Site icon Suddi Belthangady

ಮಡಂತ್ಯಾರು: ಗಣರಾಜ್ಯೋತ್ಸವ ಆಚರಣೆ ಹಾಗೂ ಬೃಹತ್ ಸ್ವಚ್ಚತಾ ಅಭಿಯಾನ

ಮಡಂತ್ಯಾರು: ಜೆಸಿಐ ಮಡಂತ್ಯಾರು, ಗ್ರಾಮ ಪಂಚಾಯತ್ ಮಡಂತ್ಯಾರು ಮತ್ತು ಗ್ರಾಮ‌ ಪಂಚಾಯತ್ ಮಾಲಾಡಿ ,ಎನ್.ಸಿ.ಸಿ., ಎನ್.ಎಸ್.ಎಸ್, ರೋವರ್ಸ್ & ರೇಂಜರ್ಸ್ ಮತ್ತು ಯೂತ್ ರೆಡ್ ಕ್ರಾಸ್ ಸಂಸ್ಥೆ ಸೇಕ್ರೆಡ್ ಹಾರ್ಟ್ ಕಾಲೇಜು ಮಡಂತ್ಯಾರು ,ವಾಣಿಜ್ಯ ಕೈಗಾರಿಕೆ ಮತ್ತು ಸೇವಾ ಉದ್ದಿಮೆದಾರರ ಸಂಘ ಮಡಂತ್ಯಾರು-ಪುಂಜಾಲಕಟ್ಟೆ , ಮಹಿಳಾ ಮಂಡಲ‌ ಮಡಂತ್ಯಾರು ಇವುಗಳ ಸಂಯುಕ್ತ ಆಶ್ರಯದಲ್ಲಿ ಗಣರಾಜ್ಯೋತ್ಸವ ಅಚರಣೆ ಮತ್ತು ಬೃಹತ್ ಸ್ವಚ್ಚತಾ ಅಭಿಯಾನ ಹಾಗೂ ಸ್ವಚ್ಚತಾ ಸೇನಾನಿಗಳಿಗೆ ಗೌರವಾರ್ಪಣೆ ಕಾರ್ಯಕ್ರಮ ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನಲ್ಲಿ ಆಚರಿಸಲಾಯಿತು.

ಸೇಕ್ರೆಡ್ ಹಾರ್ಟ್ ಕಾಲೇಜಿನ‌ ಪ್ರಾಂಶುಪಾಲರಾದ ಡಾ.ಜೋಸೆಫ್ ಎನ್.ಎಮ್ ರವರು ಧ್ವಜಾರೋಹಣ ನಡೆಸಿ ಗಣರಾಜ್ಯೋತ್ಸವ ಸಂದೇಶ ನೀಡಿದರು .ಧ್ವಜಾರೋಹಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹವಾಲ್ದಾರ್ ಸತೀಶ್ ಸುವರ್ಣ ನಿವೃತ್ತ ಪ್ಯಾರಾ ಕಮಾಂಡೋ ಉಪಸ್ಥಿತಿತರಿದ್ದರು. ಗಣರಾಜ್ಯೋತ್ಸವದ ಪಥ ಸಂಚಲನದಲ್ಲಿ ಕಾಲೇಜಿನ ಎನ್.ಸಿ.ಸಿ, ಎನ್.ಎಸ್.ಎಸ್, ರೋವರ್ಸ್ &ರೇಂಜರ್ಸ್ ಮತ್ತು ಯೂತ್ ರೆಡ್ ಕ್ರಾಸ್ ನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ನಂತರ ನಡೆದ ಸ್ವಚ್ಚತಾ ಅಭಿಯಾನ ಮತ್ತು ಸ್ವಚ್ಚತಾ ಸೇನಾನಿಗಳಿಗೆ ಗೌರಪಣೆ ಕಾರ್ಯಕ್ರಮದ ಉದ್ಘಾಟನೆಯನ್ನು ಸೇಕ್ರೆಡ್ ಹಾರ್ಟ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಜೋಸೆಫ್ ಎನ್.ಎಮ್ ರವರು ಗಿಡಕ್ಕೆ ನೀರು ಎರೆಯುವುದರ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದ ವೇದಿಕೆಯಲ್ಲಿ ತೆರೆಮರೆಯ ಸಾಧಕರಾದ ಸ್ವಚ್ಚತಾ ಸೇನಾನಿಗಳಿಗೆ ಜೆಸಿಐ ಮಡಂತ್ಯಾರು ಇವರು ಸನ್ಮಾನಿಸಿ ಗೌರವಿಸಿದರು.

ನಂತರ ನಡೆದ ಸ್ವಚ್ಚತಾ ಅಭಿಯಾನದಲ್ಲಿ ಕಾಲೇಜಿನ ಎಲ್ಲಾ ಸಂಘ ಸಂಸ್ಥೆಗಳು, ವಿಧ್ಯಾರ್ಥಿಗಳು, ಉಪನ್ಯಾಸಕರು, ಯೋಜನಾಧಿಕಾರಿಗಳು, ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಪಂಚಾಯತ್ ಅಭಿವದ್ಧಿ ಅಧಿಕಾರಿಗಳು, ಸದಸ್ಯರು, ಜೆ.ಸಿ.ಐ ಮಡಂತ್ಯಾರಿನ ಎಲ್ಲಾ ಪದಾಧಿಕಾರಿಗಳು, ವಾಣಿಜ್ಯ ಕೈಗಾರಿಕೆ ಮತ್ತು ಸೇವಾ ಉದ್ದಿಮೆದಾರರ ಸಂಘ(ರಿ) ಮಡಂತ್ಯಾರು ಪುಂಜಾಲಕಟ್ಟೆ, ಮಹಿಳಾ ಮಂಡಳಿ ಮಡಂತ್ಯಾರು ಇದರ ಸರ್ವ ಸದಸ್ಯರು ಉಪಸ್ಥಿತಿತರಿದ್ದರು.

Exit mobile version