ಗೇರುಕಟ್ಟೆ: ಕಳಿಯ ಗ್ರಾಮದ ಗೇರುಕಟ್ಟೆ ಹಾಲು ಉತ್ಪಾದಕರ ಸಹಕಾರಿ ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಶಾಸಕ ಹರೀಶ್ ಪೂಂಜ ರವರು ಜ.23 ರಂದು ಶಿಲಾನ್ಯಾಸ ನೆರವೇರಿಸಿದರು. ಕುಂಠಿನಿ ವೇ.ಮೂ. ರಾಘವೇಂದ್ರ ಬಾಂಗಿಣ್ಣಾಯರ ನೇತೃತ್ವದಲ್ಲಿ ಪೂಜಾ-ವಿಧಿ, ವಿಧಾನಗಳೊಂದಿಗೆ ಜರುಗಿತು.
ಸಂಘದ ಅಧ್ಯಕ್ಷ ಜನಾರ್ದನ ಗೌಡ ಕೆ. ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕಳಿಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಭಾಷಿಣಿ ಜನಾರ್ದನ ಗೌಡ, ಮಂಗಳೂರು ಹಾಲು ಉತ್ಪಾದಕರ ಒಕ್ಕೂಟ ನಿರ್ದೇಶಕ ಪದ್ಮನಾಭ ಆರ್ಕಜೆ,ಕಳಿಯ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವಸಂತ ಮಜಲು, ಶ್ರೀ ಕ್ಷೇತ್ರ ಧ.ಗ್ರಾ.ಯೋ.ತಾಲೂಕು ಯೋಜನಾಧಿಕಾರಿ ಸುರೇಂದ್ರ, ಹಾಲು ಉತ್ಪಾದಕರ ಸಂಘದ ವಿಸ್ತಾರಣಾಧಿಕಾರಿ ರಾಜೇಶ್ ಕಾಮತ್, ನಾಳ ದುರ್ಗಾಪರಮೇಶ್ವರಿ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಭುವನೇಶ್ ಜಿ, ಸಹಕಾರ ಭಾರತಿ ಅಧ್ಯಕ್ಷ ರಾಜೇಶ್ ಪೆರ್ಬುಡ, ಕಳಿಯ ಗ್ರಾಮ ಪಂಚಾಯತ್ ಸದಸ್ಯ, ನಾಳ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಸುಧಾಕರ ಮಜಲು, ಕಳಿಯ ಬೀಡು ಸುರೇಂದ್ರ ಕುಮಾರ್ ಜೈನ್, ಗೇರುಕಟ್ಟೆ ಹಾಲು ಉತ್ಪಾದಕರ ಸಂಘದ ಉಪಾಧ್ಯಕ್ಷೆ ಕೆ. ಕುಶಲಾವತಿ, ಕಣಿಯೂರು ಮಹಿಳಾ ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ಭಾರತಿ, ಕಳಿಯ ಪ್ರಗತಿ ಬಂಧು ಅಧ್ಯಕ್ಷೆ ತಿಲೋತ್ತಮ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು.
ನಾಳ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಯಾದವ ಗೌಡ ಎಮ್, ಗುರುವಾಯನಕೆರೆ ಹಾಲು ತ್ಪಾದಕರ ಸಂಘದ ಉಪಾಧ್ಯಕ್ಷ ಪೂವಪ್ಪ ಭಂಡಾರಿ, ಹಾಲು ಉತ್ಪಾದಕರ ಸಂಘದ ಹಿರಿಯ ಮಾಜಿ ನಿರ್ದೇಶಕ ವಿಶ್ವನಾಥ ಶೆಟ್ಟಿ, ಮಡಂತ್ಯಾರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪುರುಷೋತ್ತಮ ಜಿ, ಕಳಿಯ ಗ್ರಾಮ ಪಂಚಾಯತ್ ಸದಸ್ಯರಾದ ದಿವಾಕರ ಎಮ್, ವಿಜಯ ಕುಮಾರ್ ಕೆ,ಹರೀಶ್ ಕುಮಾರ್ ಬಿ, ಇಂದಿರಾ ಬಿ ಶೆಟ್ಟಿ, ವಾಣಿ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ಬಾಲಕೃಷ್ಣ ಗೌಡ ಬಿರ್ಮೋಟ್ಟು,ಕಳಿಯ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಶೇಖರ ನಾಯ್ಕ,ರತ್ನಾಕರ ಪೂಜಾರಿ ಬಿ.ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ನಿರ್ದೇಶಕ ಸಂಜೀವ ಬಂಗೇರ, ಸಂಘದ ನಿರ್ದೇಶಕರಾದ ಜಯನಾರಾಯಣ ಉಪಾಧ್ಯಾಯ, ಪ್ರವೀಣ್ ಬಿ,ಕೆ.ಕೇಶವ ಪೂಜಾರಿ,ರಂಜನ್ ಹೆಚ್,ನೇವಿಲ್ ಸ್ಟೀವನ್ ಮೊರಾಸ್,ವಸಂತ ನಾಯ್ಕ,ಕೇಶವತಿ,ಯೋಗಿನಿ ಗಿರಿಯಪ್ಪ ಗೌಡ ಕೆ,ಸಿರಿಲ್ ಪಿಂಟೋ, ಹಾಲಿ ನಿರ್ದೇಶಕರು, ಸರ್ವ ಸದಸ್ಯರು,ಸಿಬ್ಬಂದಿಗಳು, ಗೇರುಕಟ್ಟೆ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಹಾಗೂ ಗುತ್ತಿಗೆದಾರ ರಾಜ್ ಪ್ರಕಾಶ್ ಶೆಟ್ಟಿ ಉಪಸ್ಥಿತರಿದ್ದರು.