Site icon Suddi Belthangady

ಉಜಿರೆ: ದ .ಕ. ಜಿಲ್ಲಾ 25 ನೇ ಸಾಹಿತ್ಯ ಸಮ್ಮೇಳನಕ್ಕೆ ಜಿಲ್ಲಾಧಿಕಾರಿಯಿಂದ ಚಾಲನೆ

ಉಜಿರೆ: : “ಕನ್ನಡವು ಶ್ರೇಷ್ಠ ಭಾಷೆಯಾಗಿದ್ದು, ಇದನ್ನು ಉಳಿಸಿ, ಬೆಳೆಸಿ, ಪಸರಿಸಿ,ಇದರ ಕಂಪನ್ನು ಇನ್ನಷ್ಟು ಎತ್ತರಕ್ಕೆ ಏರಿಸಲು ಸಾಹಿತ್ಯ ಸಮ್ಮೇಳನವು ಸಹಕಾರಿಯಾಗಲಿ. ಪ್ರತಿ ವ್ಯಕ್ತಿಗೂ ಕನ್ನಡದ ಪರಿಚಯವನ್ನು, ಸಾಹಿತ್ಯಾಸಕ್ತರಿಗೆ ಪ್ರೋತ್ಸಾಹವನ್ನು ನೀಡುತ್ತಿರುವ ಸಾಹಿತ್ಯ ಸಮ್ಮೇಳನದ ಸಂದೇಶ ಎಲ್ಲೆಡೆ ಪಸರಿಸಲಿ ” ಎಂದು ದ. ಕ ಜಿಲ್ಲಾಧಿಕಾರಿ ರವಿಕುಮಾರ್ .ಆರ್. ಹೇಳಿದರು.
ಅವರು ಫೆ 3 ರಂದು ಉಜಿರೆಯ ಶ್ರೀ ಕೃಷ್ಣಾನುಗ್ರಹ ಸಭಾಭವನದ ಕುಂಬ್ಳೆ ಸುಂದರ ರಾವ್ ಪ್ರಾಂಗಣದಲ್ಲಿ ದ ಕ. ಜಿಲ್ಲಾ 25ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಶುಭ ಆಶೀರ್ವಾದದಿಂದ ನಡೆಯುತ್ತಿರುವ ಈ ಕಾರ್ಯಕ್ರಮ ಯಶಸ್ವಿಯಾಗಿ ಜರಗಲಿದ್ದು,ಉತ್ತಮ ಆಶಯವನ್ನು ಹೊಂದಿದೆ. ಕರ್ನಾಟಕದಲ್ಲಿ ಪ್ರತಿಯೊಬ್ಬರೂ ಕನ್ನಡ ಭಾಷೆ ಕಲಿತು,ಸಾಹಿತಿಗಳು,ವರ್ತಕರು ಎಲ್ಲರೂ ಕನ್ನಡವೇ ಶ್ರೇಷ್ಠ ಭಾಷೆಯೆಂಬ ಸಂದೇಶವನ್ನು ಎಲ್ಲೆಡೆ ಬಿತ್ತರಿಸಲಿ . ಜಿಲ್ಲಾಡಳಿತದಿಂದ ಸಮ್ಮೇಳನಕ್ಕೆ ಬೇಕಾಗುವ ಅಗತ್ಯ ಸಹಕಾರ ನೀಡಲಾಗುವುದು” ಎಂದು ಹೇಳಿದರು.


ಉಜಿರೆ ಗ್ರಾಪಂ ಅಧ್ಯಕ್ಷೆ ಪುಷ್ಪಾವತಿ ಆರ್.ಶೆಟ್ಟಿ ಸಮ್ಮೇಳನ ಧ್ವಜಾರೋಹಣ ಹಾಗೂ ಕ. ಸಾ. ಪ ಜಿಲ್ಲಾಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್ ಪರಿಷತ್ತಿನ ಧ್ವಜಾರೋಹಣ ನೆರವೇರಿಸಿದರು. ಸಮ್ಮೇಳನ ಸಂಯೋಜನಾ ಸಮಿತಿ ಅಧ್ಯಕ್ಷ ಶರತ್ ಕೃಷ್ಣ ಪಡುವೆಟ್ನಾಯ, ಜಿಲ್ಲಾ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ರಾಜೇಶ್ವರಿ ಎಂ. ಹಾಗೂ ಸದಸ್ಯರು, ತಾಲೂಕು ಘಟಕದ ಅಧ್ಯಕ್ಷ ಯದುಪತಿ ಗೌಡ, ವಿವಿಧ ಸಮಿತಿಗಳ ಸಂಚಾಲಕರಾದ ಡಾ.ಬಿ.ಎ.ಕುಮಾರ ಹೆಗ್ಡೆ,ಡಾ.ಭಾಸ್ಕರ್ ಹೆಗಡೆ, ಡಾ. ದಿವಾಕೊಕ್ಕಡ, ಗಂಗಾರಾಣಿ ಜೋಶಿ, ಯತೀಶ್ ಕುಮಾರ್, ಡಾ.ಬಿ.ರಾಜೇಶ್,ಡಾ. ಪ್ರಸನ್ನ ಕುಮಾರ್ ಐತಾಳ್,ಗೋಪಾಲಕೃಷ್ಣ ಕಾಂಚೋಡು,ಹರ್ಷ ಕುಮಾರ್ ಕೆ., ರಾಮಚಂದ್ರ ಶೆಟ್ಟಿ, ಜಗನ್ನಾಥ ಶೆಟ್ಟಿ, ತಂಗಚ್ಚನ್ ಮತ್ತಿತರರು ಉಪಸ್ಥಿತರಿದ್ದರು.

ನಿವೃತ್ತ ಸೈನಿಕರ ಸಂಘದ ಜಗನ್ನಾಥ ಶೆಟ್ಟಿ ಮತ್ತು ಗೋಪಾಲಕೃಷ್ಣ ಕಾಂಚೋಡು ಮತ್ತು ತಂಡ ಜಿಲ್ಲಾಧಿಕಾರಿಗಳಿಗೆ ಗೌರವ ವಂದನೆ ಸಲ್ಲಿಸಿ ಧ್ವಜಾರೋಹಣ ಕಾರ್ಯಕ್ಕೆ ನೆರವಾಗಿ ರಾಷ್ಟ್ರಗೀತೆ ಹಾಡಿದರು. ಸಮ್ಮೇಳನದ 3 ದಿನಗಳ ಕಾರ್ಯಕ್ರಮ ಗಳೂ ಯಾವುದೇ ಅಡ್ಡಿ,ಆತಂಕಗಳಿಲ್ಲದೆ ನಿರಾತಂಕವಾಗಿ ಯಶಸ್ವಿಯಾಗಿ ನಡೆಯುವಂತೆ ಶ್ರೀ ಜನಾರ್ದನ ಸ್ವಾಮಿ ಸನ್ನಿಧಿಯಲ್ಲಿ ಶರತ್ ಕೃಷ್ಣ ಪಡುವೆಟ್ನಾಯರ ನೇತೃತ್ವದಲ್ಲಿ ವಿಶೇಷವಾಗಿ ಪ್ರಾರ್ಥಿಸಿ,ಸರ್ವಸೇವೆ ಸಮರ್ಪಿಸಲಾಯಿತು.


ಸಮ್ಮೇಳನದ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ಭಟ್ ಬೆಳಾಲು ಸ್ವಾಗತಿಸಿದರು. ಬಂಗಾಡಿ ಹಿ. ಪ್ರಾ ಶಾಲೆಯ ಶಿಕ್ಷಕ ಅಮಿತಾನಂದ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು.

Exit mobile version