Site icon Suddi Belthangady

ಬೆಳ್ತಂಗಡಿ: ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಎಲ್ಲರ ಸಮ್ಮೇಳನವಾಗಲಿ – ಶಾಸಕ ಹರೀಶ್ ಪೂಂಜ

ಬೆಳ್ತಂಗಡಿ: ಉಜಿರೆಯಲ್ಲಿ ಫೆ.3, 04 ಮತ್ತು 05ರಂದು ನಡೆಯಲಿರುವ ದ ಕ ಜಿಲ್ಲಾ 25ನೇ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಸರ್ವರ ಸಹಕಾರ ಲಭ್ಯವಾಗಿ ಸಮ್ಮೇಳನವು ಎಲ್ಲರ ಸಮ್ಮೇಳನವಾಗಲಿ ಎಂಬ ಆಶಯವನ್ನು ವ್ಯಕ್ತಪಡಿಸುತ್ತಾ, ಈ ಸಮ್ಮೇಳನವು ಬೆಳ್ತಂಗಡಿ ತಾಲೂಕಿನಲ್ಲಿ ಜರಗುತ್ತಿರುವುದು ನಮಗೆಲ್ಲ ಹೆಮ್ಮೆಯ ಸಂಗತಿ. ಬಹಳಷ್ಟು ವಿಚಾರಗಳು ಸಮ್ಮೇಳನದಲ್ಲಿ ಚರ್ಚೆಯಾಗಲಿದ್ದು, ನಾಡಿನ ಭಾಷೆ, ಸಂಸ್ಕೃತಿ ಮತ್ತು ಸಾಹಿತ್ಯಿಕ ವಾತಾವರಣ ಬೆಳೆಸುವಲ್ಲಿ ಒಳ್ಳೆಯ ಪ್ರೇರಣೆ ಮತ್ತು ಮಾರ್ಗದರ್ಶನ ನೀಡುವಂತಾಗಲಿ ಎಂದು ಮಾನ್ಯ ಶಾಸಕರಾದ ಹರೀಶ್ ಪೂಂಜರವರು ಆಶಿಸಿದರು‌. ಶಾಸಕರು ಜಿಲ್ಲಾ ಸಮ್ಮೇಳನದ ಸ್ವಾಗತ ಸಮಿತಿ ಮತ್ತು ಸಂಯೋಜನಾ ಸಮಿತಿಯ ಸದಸ್ಯರ ಭೇಟಿ ಸಂದರ್ಭದಲ್ಲಿ ಸಮ್ಮೇಳನದ ರೂಪುರೇಷೆಗಳ ಬಗ್ಗೆ ವಿಚಾರ ವಿನಿಮಯ ನಡೆಸುವ ಸಂದರ್ಭದಲ್ಲಿ ಮೇಲಿನ ಅಭಿಪ್ರಾಯ ವ್ಯಕ್ತಪಡಿಸಿದರು.

ಶಾಸಕರು ಸಮ್ಮೇಳನದ ಸಂಯೋಜನಾ ಸಮಿತಿಯ ಗೌರವ ಕಾರ್ಯಾಧ್ಯಕ್ಷರೂ ಆಗಿರುವುದರಿಂದ, ಅವರಿಗೆ ಆಮಂತ್ರಣ ಪತ್ರಿಕೆ ನೀಡುವುದರೊಂದಿಗೆ ಸಮ್ಮೇಳನದ ಕೆಲಸ ಕಾರ್ಯಗಳ ಪ್ರಗತಿಯ ಬಗ್ಗೆಯೂ ಅವರೊಂದಿಗೆ ಚರ್ಚಿಸಲಾಯಿತು.

ಉಜಿರೆ ಗ್ರಾ.ಪಂ. ಆಧ್ಯಕ್ಷೆ ಪುಷ್ಪಾವತಿ ಆರ್. ಶೆಟ್ಟಿಯವರ ನೇತೃತ್ವದಲ್ಲಿ, ಸಮ್ಮೇಳನದ ಸಂಯೋಜನಾ ಸಮಿತಿಯು ಶಾಸಕರ ಭೇಟಿಯನ್ನು ಅವರ ಮನೆಯಲ್ಲಿ ಮಾಡಿದ್ದು, ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಎಂ ಪಿ ಶ್ರೀನಾಥ, ಗೌರವ ಕಾರ್ಯದರ್ಶಿ ರಾಜೇಶ್ವರಿ, ಬೆಳ್ತಂಗಡಿ ತಾಲೂಕು ಕಸಾಪ ಅಧ್ಯಕ್ಷ ಡಿ. ಯದುಪತಿ ಗೌಡ, ಸಮ್ಮೇಳನದ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ಭಟ್ ಬೆಳಾಲು ಮತ್ತು ಕಾರ್ಯದರ್ಶಿ ರಮೇಶ್ ಮಯ್ಯ ಉಜಿರೆ ಉಪಸ್ಥಿತರಿದ್ದರು.

Exit mobile version