ನಾಳ : ಇಲ್ಲಿಯ ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವರ್ಷವಧಿ ಜಾತ್ರಾ ಮಹೋತ್ಸವವು ದೇವಳದ ತಂತ್ರಿಗಳಾದ ಬ್ರಹ್ಮ ಶ್ರೀ ಬಾಲಕೃಷ್ಣ ಪಾಂಗಾಣ್ಣಾಯರವರ ಮಾರ್ಗದರ್ಶನದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕರಾದ ವೇ.ಮೂ.ರಾಘವೇಂದ್ರ ಅಸ್ರಣ್ಣರ ನೇತ್ರತ್ವದಲ್ಲಿ ಧಾರ್ಮಿಕ ಪೂಜಾ- ವಿಧಿ- ವಿಧಾನಗಳೊಂದಿಗೆ ಜ.24 ರಂದು ಧ್ವಜಾರೋಹಣ ಮೂಲಕ ಚಾಲನೆಗೊಂಡು ಜ.29 ರಂದು ರಾತ್ರಿ ಧ್ವಜಾವರೋಹಣದ ಮೂಲಕ ಸಂಪನ್ನಗೊಂಡಿದೆ.
ಜ. 24 ರಂದು ಭಕ್ತಾದಿಗಳಿಂದ ಹಸಿರು ಹೊರೆಕಾಣಿಕೆ ಸಮರ್ಪಣೆ,ಧ್ವಜಾರೋಹಣ ಮಧ್ಯಾಹ್ನ ಮಹಾಪೂಜೆ, ನಿತ್ಯಬಲಿ ಮತ್ತು ಅನ್ನಸಂತರ್ಪಣೆ., ದೇವರ ಬಲಿ ಹೊರಟು ಉತ್ಸವ, ವಸಂತಕಟ್ಟೆಯಲ್ಲಿ ಪೂಜೆ, ಮಹಾಪೂಜೆ-ನಿತ್ಯಬಲಿ, ದೀಪದ ಬಲಿ.
ಜ.25 ರಂದು ಉಷಾಕಾಲ ಪೂಜೆ, ಅಲಂಕಾರ ಪೂಜೆ ಮಧ್ಯಾಹ್ನ ಮಹಾಪೂಜೆ,ನಿತ್ಯಬಲಿ, ಸಂಜೆ ದೇವರ ಬಲಿ ಹೊರಟು ಕೆರೆಕಟ್ಟೆ ಉತ್ಸವ-ಮಹಾಪೂಜೆ, ನಿತ್ಯಬಲಿ-ದೀಪದ ಬಲಿ.
ಜ.26 ರಂದು ಬೆಳಿಗ್ಗೆ ಉಷಾಕಾಲ ಪೂಜೆ, ಅಲಂಕಾರ ಪೂಜೆ, ಮಧ್ಯಾಹ್ನ ಮಹಾಪೂಜೆ-ನಿತ್ಯಬಲಿ. ಸಂಜೆ ದೇವರ ಬಲಿ ಹೊರಟು, ಚಂದ್ರಮಂಡಲ ಉತ್ಸವ, ರಥಬೀದಿ ಕಟ್ಟೆ ಪೂಜೆ, ಪ್ರಸಾದ ವಿತರಣೆ, ಮಹಾಪೂಜೆ-ನಿತ್ಯಬಲಿ, ದೀಪದ ಬಲಿ.
ಜ. 27 ರಂದು ಬೆಳಿಗ್ಗೆ ದೇವರ ಉತ್ಸವ ಬಲಿ ಹೊರಡುವುದು, ದೇವರ ದರ್ಶನ ಬಲಿ, ಬಟ್ಟಲು ಕಾಣಿಕೆ, ದರ್ಶನ ಪ್ರಸಾದ, ಮಹಾಪೂಜೆ, ಸಂಜೆ ಶ್ರೀ ಕೊಡಮಣಿತ್ತಾಯ ಮತ್ತು ಪಿಲಿಚಾಮುಂಡಿ ದೈವಗಳ ಭಂಡಾರ ಇಳಿಯುವುದು, ರಥಕಲಶ ರಾತ್ರಿ ದೇವರ ಉತ್ಸವ ಬಲಿ-ಹೊರಟು ಉತ್ಸವ, ಕೊಡಮಣಿತ್ತಾಯ ದೈವದ ಗಗ್ಗರ ಸೇವೆ.ರಾತ್ರಿ ಮಹಾರಥೋತ್ಸವ ಹಾಗೂ ಶ್ರೀ ಭೂತ ಬಲಿ-ಕವಾಟ ಬಂಧನ.ರಾತ್ರಿ ಸಭಾ ವೇದಿಕೆಯಲ್ಲಿ ಧಾರ್ಮಿಕ ಆಶೀರ್ವಚನ, ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಪಾದಂಗಳವರು ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನ -ಶ್ರೀ ಎಡನೀರು ಮಠ.
