Site icon Suddi Belthangady

ಬೆಳ್ತಂಗಡಿ :ಸ.ಪ್ರ.ದ. ಕಾಲೇಜಿನಲ್ಲಿ ಮ್ಯಾನೇಜ್ಮೆಂಟ್ ಫೆಸ್ಟ್ ಆಗ್ನಿಟೋ 2023

ಬೆಳ್ತಂಗಡಿ: “ವಿದ್ಯಾರ್ಥಿಗಳು ಅವಕಾಶವನ್ನು ಬಳಸಿಕೊಂಡು ಸವಾಲುಗಳನ್ನು ಎದುರಿಸಿ ಬೆಳೆಯಲು ಪ್ರಯತ್ನಿಸಬೇಕು. ಮ್ಯಾನೇಜ್ಮೆಂಟ್ ಕೌಶಲ್ಯವನ್ನು ಗಳಿಸಿ ಸದೃಢ ಭಾರತದ ನಿರ್ಮಾಣದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂದು ಶಾಸಕ ಹರೀಶ್ ಪೂಂಜರವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಅವರು ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ತಂಗಡಿಯಲ್ಲಿ ನಡೆದ ರಾಜ್ಯ ಮಟ್ಟದ ಸರಕಾರಿ ಕಾಲೇಜುಗಳ ಮ್ಯಾನೇಜ್ಮೆಂಟ್ ಫೆಸ್ಟ್ ಆಗ್ನಿಟೋ 2023 ನನ್ನು ಉದ್ಘಾಟಿಸಿ ನಮಗೆಲ್ಲ ಮೊದಲ ಮ್ಯಾನೇಜ್ಮೆಂಟ್ ಗುರು ನಮ್ಮ ತಂದೆಯೇ ಆಗಿರುತ್ತಾರೆ. ಸೂಕ್ಷ್ಮವಾಗಿ ಅವಲೋಕಿಸಿ ನಾವು ಕೌಶಲ್ಯವನ್ನು ಅರ್ಜಿಸಿಕೊಳ್ಳಬೇಕು ಎಂದು ಹೇಳಿದರು. ಸುಮಾರು ಹನ್ನೆರಡು ಕಾಲೇಜುಗಳಿಂದ ಭಾಗವಹಿಸಿದ ವಿವಿಧ ತಂಡಗಳಿಗೆ ಶುಭಕೋರುತ್ತಾ ಇಂತಹ ರಚನಾತ್ಮಕ ಕೆಲಸಗಳಿಗೆ ತನ್ನ ಸಂಪೂರ್ಣ ಸಹಕಾರವಿದೆ ಎಂದು ತಿಳಿಸಿದರು. ಈ ಮ್ಯಾನೇಜ್ಮೆಂಟ್ ಫೆಸ್ಟ್ ನ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ.ಸುಬ್ರಹ್ಮಣ್ಯ ಕೆ. ವಹಿಸಿದ್ದರು.

ಡಾ.ಕುಶಾಲಪ್ಪ ಸ್ವಾಗತಿಸಿ, ಪ್ರೊ. ಸುರೇಶ್ ವಿಟ್ಲ ವಂದಿಸಿದರು. ಸಭಾ ಕಾರ್ಯಕ್ರಮದ ನಿರೂಪಣೆಯನ್ನು ಶ್ರದ್ಧಾ ದ್ವಿತೀಯ ಬಿಎ ಹಾಗೂ ಅಶ್ವಿನಿ ತೃತೀಯ ಬಿಬಿಎರವರು ನಿರ್ವಹಿಸಿದರು. ಆ ಬಳಿಕ ವಿವಿಧ ಸ್ಪರ್ಧೆಗಳು ನಡೆದವು. ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮವು ನಡೆಯಿತು. ಅತಿಥಿಗಳಾಗಿ ಆಗಮಿಸಿದ ಡಾ. ಅಂಟನಿ ಟಿ ಪಿ, ಪ್ರೊ. ಪ್ರವೀಣ್‌ ಡಿ ಇವರು ವಿಜೇತರನ್ನು ಅಭಿನಂದಿಸಿದರು. ಸಮಗ್ರ ಬಹುಮಾನವನ್ನು ಸರಕಾರಿ ಪ್ರಥಮ ದರ್ಜೆ ಕಾಲೇಜು ಕಾರ್ಕಳ ಪಡೆಯಿತು.

Exit mobile version