಾನ ಸಮಾರಂಭ

ಉಜಿರೆ: ಅನುಗ್ರಹ ಶಿಕ್ಷಣ ಸಂಸ್ಥೆಯಲ್ಲಿ ಯು.ಕೆ.ಜಿ ಮಕ್ಕಳ ಪದವಿ ಪ್ರದಾನ ಸಮಾರಂಭವು ಶಾಲಾ ಸಂಚಾಲಕರಾದ ವಂ|ಫಾ| ಜೇಮ್ಸ್ ಡಿಸೋಜಾರವರ ಆಧ್ಯಕ್ಷತೆಯಲ್ಲಿ ಶಾಲಾ ಸಭಾಭವನದಲ್ಲಿ ನಡೆಯಿತು. ಪುಟಾಣಿಗಳ ಪ್ರಾರ್ಥನಾ ನೃತ್ಯದ ನಂತರ ಯು.ಕೆ.ಜಿ. ಪುಟಾಣಿಗಳು ತಮ್ಮ ಮುಗ್ಧ ಮಾತಿನ ಮೂಲಕ ಅತಿಥಿಗಳನ್ನು ಸ್ವಾಗತಿಸಿದರು. ಪ್ರಾಂಶುಪಾಲರಾದ ವಂ| ಫಾ|ವಿಜಯ್ ಲೋಬೋ ರವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಮುಂದಿನ ಶೈಕ್ಷಣಿಕ ವರ್ಷದಿಂದ ಶಾಲೆಯಲ್ಲಿ ಶಿಶು ಪಾಲನಾ ಕೇಂದ್ರವನ್ನು ತೆರೆಯುವುದಾಗಿ ತಿಳಿಸಿ ಕಾರ್ಯಕ್ರಮಕ್ಕೆ ಸಹಕಾರವನ್ನಿತ್ತ ಎಲ್ಲರನ್ನೂ ಅಭಿನಂದಿಸಿದರು.
ಅನುಗ್ರಹದಲ್ಲಿ ಶಿಶು ಪಾಲನಾ ಕೇಂದ್ರ : ಪ್ರಸ್ತುತ 2023ನೇ ಸಾಲಿನ ಜೂನ್ ತಿಂಗಳಿಂದ ಅನುಗ್ರಹ ಶಿಕ್ಷಣ ಸಂಸ್ಥೆಯಲ್ಲಿ ಶಿಶು ವಿಹಾರ- ಶಿಶು ಪಾಲನಾ ಕೇಂದ್ರ ತೆರೆಯುವುದಾಗಿ, ನಾಲ್ಕು ವರ್ಷ ಕೆಳಗಿನ ವಯೋಮಾನದ ಚಿಕ್ಕ ಮಕ್ಕಳನ್ನು ಉತ್ತಮ ರೀತಿಯಲ್ಲಿ ನೋಡಿಕೊಳ್ಳುವುದರ ಜೊತೆಗೆ ಚಿಕ್ಕ ಪ್ರಾಯದಲ್ಲೇ ಅವರನ್ನು ಶೈಕ್ಷಣಿಕವಾಗಿ ಹುರಿದುಂಬಿಸುವ ಕೆಲಸವನ್ನು ಈ ಮೂಲಕ ಮಾಡಲಿದ್ದೇವೆ ಎಂದು ಫಾ| ವಿಜಯ್ ಲೋಬೋ ರವರು ಹೇಳಿದರು.


ಈ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ವಂ| ಫಾ| ಜೇಮ್ಸ್ ಡಿ ಸೋಜಾ, ಪ್ರವೀಣ್ ಫೆರ್ನಾಂಡೀಸ್, ರವಿಕುಮಾರ್, ಆನಂದಕೃಷ್ಣರು ಬಹುಮಾನ ವಿತರಿಸಿದರು. ಮುಖ್ಯ ಅತಿಥಿಗಳಾದ ಸೈಂಟ್ ಫಿಲೋಮಿನಾ ಕಾಲೇಜಿನ ಉಪನ್ಯಾಸಕಿ ಡಾ. ಡಿಂಪಲ್ ಜೆನಿಫರ್ ಫೆರ್ನಾಂಡೀಸ್ ರವರು ಮಕ್ಕಳಿಗೆ ಪದವಿ ಪ್ರದಾನ ಮಾಡಿ ಮಕ್ಕಳಿಗೆ ಶುಭ ಹಾರೈಸಿದರು. ಮಕ್ಕಳಿಗೆ ಶುಭ ಹಾರೈಸುತ್ತಾ ಪದವಿ ಪ್ರದಾನ ಗೀತೆಯನ್ನು ಹಾಡಲಾಯಿತು. ಸಮಾರಂಭದ ಆಧ್ಯಕ್ಷ ವಂ| ಫಾ| ಜೇಮ್ಸ್ ಡಿ ಸೋಜಾರವರು ಆಧ್ಯಕ್ಷೀಯ ಭಾಷಣ ಮಾಡುತ್ತಾ ಕಾರ್ಯಕ್ರಮಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ ಮಕ್ಕಳಿಗೆ ಶುಭ ಕೋರಿದರು. ಯು.ಕೆ.ಜಿ ಪುಟಾಣಿಗಳು ಧನ್ಯವಾದವನ್ನಿತ್ತು ಕಾರ‍್ಯಕ್ರಮಕ್ಕೆ ಮೆರಗನ್ನು ನೀಡಿದರು.


ಕು|ಶ್ರದ್ಧಾ ನಿರೂಪಿಸಿದ ಕಾರ್ಯಕ್ರಮದ ನಂತರ ಪುಟಾಣಿ ಮಕ್ಕಳಿಂದ ವೈವಿದ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.

Exit mobile version