Site icon Suddi Belthangady

ಬೆಳ್ತಂಗಡಿ ಒಕ್ಕಲಿಗ ಗೌಡ ಸಮುದಾಯದಿಂದ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಜಯಂತೋತ್ಸಕ್ಕೆ ರೂ. 5.60 ಲಕ್ಷ ದೇಣಿಗೆ

ಬೆಳ್ತಂಗಡಿ : ಭೈರವೈಕ್ಯ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ 78 ನೇ ಜಯಂತೋತ್ಸವವು ಜ.22 ರಂದು ಪುತ್ತೂರಿನಲ್ಲಿ ನಡೆಯಿತು.

ಈ ಜಯಂತೋತ್ಸವಕ್ಕೆ ದೇಣಿಗೆಯಾಗಿ ಕೆ.ಗಂಗಾಧರ ಗೌಡ ಮಾಜಿ ಸಚಿವರು ಮತ್ತು ಅಧ್ಯಕ್ಷರು ಪ್ರಸನ್ನ ಶಿಕ್ಷಣ ಸಂಸ್ಥೆ ಇವರು 1,00,000/- ರೂಪಾಯಿ ಮತ್ತು ಬೆಳ್ತಂಗಡಿ ತಾಲೂಕು ಒಕ್ಕಲಿಗ ಸಂಘದಿಂದ ಗ್ರಾಮ ಸಮಿತಿಯಿಂದ 4,60,000/-ರೂಪಾಯಿ ಒಟ್ಟು 5,60,000/- ರೂಪಾಯಿಯನ್ನು ಬೆಳ್ತಂಗಡಿ ತಾಲೂಕು ಒಕ್ಕಲಿಗ ಸಂಘದ ಅಧ್ಯಕ್ಷರಾದ ಬಾಲಕೃಷ್ಣ ಗೌಡ ಕೇರಿಮಾರು ಇವರು ಬಾಲಗಂಗಾಧರನಾಥ ಜಯಂತೋತ್ಸವ ಸಮಿತಿಯ ಕೋಶಾಧಿಕಾರಿಯಾದ ಉಮೇಶ್ ಇವರಿಗೆ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾಮಠ, ಮಂಗಳೂರಿನ ಪೀಠಾಧ್ಯಕ್ಷರಾದ ಶ್ರೀ. ಡಾ. ಧರ್ಮಪಾಲನಾಥ ಸ್ವಾಮೀಜಿಯವರ ಸಮ್ಮುಖದಲ್ಲಿ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಸಹಕಾರಿಯ ಮುಖ್ಯಕಾರ್ಯನಿರ್ವಾಹಣಾಧಿಕಾರಿಯಾದ ದಿನೇಶ್ ಗೌಡ ಕಲ್ಲಾಜೆ ಮತ್ತು ಬೆಳ್ತಂಗಡಿ ತಾಲೂಕು ಎ. ಪಿ. ಎಂ. ಸಿ ಮಾಜಿ ಅಧ್ಯಕ್ಷರಾದ ಭರತ್ ಗೌಡ ಬಂಗಾಡಿ ಇವರು ಉಪಸ್ಥಿತರಿದ್ದರು.

ಬೆಳ್ತಂಗಡಿ ತಾಲೂಕಿನಿಂದ ಒಕ್ಕಲಿಗ ಸಮುದಾಯದ ವಾಹನ ಜಾಥಾ ಮತ್ತು ಟ್ಯಾಬ್ಲೋ ಮುನ್ನಡೆಸಲಾಯಿತು.

Exit mobile version