ಕಲ್ಮಂಜ :ಕಲ್ಮಂಜ ಗ್ರಾಮದ ಸಂಗಮ ಕ್ಷೇತ್ರ ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನದ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವಕ್ಕೆ ವಿವಿಧ ಉದ್ಘಾಟನೆಗಳೊಂದಿಗೆ ಜ.31ರಂದು ಚಾಲನೆಗೊಂಡಿತು.
ಬೆಳಿಗ್ಗೆ ತೋರಣ ಮುಹೂರ್ತ, ಬಳಿಕ ನಿಡಿಗಲ್ ಶ್ರೀ ಶಾಂತಿನಾಥ್ ಸ್ವಾಮಿ ಬಸದಿಯ ಮೊಕ್ತೇಸರ ರತನ್ ಕುಮಾರ್ ಜೈನ್ ಕಚೇರಿಯನ್ನು, ಉಜಿರೆ ಶ್ರೀ ಜನಾರ್ಧನ ದೇವಸ್ಥಾನದ ಶರತ್ ಕೃಷ್ಣ ಪಡುವೆಟ್ನಾಯ ಉಗ್ರಾಣವನ್ನು, ಕಲ್ಮಂಜ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀಧರ ಎಂ. ಹೊರೆಕಾಣಿಕೆ ಮೆರವಣಿಗೆಯನ್ನು, ಚಿಕ್ಕಮಗಳೂರು, ಬೆಂಗಳೂರು, ಹಾಸನ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ಸ್ಟೋನ್ ಕ್ರಷರ್ ಮಾಲಕ ಆರ್. ಬಸವರಾಜ್ ಅನ್ನಛತ್ರವನ್ನು ಉದ್ಘಾಟನೆ ಮಾಡಿದರು.
ಕಲ್ಮಂಜ ಗ್ರಾಮಸ್ಥರು ಮೆರವಣಿಗೆ ಮೂಲಕ ಹೊರೆಕಾಣಿಕೆ ಸಮರ್ಪಿಸಿದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣಪ್ಪ ಗುಡಿಗಾರ್, ಸದಸ್ಯರು, ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಧ್ಯಕ್ಷ ತುಕಾರಾಮ ಸಾಲಿಯಾನ್ ಅರ್ಲ, ಪ್ರಧಾನ ಕಾರ್ಯದರ್ಶಿ ಮಂಜುನಾಥ ಶೆಟ್ಟಿ ನಿಡಿಗಲ್, ಕೋಶಾಧಿಕಾರಿ ಪಾಂಡುರಂಗ ಕಾಕತ್ಕರ್, ಉಪಾಧ್ಯಕ್ಷ ರವಿಕುಮಾರ್ ಭಟ್, ಶ್ರೀನಿವಾಸ್ ರಾವ್, ಶಶಿಕಿರಣ್ ಜೈನ್, ಗೋಪಾಲಕೃಷ್ಣ ಗುಲ್ಲೊಡಿ, ಅರ್ಚಕ ದಿನೇಶ್ ಭಟ್, ವಿವಿಧ ಉಪ ಸಮಿತಿಗಳ ಸಂಚಾಲಕರು, ಸದಸ್ಯರು, ಊರ ಪರ ಊರ ಭಕ್ತರು ಹಾಜರಿದ್ದರು.