Site icon Suddi Belthangady

ಬಿಲ್ಲವ ಜನಪದ ಸಮ್ಮೇಳನ ಜೀಟಿಗೆ ಸತ್ಯೋದ ತುಡರ್ ಉದ್ಘಾಟನೆ

ಬೆಳ್ತಂಗಡಿ :ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಇದರ ಆಶ್ರಯದಲ್ಲಿ ಮಹಿಳಾ ಬಿಲ್ಲವ ವೇದಿಕೆ, ಯುವ ಬಿಲ್ಲವ ವೇದಿಕೆ, ಯುವವಾಹಿನಿ ಬೆಳ್ತಂಗಡಿ ಮತ್ತು ವೇಣೂರು ಘಟಕದ ಸಹಾಭಾಗೀತ್ವದಲ್ಲಿ ಬಿಲ್ಲವ ಜನಪದ ಸಮ್ಮೇಳನ 2023 ಜೀಟಿಗೆ ಸತ್ಯೋದ ತುಡರ್ ಜ.22 ರಂದು ಬೆಳ್ತಂಗಡಿ ಶ್ರೀ ಗುರುದೇವ ಕಾಲೇಜು ವಠಾರದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಕೇಂದ್ರ ಸರಕಾರದ ಮಾಜಿ ಸಚಿವ ಬಿ. ಜನನಾರ್ದನ ಪೂಜಾರಿ ಜೀಟಿಗೆ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಸಮ್ಮೇಳನ ಅಧ್ಯಕ್ಷತೆಯನ್ನು ತುಳು ಜನಪದ ವಿದ್ವಾಂಸರು ಮಂಗಳೂರು ವಿಶ್ವ ವಿದ್ಯಾನಿಲಯ ಶ್ರೀ ನಾರಾಯಣ ಗುರು ಅಧ್ಯಯನ ಪೀಠದ ನಿರ್ದೇಶಕ ಡಾ. ಗಣೇಶ್ ಅಮೀನ್ ಸಂಕಮಾರ್ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಗೌರವ ಅಧ್ಯಕ್ಷರು ಮಾಜಿ ಶಾಸಕ ಕೆ. ವಸಂತ ಬಂಗೇರ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಶ್ರೀ ಗುರುನಾರಾಯಣ ಸ್ವಾಮಿ ಸಂಘದ ಅಧ್ಯಕ್ಷ ಚಿದಾನಂದ ಪೂಜಾರಿ, ಮಂಗಳೂರು ಗೋಕರ್ಣನಾಥೇಶ್ವರ ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್ ಆರ್. ಯುವ ಬಿಲ್ಲವ ವೇದಿಕೆ ಅಧ್ಯಕ್ಷ ನಿತೀಶ್ ಎಚ್. ಕೋಟ್ಯಾನ್,ಮಹಿಳಾ ಬಿಲ್ಲವ ವೇದಿಕೆಯ ಅಧ್ಯಕ್ಷೆ ಸುಜಿತಾ ವಿ. ಬಂಗೇರ, ಯುವವಾಹಿನಿ ಬೆಳ್ತಂಗಡಿ ಘಟಕದ ಅಧ್ಯಕ್ಷ ಅಶ್ವಥ್ ಕುಮಾರ್,ವೇಣೂರು ಘಟಕ ಅಧ್ಯಕ್ಷೆ ಹರಿಣಿ ಕರುಣಾಕರ, ಉಪ್ಪಿನಂಗಡಿ ಘಟಕ ಅಧ್ಯಕ್ಷ ಮನೋಹರ್ ಇಳಂತಿಲ,ಸಂಘದ ಕಾರ್ಯದರ್ಶಿ ಜಯವಿಕ್ರಮ್, ನಿರ್ದೇಶಕರು, ಗುರುದೇವ ವಿವಿದೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಪದ್ಮನಾಭ ಮಾನಿಂಜ, ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಮ್,ಸಂಘದ ಮಾಜಿ ಅಧ್ಯಕ್ಷರುಗಳು, ಗ್ರಾಮ ಸಮಿತಿಗಳ ಪದಾಧಿಕಾರಿಗಳು, ಸಮಾಜ ಬಾಂಧವರು, ಶ್ರೀ ಗುರುದೇವ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು, ಭಾಗವಹಿಸಿದ್ದರು.

ಜನಪದ ಸಮ್ಮೇಳನದ ಪ್ರಧಾನ ಸಂಚಾಲಕ ಸಂಪತ್ ಬಿ. ಸುವರ್ಣ ಪ್ರಾಸ್ತವಿಕವಾಗಿ ಮಾತನಾಡಿದರು. ಉದ್ಘಾಟನೆಯ ಬಳಿಕ ಮುರ್ತೆದಾರ, ನಾಟಿ ವೈದ್ಯರ, ಗುತ್ತಿನಾರರ,ದೈವಾರಾಧನೆ,ಶಾಂತಿ ಸಮ್ಮೇಳನ ಹಾಗು ಎಲ್ಲಾ ಸಮ್ಮೇಳನದ ಗೀತಾ ನಾಟಕ, ಪ್ರಸ್ತುತಿ, ಗೌರವಾರ್ಪಣೆ ನಡೆಯಿತು

Exit mobile version