Site icon Suddi Belthangady

ಬೆಳ್ತಂಗಡಿ ಮಾದರಿ ಶಾಲೆ: ಮಗಳು ಚಿತ್ರತಂಡದ ಜತೆ ವಿದ್ಯಾರ್ಥಿಗಳ ಸಂವಾದ

ಬೆಳ್ತಂಗಡಿ: ಮನೆಯಿಂದ ಆರಂಭವಾಗುವ ಮಕ್ಕಳ ಶಿಕ್ಷಣ ಬಳಿಕ ಸಮಾಜದಲ್ಲಿ ಅನುಭವಿಸಿ ಜೀವನ ಪಾಠದ ಶಿಕ್ಷಣ ಕಲಿಯುತ್ತಾರೆ. ಶಾಲೆಯ ಶಿಕ್ಷಣದಿಂದ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಓರ್ವ ವಿದ್ಯಾರ್ಥಿ ಪ್ರಜ್ಞಾವಂತ ನಾಗರಿಕನಾಗಿ ಸಮಾಜದಲ್ಲಿ ಬದುಕಲು ಪೋಷಕರು ಮತ್ತು ಶಿಕ್ಷಕರ ಪಾತ್ರ ಮಹತ್ವದ್ದು ಎಂದು ಮಗಳು ಕನ್ನಡ ಚಲನಚಿತ್ರದ ನಿರ್ದೇಶಕ ತೋಮಸ್ ಎಂ.ಎಂ. ಹೇಳಿದರು.
ಬೆಳ್ತಂಗಡಿ ಸರಕಾರಿ ಮಾದರಿ ಹಿ.ಪ್ರಾ. ಶಾಲೆಯಲ್ಲಿ ಮಗಳು ಚಿತ್ರತಂಡದ ಜತೆ ವಿದ್ಯಾರ್ಥಿಗಳು ಹಾಗೂ ಪೋಷಕರ ಜತೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


ಬಾಲ್ಯದಲ್ಲಿ ಮಕ್ಕಳು ತಪ್ಪು ದಾರಿ ಹಿಡಿದಾಗ ಸರಿದಾರಿಗೆ ತರಲು ಅವಕಾಶ ಇರುತ್ತದೆ. ಸಮಾಜದಲ್ಲಿ ಎದುರಾಗುವ ಸವಾಲುಗಳನ್ನು ಮೀರಿನಿಲ್ಲಲು ಅನುಭವದ ಅಗತ್ಯವಿದೆ. ಶಿಕ್ಷಣದಲ್ಲಿ ಮಕ್ಕಳು ಎದುರಿಸುವ ಸವಾಲುಗಳನ್ನು ಮಗಳು ಚಿತ್ರದಲ್ಲಿ ಬಿಚ್ಚಿಡಲಾಗಿದ್ದು, ಸವಾಲುಗಳನ್ನು ಎದುರಿಸಿ ಬದುಕುವ ಓರ್ವ ಮಗಳು ಕುಟುಂಬಕ್ಕೆ ಮತ್ತು ಸಮಾಜಕ್ಕೆ ಯಾವ ರೀತಿ ಬೇಳಕು ನೀಡುತ್ತಾಳೆ ಅನ್ನುವುದನ್ನು ಚಿತ್ರದಲ್ಲಿ ತೋರಿಸಲಾಗಿದೆ ಎಂದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನೀನಾ ಕುಮಾರ್, ಸದಸ್ಯರಾದ ಉಸ್ಮಾನ್ ಬಿ., ಅಬ್ದುಲ್ ಲತೀಫ್ , ಚರಣ್ ಕುಮಾರ್, ಅಶ್ವಿನಿ, ಉಷಾ ಹಾಗೂ ಶಿಕ್ಷಕ ವ್ರಂದ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಸುರೇಶ್ ಎಂ. ಸ್ವಾಗತಿಸಿ, ವಂದಿಸಿದರು.

Exit mobile version