Site icon Suddi Belthangady

ಅಂಡಿಂಜೆಯಲ್ಲಿ ಆಯುಷ್ಯ ಕ್ಲಿನಿಕ್ ಶುಭಾರಂಭ

ಅಂಡಿಂಜೆ : ಇಲ್ಲಿಯ ಬಿ. ಅರ್.ಜಿ. ರೆಸಿಡೆನ್ಸಿಯಲ್ಲಿ ಆಯುಷ್ಯ ಕ್ಲಿನಿಕ್ ಜ.27 ರಂದು ಶುಭಾರಂಭಗೊಂಡಿತು. ಜನಜಾಗೃತಿ ವೇದಿಕೆಯ ಸ್ಥಾಪಕ ಅಧ್ಯಕ್ಷ ವಸಂತ ಸಾಲಿಯಾನ್ ಕಾಪಿನಡ್ಕ ಉದ್ಘಾಟಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಜನಜಾಗೃತಿ ಮಾಜಿ ಅಧ್ಯಕ್ಷ ಪಿ. ಕೆ. ರಾಜು ಪೂಜಾರಿ ಕಾಶಿಪಟ್ಣ, ಡಾ. ವಿಷ್ಣು ಕುಮಾರ್ ಹೆಗ್ಡೆ ಕೊಕ್ರಾಡಿ, ಬಿಜೆಪಿ ಮಂಡಲ ಅಧ್ಯಕ್ಷ ಜಯಂತ ಕೋಟ್ಯಾನ್, ಅಂಡಿಂಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಂತಿ ಲೋಕಯ್ಯ ಪೂಜಾರಿ, ಮಾಜಿ ಅಧ್ಯಕ್ಷ ಮೋಹನ ಅಂಡಿಂಜೆ ಸೂರ್ಯ ನಾರಾಯಣ ಡಿ. ಕೆ., ನಿವೃತ್ತ ಶಿಕ್ಷಕ ದೇಜಪ್ಪ ಗೌಡ, ಪಂಚಾಯತ್ ಸದಸ್ಯರು, ಇನ್ನಿತರ ಗಣ್ಯರು, ಹಿತೈಷಿಗಳು, ಕುಟುಂಬ ವರ್ಗದವರು ಆಗಮಿಸಿ ಶುಭ ಹಾರೈಸಿದರು. ಡಾ.ಸೃಜನ್ ಗೌಡ ಕೆ., ಕೆ.ನವೀನ್ ಕುಮಾರ್ ಮತ್ತು ಶ್ರೀಮತಿ ಭಾರತಿ ಶಿವ ಕೃಪಾ ಕೊಕ್ರಾಡಿ ಆಗಮಿಸಿದ ಗಣ್ಯರನ್ನು ಸ್ವಾಗತಿಸಿದರು.

Exit mobile version