ಕೊಕ್ಕಡ: ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಜ.23 ರಂದು ಗೋಬರ್ ಗ್ಯಾಸ್ ಘಟಕದ ಶಿಲಾನ್ಯಾಸ ಹಾಗೂ ವಿವಿಧ ಯೋಜನೆಗಳ ಉದ್ಘಾಟನೆಯನ್ನು ಶಾಸಕ ಹರೀಶ್ ಪೂಂಜರವರು ನೆರವೇರಿಸಿದರು.
ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದ ಗೋಶಾಲೆಯಲ್ಲಿ ದೇವಳದ ಉಪಯೋಗಕ್ಕಾಗಿ ಗೋಬರ್ಧನ್ ಯೋಜನೆಯ ಮೂಲಕ ಜಿಲ್ಲಾ ಪಂಚಾಯತ್ ವತಿಯಿಂದ ನಿರ್ಮಿಸಲ್ಪಡುವ ಗೋಬರ್ ಗ್ಯಾಸ್ ಘಟಕದ ಶಿಲಾನ್ಯಾಸವನ್ನು ಹಾಗೂ ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದ ಬಳಿ ಶಾಸಕರ ಅನುದಾನದಲ್ಲಿ ನಿರ್ಮಿಸಿರುವ ರಸ್ತೆ ವಿಭಜಕದ ಹೈಮಾಸ್ಟ್ ಸೋಲಾರ್ ದೀಪದ ಉದ್ಘಾಟನೆ ಹಾಗೂ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ಬಳಿ ಕೆ.ಆರ್.ಐ.ಡಿ ಲಿಮಿಟೆಡ್ ರೂ.75 ಲಕ್ಷ ಅನುದಾನದಲ್ಲಿ ಯಾತ್ರಿ ನಿವಾಸ ನಿರ್ಮಾಣದ ಉದ್ಘಾಟನೆಯನ್ನು ಶಾಸಕ ಹರೀಶ್ ಪೂಂಜರು ನೆರವೇರಿಸಿದರು.
ಸೌತಡ್ಕ ಕ್ಷೇತ್ರದಲ್ಲಿ ಜ.23 ರಿಂದ 25 ರವರೆಗೆ ನಡೆಯಲಿರುವ ಮೂಡಪ್ಪ ಸೇವೆಯ ಭಜನೋತ್ಸವದ ಉದ್ಘಾಟನೆಯನ್ನು ಕಡಬ ಸರಸ್ವತಿ ವಿದ್ಯಾಲಯದ ವೆಂಕಟ್ರಮಣ ರಾವ್ ಮಂಕುಡೆ ನೆರವೇರಿಸಿದರು.
ವೇದಿಕೆಯಲ್ಲಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹರೀಶ್ ರಾವ್, ಮೂಡಪ್ಪ ಸೇವಾ ಸಮಿತಿ ಸಂಚಾಲಕ ಕುಶಾಲಪ್ಪ ಗೌಡ ಪೂವಾಜೆ, ಕೊಕ್ಕಡ ಗ್ರಾ.ಪಂ. ಅಧ್ಯಕ್ಷ ಯೋಗೀಶ್ ಅಲಂಬಿಲ, ಗ್ರಾ.ಪಂ. ಉಪಾಧ್ಯಕ್ಷೆ ಪವಿತ್ರಾ, ಆರ್.ಎಸ್.ಎಸ್ ಮುಖಂಡ ಕೃಷ್ಣ ಭಟ್, ಭಜನೋತ್ಸವ ಉಸ್ತುವಾರಿ ಹರೀಶ್ ನೆರಿಯ, ಹಾಗೂ ಸಂಘದ ವ್ಯವಸ್ಥಾಪನ ಸಮಿತಿಯ ಸದಸ್ಯರು, ಮೂಡಪ್ಪ ಸೇವಾ ಸಮಿತಿ ಸದಸ್ಯರು, ಭಕ್ತಾದಿಗಳು. ಗ್ರಾ.ಪಂ. ಪಿ.ಡಿಒ ದೀಪಕ್ ರಾಜ್ ಉಪಸ್ಥಿತರಿದ್ದರು.
ಕಾರ್ಯನಿರ್ವಾಹರ್ಣಾಧಿಕಾರಿ ದಯಾನಂದ ಹೆಗ್ಡೆ ಸ್ವಾಗತಿಸಿ, ಹರೀಶ್ ನೆರಿಯ ಪ್ರಾರ್ಥಿಸಿ , ಹೇಮಾವತಿ ಶಿವನಂದ ನಿರೂಪಿಸಿ, ಕೇಶವ ಹಳ್ಳಿಂಗೇರಿ ಧನ್ಯವಾದವಿತ್ತರು.