ಬೆಳ್ತಂಗಡಿ: ಮೇಲಂತಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮ ಒನ್ ಕೇಂದ್ರದ ಮಾಲಿಕ ಅನುಗ್ರಹ ಜನ ಸೇವಾ ಕೇಂದ್ರ ಎಂದು ಪ್ರಸಿದ್ದಿ ಹೊಂದಿದ ಎಂ. ಜಿ ತಲ್ಹತ್ ಸವಣಾಲು ಇವರು ಬೆಳ್ತಂಗಡಿ ತಾಲೂಕಿನ ಎಲ್ಲಾ ಗ್ರಾಮ ಒನ್ ಕೇಂದ್ರಗಳಲ್ಲಿ ಉತ್ತಮ ಮತ್ತು ಹೆಚ್ಚು ಸೇವೆಗಳನ್ನು ನೀಡಿ ಎರಡನೇ ಸ್ಥಾನವನ್ನು ಪಡೆದ ಇವರಿಗೆ ಗಣರಾಜ್ಯೋತ್ಸವದ ದಿನದಂದು ತಾಲೂಕು ಆಡಳಿತದ ವತಿಯಿಂದ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಬೆಳ್ತಂಗಡಿ ತಾಲೂಕು ವತಿಯಿಂದ ಇವರನ್ನು ತಾಲೂಕಿನ ಶಾಸಕರಾದ ಹರೀಶ್ ಪೂಂಜಾ ಹಾಗೂ ಮಾನ್ಯ ತಹಶೀಲ್ದಾರರ ಹಾಗೂ ಎಲ್ಲಾ ಗಣ್ಯರ ಸಮ್ಮುಕದಲ್ಲಿ ಗುರುತಿಸಿ ವಿಶೇಷ ಸನ್ಮಾನದೊಂದಿಗೆ ಪ್ರಶಂಸನ ಪಾತ್ರವನ್ನು ಹಾಗೂ ಗೌರವ ಸ್ಮರಣಿಕೆಯನ್ನು ನೀಡಲಾಯಿತು.