Site icon Suddi Belthangady

ಮಿತ್ತಬಾಗಿಲು ಹಾ.ಉ.ಸ. ಸಂಘದ ನೂತನ ಕಟ್ಟಡ ನಂದಗೋಕುಲ ಮತ್ತು ಸಾಂದ್ರ ಶೀತಲೀಕರಣ ಘಟಕದ ಉದ್ಘಾಟನೆ

ಮಿತ್ತಬಾಗಿಲು: ದ.ಕ ಹಾಲು ಒಕ್ಕೂಟ ಮಂಗಳೂರಿಗೆ ಅತೀ ಹೆಚ್ಚು ಹಾಲು ಒದಗಿಸುವುದು ಬೆಳ್ತಂಗಡಿ ತಾಲೂಕು ಆಗಿದ್ದು, ಹೈನುಗಾರಿಕೆ ಮಾಡುವ ಕುಟುಂಬಗಳಿಗೆ ಇನ್ನೂ ಹೆಚ್ಚು ಹಾಲು ಉತ್ಪಾದಿಸುವ ಸಲುವಾಗಿ ಫೀಡ್‌ನ ಅಗತ್ಯತೆ ಇದ್ದು, ಬೆಳ್ತಂಗಡಿಯಲ್ಲಿ ಫೀಡ್ ಫ್ಯಾಕ್ಟರಿ ಪ್ರಾರಂಭಿಸುವ ಅಗತ್ಯತೆ ಇದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಅವರು ಮಿತ್ತಬಾಗಿಲು ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ನಂದಗೋಕುಲ ಮತ್ತು ಸಾಂದ್ರ ಶೀತಲೀಕರಣ ಘಟಕದ ಉದ್ಘಾಟನಾ ಸಮಾರಂಭವನ್ನು ಜ.29 ರಂದು ಮಿತ್ತಬಾಗಿಲು ಹಾಲು ಉತ್ಪಾದಕರ ಸಹಕಾರ ಸಂಘ ಕೊಲ್ಲಿಯಲ್ಲಿ ನೆರವೇರಿಸಿ ಮಾತನಾಡಿದರು.


ಗಣಕಯಂತ್ರ ಕೊಠಡಿ ಉದ್ಘಾಟನೆಯನ್ನು ದ.ಕ.ಸ ಹಾಲು ಒಕ್ಕೂಟದ ಅಧ್ಯಕ್ಷೆ ಕೆ.ಪಿ. ಸುಚರಿತ ಶೆಟ್ಟಿ ನೆರವೇರಿಸಿದರು.

ಅಧ್ಯಕ್ಷತೆಯನ್ನು ಮಿತ್ತಬಾಗಿಲು ಹಾ.ಉ.ಸ.ಸಂಘದ ಅಧ್ಯಕ್ಷ ವಿನಯಚಂದ್ರ ವಹಿಸಿದ್ದರು.


ಮುಖ್ಯ ಅತಿಥಿಗಳಾಗಿ ದ.ಕ.ಸ.ಹಾ.ಉ.ಒಕ್ಕೂಟ ನಿರ್ದೇಶಕರಾದ ಪದ್ಮನಾಭ ಶೆಟ್ಟಿ ಅರ್ಕಜೆ, ಕೆ. ನಾರಾಯಣ ಪ್ರಕಾಶ್ ಪಾಣಾಜೆ, ಎಸ್.ಕೆ.ಡಿ.ಆರ್.ಡಿ.ಪಿ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ, ಯಶೋಧರ ಬಳ್ಳಾಲ್ ಬಂಗಾಡಿ ಅರಮನೆ, ದ.ಕಸ.ಹಾ.ಉ ಒಕ್ಕೂಟದ ವ್ಯವಸ್ಥಾಪಕ ಡಾ| ನಿತ್ಯಾನಂದ ಭಕ್ತ, ದ.ಕಸ.ಹಾ.ಉ.ಒಕ್ಕೂಟದ ಉಪವ್ಯವಸ್ಥಾಪಕ ಡಾ| ಚಂದ್ರಶೇಖರ ಭಟ್, ದ.ಕ.ಸ.ಹಾ.ಉ. ಒಕ್ಕೂಟದ ವಿಸ್ತರಣಾಧಿಕಾರಿ ಶ್ರೀಮತಿ ಯಮುನಾ, ಕೊಲ್ಲಿ ಶ್ರೀ ದುರ್ಗಾದೇವಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವಾಸುದೇವ ರಾವ್ ಉಪಸ್ಥಿತರಿದ್ದರು.


ಮಲ್ಲಿಕಾ ಶಾಂತಿಗುಡ್ಡೆ ಪ್ರಾರ್ಥಿಸಿ, ಅಧ್ಯಕ್ಷ ವಿನಯಚಂದ್ರ ಸ್ವಾಗತಿಸಿದರು. ಅಜಿತ್ ಕೊಕ್ರಾಡಿ ಕಾರ್ಯಕ್ರಮ ನಿರೂಪಿಸಿ ಉಪಾಧ್ಯಕ್ಷ ನೇಮಿರಾಜ್ ಧನ್ಯವಾದವಿತ್ತರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಪುತ್ತೂರು ಜಗದೀಶ್ ಆಚಾರ್ಯ ಮತ್ತು ಬಳಗದವರಿಂದ ಸಂಗೀತ ಗಾನ ಸಂಭ್ರಮ ಜರುಗಿತು.

Exit mobile version