ಜ.28 ರಂದು ಸುಲಗ್ನದಲ್ಲಿ ಕವಾಟೋದ್ಘಾನೆ,ದಿವ್ಯ ದರ್ಶನ, ಮಹಾಪೂಜೆ,ಚೂರ್ಣೋತ್ಸವ ಬಲಿ,ವಿಶೇಷ ಸೇವೆಗಳು,ಹರಕೆ ತುಲಾಭಾರ ಸೇವೆ,ಕೊಡಿಮರಕ್ಕೆ ಜಾನುವಾರುಗಳನ್ನು ಒಪ್ಪಿಸುವುದು.ಮಧ್ಯಾಹ್ನ ಅನ್ನಸಂತರ್ಪಣೆ. ಸಂಜೆ ದೇವರ ಬಲಿ ಹೊರಟು ಬಾಕಿಮಾರು ಗದ್ದೆಯಲ್ಲಿ ಪಿಲಿಚಾಮುಂಡಿ ದೈವದ ಭೇಟಿ ಮತ್ತು ಗಗ್ಗರ ಸೇವೆ, ಅವಭೃತ ಸ್ನಾನ. ರಾತ್ರಿ ಧ್ವಜಾವರೋಹಣ ಮಹಾ ಪೂಜೆ.
ಜ.29 ರಂದು ಬೆಳಿಗ್ಗೆ ಸಂಪ್ರೋಕ್ಷಣೆ,ಕಲಶಾಭಿಷೇಕ,ಮಹಾ ಪೂಜೆ, ಸಂಜೆ ಭಜನಾ ವರ್ಧಂತಿ,ಮಹಾರಂಗ ಪೂಜೆ,ಮಂತ್ರಾಕ್ಷತೆ, ಹಾಗೂ ಸುರತ್ಕಲ್ ಮಹಿಳಾ ಯಕ್ಷಗಾನ ಮಂಡಳಿ ದಾನಶೂರ ಕರ್ಣ ಯಕ್ಷಗಾನ ತಾಳಮದ್ದಳೆ ನಡೆಯುವ ಮೂಲಕ ವರ್ಷಾವಧಿ ಜಾತ್ರಾ ಮಹೋತ್ಸವ ಸಂಪನ್ನಗೊಂಡಿತು.
ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಭುವನೇಶ್ ಗೇರುಕಟ್ಟೆ, ಸದಸ್ಯರಾದ ವಸಂತ ಮಜಲು, ಜನಾರ್ದನ ಪೂಜಾರಿ ಗೇರುಕಟ್ಟೆ, ದಿನೇಶ್ ಗೌಡ ಕಲಾಯಿತೊಟ್ಟು, ಅಂಭಾ ಬಿ.ಆಳ್ವ ನಾಳ, ವಿಜಯ ಹೆಚ್ ಪ್ರಸಾದ್.ಕುಂಠಿನಿ, ಉಮೇಶ್ ಕೇಲ್ದಡ್ಕ, ರಾಜೇಶ್ ಶೆಟ್ಟಿ ಅಡ್ಡ ಕೊಡಂಗೆ, ಅಭಿವೃದ್ಧಿ ಸಮಿತಿ ಯಾದವ ಗೌಡ ಮುದ್ದುಂಜ, ಕಾರ್ಯದರ್ಶಿ ರಾಜೇಶ್ ಪೆಂರ್ಬುಡ, ಭಜನಾ ಮಂಡಳಿ ಅಧ್ಯಕ್ಷ ಉಮೇಶ್ ಶೆಟ್ಟಿ .ಸಂಬೊಳ್ಯ, ಶ್ರೀ ದುರ್ಗಾ ಮಾತೃ ಮಂಡಳಿ ಅಧ್ಯಕ್ಷೆ ರೀತಾ ಚಂದ್ರಶೇಖರ್ ನಾಳ,ಮೈಸೂರು ಉಧ್ಯಮಿ ಹೇಮಂತ್ ಕುಮಾರ್ ದಂಪತಿಗಳು, ಜಾತ್ರೋತ್ಸವ ಸಮಿತಿ ಪದಾಧಿಕಾರಿಗಳು, ನ್ಯಾಯತರ್ಪು, ಕಳಿಯ, ಓಡಿಲ್ನಾಳ ಗ್ರಾಮದ ಹಾಗೂ ಪರಊರ ಸಮಸ್ತ ಭಕ್ತಾದಿಗಳು, ವಿವಿಧ ಇಲಾಖೆಯ ಅಧಿಕಾರಿಗಳು,ಜನ ಪ್ರತಿನಿಧಿಗಳು ಹಾಗೂ ಧಾರ್ಮಿಕ ಸಂಸ್ಥೆಗಳು ಮುಖಂಡರು ಭಾಗವಹಿಸಿದ್ದರು.