Site icon Suddi Belthangady

ಮೊಗ್ರು ಗ್ರಾಮದಲ್ಲಿ ಜಾನುವಾರುಗಳಿಗೆ ಚರ್ಮಗಂಟು ರೋಗ ಪತ್ತೆ

ಮೊಗ್ರು: ಬಂದಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮೊಗ್ರು ಗ್ರಾಮದ 2 ನೇ ವಾರ್ಡ್ ನ ಮುರ ಪಚ್ಚಡ್ಕ ನಿವಾಸಿ ಬಿತೂರು ಎಂಬವರ ಸುಮಾರು 30 ದನಗಳಲ್ಲಿ ಚರ್ಮಗಂಟು ರೋಗ ಸಂಭವಿಸಿದ್ದು, ರೋಗದ ತೀವ್ರತೆಯಿಂದ 7 ದನಗಳು ಪ್ರಾಣಬಿಟ್ಟಿದೆ. ಬಂದಾರು ಗ್ರಾಮ ಪಂಚಾಯತ್ ವತಿಯಿಂದ ಸತ್ತಿರುವ ದನಗಳನ್ನು ಜೆಸಿಬಿ ಮೂಲಕ ಗುಂಡಿ ತೆಗದು ದಫನ ಮಾಡಲಾಯಿತು.

ಈ ಸಂದರ್ಭದಲ್ಲಿ ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪರಮೇಶ್ವರಿ ಕೆ.ಗೌಡ, ಉಪಾಧ್ಯಕ್ಷರಾದ ಗಂಗಾಧರ, ಸದಸ್ಯರಾದ ಬಾಲಕೃಷ್ಣ ಗೌಡ ಮುಗೇರಡ್ಕ, ದಿನೇಶ್ ಗೌಡ ಖಂಡಿಗ, ಶ್ರೀಮತಿ ಮಂಜುಶ್ರೀ, ಸಿಬ್ಬಂದಿ ಪ್ರವೀಣ್ ಗೌಡ, ಹಾಗೂ ಸ್ಥಳೀಯರಾದ ಮುಸನ್ ಪಚ್ಚಡ್ಕ ,ಮುರ ಉಪಸ್ಥಿತರಿದ್ದರು. ಪಶುವೈದ್ಯರಿಗೆ ಮಾಹಿತಿ‌ ನೀಡಲಾಗಿದೆ.

Exit mobile version