ತೆಂಕಕಾರಂದೂರು ಶ್ರೀ ವಿಷ್ಣುಮೂರ್ತಿ ದೇವರ ವರ್ಷಾವಧಿ ಜಾತ್ರೋತ್ಸವವು ವೇದಮೂರ್ತಿ ನಡ್ವಾಂತಡಿ ಬಾಲಕೃಷ್ಣ ಪಾಂಗಣ್ಣಯ ತಂತ್ರಿಗಳ ನೇತೃತ್ವದಲ್ಲಿ ಜ.24ರಿಂದ ಪ್ರಾರಂಭಗೊಂಡು ಜ. 28ರ ತನಕ ಜರಗಲಿದ್ದು, ಆ ಪ್ರಯುಕ್ತ ಇಂದು ಶ್ರೀ ದೇವರಿಗೆ ದೇವತಾ ಪ್ರಾರ್ಥನೆ, ಉಗ್ರಾಣ ಮುಹೂರ್ತ, ತೋರಣ ಮುಹೂರ್ತ, ಗಣಪತಿ ಹವನ, ನವ ಕಲಶ, ಶ್ರೀ ದೇವರಿಗೆ ಮಹಾಪೂಜೆ, ನಿತ್ಯ ಬಲಿ, ಧ್ವಜಾರೋಹಣ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.
ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಸಭಾಧ್ಯಕ್ಷತೆಯನ್ನು ದೇವಾಲಯದ ಆಡಳಿತ ಮೊಕ್ತೇಸರಾದ ಕೃಷ್ಣ ಸಂಪಿಗೆತ್ತಾಯ, ಧಾರ್ಮಿಕ ಉಪನ್ಯಾಸ ಮೂಡಬಿದ್ರೆ ಆಳ್ವಾಸ್ ಕಾಲೇಜು ಸಹ ಪ್ರಾಧ್ಯಪಕರು ಡಾ. ಯೋಗೀಶ್ ಕೈರೋಡಿ, ಮುಖ್ಯ ಅತಿಥಿಗಳಾಗಿ ನವದೆಹಲಿ ಅನಾರೋಖ್ ಪ್ರೈವೇಟ್ ಲಿಮಿಟೆಡ್ ವೈಸ್ ಚೆಯರ್ ಮ್ಯಾನ್ ಸಂತೋಷ್ ಕುಮಾರ್ ಜೆ. ಪಿ, ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಸ್ಥಾಪಕ ಅಧ್ಯಕ್ಷ ತುಂಗಪ್ಪ ಬಂಗೇರ, ಜಾತ್ರೊತ್ಸವ ಸಮಿತಿ ಅಧ್ಯಕ್ಷ ಜಗದೀಶ್ ಗೌಡ ಕಜೆಬೆಟ್ಟು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಂಗಳೂರು ವೆನ್ಲಾಕ್ ಆಸ್ಪತ್ರೆ ಯ ಮೂತ್ರ ರೋಗ ತಜ್ಞ ಡಾ. ಸದಾನಂದ ಪೂಜಾರಿ ತೆಂಕಕಾರಾಂದೂರು ರವರ ಮಾತಾ ಪಿತರಿಗೆ ಹಾಗೂ ಶ್ರೀಷ ಸಂಪಿಗೆತ್ತಾಯ ರವರಿಗೆ ಸನ್ಮಾನ ಕಾರ್ಯಕ್ರಮ ಜರಗಿತು. ಸಂಜೆ ಕ್ಷೇತ್ರದಲ್ಲಿ ಡಾ. ಸದಾನಂದ ಪೂಜಾರಿ ಹಾಗೂ ಡಾ. ಸೌಮ್ಯ ಹಾಗೂ ಮನೆಯವರು ಅಂಗಡಿ ಬೆಟ್ಟು ಇವರ ಸೇವಾ ರೂಪದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತದಶವತಾರ ಯಕ್ಷಗಾನ ಮಂಡಳಿ ಇವರಿಂದ ಶ್ರೀ ದೇವಿ ಮಹಾತ್ಮೆ, ಯಕ್ಷಗಾನ ಬಯಲಾಟ ಜರಗಲಿದೆ.