Site icon Suddi Belthangady

ಬುಳೆಕ್ಕಾರ ಶಾರದಾಂಬಾ ಭಜನ ಮಂದಿರದಲ್ಲಿ ಭಜನಾ ವಾರ್ಷಿಕೋತ್ಸವ-ಧಾರ್ಮಿಕ ಸಭೆ

ವೇಣೂರು: ಕುಕ್ಕೇಡಿ ಗ್ರಾಮದ ಬುಳೆಕ್ಕಾರ ಶಾರದಾ ನಗರದಲ್ಲಿರುವ ಶ್ರೀ ಶಾರದಾಂಬಾ ಭಜನಾ ಮಂದಿರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ.ಯೋ. ಕುಕ್ಕೇಡಿ ಹಾಗೂ ಊರ ವಿವಿಧ ಸಂಘ ಸಂಸ್ಥೆಗಳ ಸಹಕಾರದಲ್ಲಿ 33ನೇ ವರ್ಷದ ಭಜನಾ ವಾರ್ಷಿಕೋತ್ಸವ, ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭೆ ಜರಗಿತು.
ವಿಧಾನ ಪರಿಷತ್ ಶಾಸಕ ಪ್ರತಾಪ್‌ಸಿಂಹ ನಾಯಕ್ ಅವರು ಮಾತನಾಡಿ, ಭಜನಾ ಮಂದಿರಗಳು ಧಾರ್ಮಿಕತೆಯನ್ನು ಮೂಡಿಸುವ ಪ್ರಾಥಮಿಕ ಕೇಂದ್ರಗಳಾಗಿವೆ. ಭಕ್ತಿಯಿರುವ ಇಲ್ಲಿನ ಜನರಿಂದ ಕ್ಷೇತ್ರದಲ್ಲಿ ಶಕ್ತಿ ಉದ್ದೀಪನಗೊಂಡಿದೆ ಎಂದರು.
ಕುಕ್ಕೇಡಿ ಗ್ರಾ.ಪಂ. ಅಧ್ಯಕ್ಷ ಜನಾರ್ಧನ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸೈನಿಕ ಉಮೇಶ್, ಕುಕ್ಕೇಡಿ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಸತೀಶ್, ಮಡಂತ್ಯಾರು ಶ್ರೀ ದುರ್ಗಾ ಇಂಡಸ್ಟ್ರೀಸ್‌ನ ಉಮೇಶ್ ಶೆಟ್ಟಿ, ವೇಣೂರು ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷ ಸುಂದರ ಹೆಗ್ಡೆ ಬಿ.ಇ., ಕುಕ್ಕೇಡಿ ಗ್ರಾ.ಪಂ. ಸದಸ್ಯರಾದ ತೇಜಾಕ್ಷಿ, ಧನಂಜಯ ಕುಲಾಲ್, ಗೋಪಾಲ ಶೆಟ್ಟಿ, ಮೈಸೂರು ಬಿಲ್ಲವ ಸಮಾಜದ ಮಾಜಿ ಅಧ್ಯಕ್ಷ ಮುತ್ತಪ್ಪ ಪೂಜಾರಿ ಮಂಗಳೂರು, ಶಾರದಾಂಭ ಭಜನ ಮಂಡಳಿ ಅಧ್ಯಕ್ಷ ಹರೀಶ್ ಬಿ., ಕಾರ್ಯಾಧ್ಯಕ್ಷ ಸುಬ್ಬಣ್ಣ ಶೆಟ್ಟಿ, ಪ್ರ. ಕಾರ್ಯದರ್ಶಿ ರಕ್ಷಿತ್ ಕುಮಾರ್, ಕಾರ್ಯದರ್ಶಿ ಯೋಗೀಶ್, ಕೋಶಾಧಿಕಾರಿ ವಿಠಲ ದೇವಾಡಿಗ, ಭಜನ ಸಂಚಾಲಕ ನಿತೇಶ್ ಕುಮಾರ್, ಜತೆ ಕಾರ್ಯದರ್ಶಿ ದಯಾನಂದ ಶೆಟ್ಟಿ, ಮಹಿಳಾ ಸಮಿತಿ ಅಧ್ಯಕ್ಷೆ ವಸಂತಿ, ಕಾರ್ಯದರ್ಶಿ ಹರ್ಷಿಕಾ ಮತ್ತಿತರರು ಉಪಸ್ಥಿತರಿದ್ದರು.
ಸಮ್ಮಾನ-ಪ್ರತಿಭಾ ಪುರಸ್ಕಾರ:
ಶಿಕ್ಷಕ ಭಾಸ್ಕರ, ಮೆಕ್ಯಾನಿಕ್ ಲಕ್ಷ್ಮಣ ಕೆ. ಅವರನ್ನು ಸಮ್ಮಾನಿಸಲಾಯಿತು. ಎಸೆಸ್ಸೆಲ್ಸಿ ಮತ್ತು ದ್ವಿತಿಯ ಪಿಯುಸಿಯಲ್ಲಿ ಸಾಧನೆಗೈದ ಸ್ನೇಹಾ, ಸುರಕ್ಷಾ, ವಿಶಾಲಾಕ್ಷಿ ಹಾಗೂ ಶೈಲಾಶ್ರೀ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಪ್ರವೀಣ್ ಪೂಜಾರಿ ಬುಳೆಕ್ಕಾರ ಸ್ವಾಗತಿಸಿ, ವಿಶ್ವನಾಥ ದೇವಾಡಿಗ ವಂದಿಸಿದರು. ಜಗನ್ನಾಥ ದೇವಾಡಿಗ ನಿರೂಪಿಸಿದರು.

Exit mobile version