Site icon Suddi Belthangady

ಫೆ.8-13 ಮಲೆಬೆಟ್ಟು ಶ್ರೀ ವನದುರ್ಗಾ ದೇವಸ್ಥಾನ ವಾರ್ಷಿಕ ಜಾತ್ರೆ

ಮಲೆಬೆಟ್ಟು: ಕೊಯ್ಯೂರು ಗ್ರಾಮದ ಬದಿನಡೆ ಮಲೆಬೆಟ್ಟು ಶ್ರೀ ವನದುರ್ಗಾ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವವು ಫೆ. 8ರಿಂದ 13ರವರೆಗೆ ನಡೆಯಲಿದೆ.
ಫೆ. 8ರಂದು ದೇವತಾ ಪ್ರಾರ್ಥನೆ, ಶ್ರೀ ಗಣಯಾಗ, ತೋರಣ ಮುಹೂರ್ತ, ಶ್ರೀ ನವಕ ಪ್ರಧಾನ ಕಲಶಾಭಿಷೇಕ, ಧ್ವಜಾರೋಹಣ, ಪ್ರಸನ್ನ ಪೂಜೆ, ಅನ್ನಸಂತರ್ಪಣೆ, ನಾಗದೇವರ ಸನ್ನಿಧಿಯಲ್ಲಿ ಆಶ್ಲೇಷಾ ಬಲಿ, ಪ್ರಸನ್ನ ಪೂಜೆ, ರಾತ್ರಿ ಕೊಯ್ಯೂರು ಸ.ಉ.ಹಿ.ಪ್ರಾ ಶಾಲೆಯ ವಿದ್ಯಾರ್ಥಿಗಳಿಂದ ನೃತ್ಯ ವೈವಿಧ್ಯ ಹಾಗೂ ರಾತ್ರಿ ರಂಗಪೂಜೆ, ಶ್ರೀ ದೇವಿ ಉತ್ಸವ, ನಿತ್ಯಬಲಿ.
ಫೆ.9 ರಂದು ಬೆಳಿಗ್ಗೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಶ್ರೀದೇವಿ ಉತ್ಸವ, ದರ್ಶನ ಬಲಿ, ಕಲಶಾಭಿಷೇಕ, ಪ್ರಸನ್ನ ಪೂಜೆ, ಅನ್ನಸಂತರ್ಪಣೆ, ರಾತ್ರಿ ೭ರಿಂದ ಯಕ್ಷಗಾನ, ರಾತ್ರಿ 8.30ರಿಂದ ಶ್ರೀದೇವಿ ಉತ್ಸವ, ರಂಗಪೂಜೆ, ಭೂತಬಲಿ, ಶಯನೋತ್ಸವ, ಕವಾಟ ಬಂಧನ. ಫೆ.10 ರಂದು ಕವಾಟ ಉದ್ಘಾಟನಾ, ಕಲಶಾಭಿಷೇಕ, ಪ್ರಸನ್ನಪೂಜೆ, ಚೂರ್ಣೋತ್ಸವ, ಬಟ್ಟಲು ಕಾಣಿಕೆ, ಮಧ್ಯಾಹ್ನ ಪಲ್ಲಪೂಜೆ, ಮಹಾ ಅನ್ನಸಂತರ್ಪಣೆ, ಕಳೆಂಜ ಮೂಲಸ್ಥಾನದಿಂದ ಭಂಡಾರದ ಆಗಮನ, ರಾತ್ರಿ ಶ್ರೀ ದೇವಿಯ ಉತ್ಸವ, ಕೆರೆಕಟ್ಟೆ ಪೂಜೆ, ಅವಭೃತ, ಧ್ವಜಾವರೋಹಣ, ಪ್ರಸನ್ನ ಪೂಜೆ, ರಾತ್ರಿ 7 ರಿಂದ ಸಪ್ತ ಸ್ವರಗಳ ಗಾನಯಾನ ತಂಡದವರಿಂದ ಭಕ್ತಿ ರಸಮಂಜರಿ ಕಾರ್ಯಕ್ರಮ, ರಾತ್ರಿ 12ರಿಂದ ಶ್ರೀ ಧರ್ಮದೈವಗಳ ನೇಮೋತ್ಸವ. ಶ್ರೀ ಧರ್ಮದೈವ ವಾರಾಹಿ, ಶ್ರೀ ಧೂಮಾವತಿ ನೇಮೋತ್ಸವ, ಶ್ರೀ ಕೊಡಮಣಿತ್ತಾಯ ಸಹಿತ ಧರ್ಮದೈವಗಳ ನೇಮೋತ್ಸವ. ಫೆ.11 ರಂದು ಶ್ರೀ ಭಂಡಾರದ ನಿರ್ಗಮನ, ಸಂಪ್ರೋಕ್ಷಣೆ, ಪ್ರಸನ್ನ ಪೂಜೆ, ರಾತ್ರಿ 8 ರಿಂದ ಮೂಲಸ್ಥಾನ ಕಳೆಂಜ ಗುತ್ತು ದೈವಸ್ಥಾನದಲ್ಲಿ ಧರ್ಮದೈವ ವಾರಾಹಿ ನೇಮೋತ್ಸವ, ಕಲ್ಕುಡ, ಕಲ್ಲುರ್ಟಿ ಗುಳಿಗ ನೇಮೋತ್ಸವ, ಫೆ.13 ರಂದು ಶ್ರೀ ಕಲಶಾಭಿಷೇಕ, ಪ್ರಸನ್ನಪೂಜೆ ಮಧ್ಯಾಹ್ನ 12.30 ರಿಂದ ದೇವಾಲಯದಲ್ಲಿ ಸಂಕ್ರಾಂತಿ ಪೂಜೆ, ಅನ್ನಸಂತರ್ಪಣೆ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

Exit mobile version