Site icon Suddi Belthangady

ಬಂಗಾಡಿ: ಸಹಸ್ರ ನಾಗಬನ ಧಾರ್ಮಿಕ ಸಭೆ

ಬಂಗಾಡಿ: ಸಹಸ್ರ ನಾಗಬನ ಶ್ರೀ ನಾಗಬ್ರಹ್ಮಲಿಂಗೇಶ್ವರ ದೇವರ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ, ಮಹಾಗಣಪತಿ ದೇವರ ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ನಾಗಮಂಡಲೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮವು ಜ. 27 ರಂದು ಬಂಗಾಡಿಯಲ್ಲಿ ಜರುಗಿತು.

ಮುಖ್ಯ ಅತಿಥಿಗಳಾಗಿ ಶ್ರೀ ಅಷ್ಟಪವಿತ್ರ ನಾಗ ಬ್ರಹ್ಮಲಿಂಗೇಶ್ವರ ದೇವಾಲಯ ಸೇವಾ ಟ್ರಸ್ಟ್‌ ಅಧ್ಯಕ್ಷ ಪಿ. ತಿಮ್ಮಪ್ಪ ಗೌಡ ಬೆಳಾಲು ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಮಾಜಿ ಸಚಿವರು ಹಾಗೂ ಬೆಳ್ತಂಗಡಿ ಪ್ರಸನ್ನ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷ ಕೆ. ಗಂಗಾಧರ ಗೌಡ, ಉಜಿರೆ ಶ್ರೀ ಧ. ಮಂ.ಶಿ. ಸಂಸ್ಥೆಗಳ ಕಾರ್ಯದರ್ಶಿ ಡಾ| ಸತೀಶ್ಚಂದ್ರ ಎಸ್. ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತದ ಸಹ ಸಂಯೋಜಕ ರಘು ಸಕಲೇಶಪುರ ಭಾಗವಹಿಸಿದ್ದರು. ಕನ್ಯಾಡಿ ಹಾ.ಉ.ಸ. ಸಂಘ ದ ಅಧ್ಯಕ್ಷ ಪ್ರವೀಣ್ ಎ.ಜಿ., ನಡ ಹಾ. ಉ. ಸ. ಸಂಘದ ಅಧ್ಯಕ್ಷ ಅಜಿತ್ ಕುಮಾರ್ ಆರಿಗ, ಕೊಲ್ಲಿ ಮಿತ್ತಬಾಗಿಲು ಹಾ. ಉ. ಸ. ಸಂಘ ದ ಅಧ್ಯಕ್ಷರು ವಿನಯ ಚಂದ್ರ, ಮಿತ್ತಬಾಗಿಲು ಕುಕ್ಕಾವು ಹಾ. ಉ. ಸ. ಮಹಿಳಾ ಸ. ಸಂಘದ ಅಧ್ಯಕ್ಷೆ ವಸಂತಲಕ್ಷ್ಮೀ ಬೆದ್ರಬೆಟ್ಟು ಹಾ.ಉ.ಸ. ಸಂಘದ ಅಧ್ಯಕ್ಷ ಧರ್ಣಪ್ಪ ಗೌಡ ಕೆಮ್ಮಟೆ, ಇಂದಬೆಟ್ಟು ಶಾಂತಿ ನಗರ ಹಾ. ಉ. ಸ. ಸಂಘ ದ ಅಧ್ಯಕ್ಷ ಉಮೇಶ್ ಮುದೆಲ್ಕಾಡಿ, ಇಂದಬೆಟ್ಟು ಹಾ.ಉ. ಮಹಿಳಾ ಸಹಕಾರಿ ಸಂಘದ ಅಧ್ಯಕ್ಷೆ ರೇಣುಕಾ ವಸಂತ ಗೌಡ, ಮಲವಂತಿಗೆ ಹಾ. ಉ. ಸ. ಸಂಘ ದ ಅಧ್ಯಕ್ಷ ನಾರಾಯಣ ಗೌಡ ಗೌರವ ಉಪಸ್ಥಿತರಿದ್ದರು.

ವೇದಿಕೆಯಲ್ಲಿ ಬ್ರಹ್ಮಕಲಶ ಸಮಿತಿ ಪ್ರಧಾನ ಗೌರವಾಧ್ಯಕ್ಷ ಯಶೋಧರ ಬಲ್ಲಾಳ್, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಭಾಸ್ಕರ ಧರ್ಮಸ್ಥಳ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಅಜಿತ್ ಕುಮಾರ್ ಜೈನ್ ಇಂದಬೆಟ್ಟು, ಬೆಳ್ತಂಗಡಿ ತಾಲೂಕು ವಿ. ಹಿಂ. ಪರಿಷತ್‌ನ ಅಧ್ಯಕ್ಷ ದಿನೇಶ್ ಚಾರ್ಮಾಡಿ, ಮತ್ತು ಕಾರ್ಯದರ್ಶಿ ಶ್ರೀಧರ್ ಗುಡಿಗಾರ್, ಚಂದ್ರಶೇಖರ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವದ ಯಶಸ್ಸಿಗೆ ದುಡಿದ ಡಾ| ಪ್ರದೀಪ್ ದಂಪತಿಗಳನ್ನು, ಬ್ರಹ್ಮಕಲಶೋತ್ಸವ ಪದಾಧಿಕಾರಿಗಳನ್ನು ಉಪ ಸಮಿತಿಯವರನ್ನು, ನಾಗಬನಕ್ಕೆ ರಸ್ತೆಗೆ ಜಾಗ ನೀಡಿದವರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಬಂಗಾಡಿ ಶಾಲಾ ಮಕ್ಕಳು ಪ್ರಾರ್ಥಿಸಿದರು, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾ| ಪ್ರದೀಪ್ ಸ್ವಾಗತಿಸಿದರು. ಪೆರ್ಲ ಬೈಪಾಡಿ ಶಾಲೆಯ ಶಿಕ್ಷಕ ಮಹೇಶ್ ಕಾರ್ಯಕ್ರಮ ನಿರೂಪಿಸಿ, ಪ್ರಚಾರ ಸಮಿತಿಯ ಸತೀಶ್ ಉತ್ನಡ್ಕ ವಂದಿಸಿದರು.

Exit mobile version