Site icon Suddi Belthangady

ಉಜಿರೆ: ಸಂಧ್ಯಾ ಫ್ರೆಶ್ ಉತ್ಪಾದನೆ ಮತ್ತು ಪ್ಯಾಕೇಜಿಂಗ್ ಕೈಗಾರಿಕಾ ಘಟಕಕ್ಕೆ ಶ್ರೀ ಮಂತ್ರಾಲಯ ಪರಿಮಳ ಪ್ರಶಸ್ತಿ ಪ್ರಧಾನ

ಉಜಿರೆ : ಉಜಿರೆಯ ಸಂಧ್ಯಾ ಫ್ರೆಶ್ ಉತ್ಪಾದನೆ ಮತ್ತು ಪ್ಯಾಕೇಜಿಂಗ್ ಕೈಗಾರಿಕಾ ಘಟಕಕ್ಕೆ ಪ್ರತಿಷ್ಠಿತ ಶ್ರೀ ಮಂತ್ರಾಲಯ ಪರಿಮಳ ಪ್ರಶಸ್ತಿ-2023 ಲಭಿಸಿದೆ.


ಆಂಧ್ರಪ್ರದೇಶದ ಶ್ರೀ ರಾಘವೇಂದ್ರ ಸ್ವಾಮಿ ಮಠ ಮಂತ್ರಾಲಯದಲ್ಲಿ ಜ.25 ರಂದು ಮಂತ್ರಾಲಯದ ಗುರುಗಳಿಂದ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಿತು.

ಉಜಿರೆಯ ಸಂಧ್ಯಾ ಫ್ರೆಶ್ ಘಟಕದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅರ್ಚನಾ ರಾಜೇಶ್ ಪೈ ಪ್ರಶಸ್ತಿ ಸ್ವೀಕರಿಸಿದರು.

Exit mobile version