ಗೇರುಕಟ್ಟೆ: ಇಲ್ಲಿಯ ಗೇರುಕಟ್ಟೆ ಪ್ರೌಢ ಶಾಲೆಯಲ್ಲಿ ಎರಡು ದಿನಗಳ ಕಾಲ ನಡೆಯುವ ಗುರುವಾಯನಕೆರೆ ಕ್ಲಸ್ಟರ್ ವಿಭಾಗದ ಕಲಿಕಾ ಹಬ್ಬ 2022-23 ಕಾರ್ಯಕ್ರಮಕ್ಕೆ ಜ.20 ರಂದು ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ದ.ಕ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಮತ್ತು ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಭುನವೇಶ್ ತೆಂಗಿನ ಹೊಂಬಾಳೆಯನ್ನು ಅರಳಿಸುವ ಮೂಲಕ ಉದ್ಘಾಟಿಸಿ ಮಾತನಾಡಿ ವಿದ್ಯಾ ಸಮಗ್ರ ಶಿಕ್ಷಣ ಕರ್ನಾಟಕವು ಅತ್ಯಂತ ದೊಡ್ಡ ಕಲಿಕಾ ಹಬ್ಬವನ್ನು ಜನವರಿ ಫೆಬ್ರವರಿ ತಿಂಗಳಿನಲ್ಲಿ ಹಮ್ಮಿಕೊಂಡಿದೆ. ಕಲಿಕಾ ಹಬ್ಬದ ಚಟುವಟಿಕೆಗಳನ್ನು ಆಡು-ಹಾಡು, ಕಾಗದ ಕತ್ತರಿ, ಊರು ತಿಳಿಯೋಣ, ಮಾಡು-ಆಡು ಎಂಬ ಗುಂಪುಗಳಲ್ಲಿ ವಿನ್ಯಾಸಗೊಳಿಸಲಾಗಿದೆ. ಮಕ್ಕಳು ಖುಷಿಯಿಂದ ಪಾಲ್ಗೊಳ್ಳುವಂತೆ ಈ ಎಲ್ಲ ಚಟುವಟಿಕೆಗಳನ್ನೂ ರೂಪಿಸಲಾಗಿದೆ. ಮಗುವಿನ ಹೊರ ಬದುಕಿನ ಅನುಭವಗಳು ಕಲಿಕೆಯ ಪ್ರಕ್ರಿಯೆಯಲ್ಲಿ ಬಳಕೆಯಾಗುತ್ತವೆ. ವಿದ್ಯಾರ್ಥಿಗಳು ತಮ್ಮ ತಮ್ಮಲ್ಲಿ ಚರ್ಚಿಸಿ, ತಾರ್ಕಿಕವಾಗಿ ಆಲೋಚಿಸಿ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮಾರ್ಗಗಳನ್ನು ತಾವೇ ಶಿಕ್ಷಕರು ಇದನ್ನು ಉತ್ತೇಜಿಸುತ್ತಾರೆ. ವಿದ್ಯಾರ್ಥಿಗಳಿಗೆ ತಮ್ಮ ಅಭಿಪ್ರಾಯಗಳನ್ನು ಹೇಳಲು ಮುಕ್ತ ಅವಕಾಶವಿರುತ್ತದೆ ಎಂದರು.
ಸಭಾಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಮೇಲುಸ್ತುವರಿ ಸಮಿತಿ ಉಪಾಧ್ಯಕ್ಷ ಪ್ರಕಾಶ್ ಪೂಜಾರಿ ಮೇರ್ಲ ವಹಿಸಿದ್ದರು. ಗೇರುಕಟ್ಟೆ ಪ್ರೌಢಶಾಲಾ ವಿದ್ಯಾರ್ಥಿ ನಾಯಕಿ ಜಯಶ್ರೀ ದೀಪ ಪ್ರಜ್ವಲಿಸಿದರು. ಕೊಯ್ಯೂರು ಹಳ್ಳಿಮನೆ ಹೈದರ್‌ರವರ ಪ್ರಾಚೀನ ವಸ್ತು ಸಂಗ್ರಹಾಲಯದ ಉದ್ಘಾಟನೆಯನ್ನು ಕಳಿಯ ಗ್ರಾ.ಪಂ.ಸದಸ್ಯ ದಿವಾಕರ.ಎಮ್ ನೆರವೇರಿಸಿದರು. ಪ್ರಾಸ್ತಾವಿಕವಾಗಿ ಸಮೂಹ ಸಂಪನ್ಮೂಲ ಅಧಿಕಾರಿ ರಾಜೇಶ್ ಆಚಾರ್ಯ ಮಾತನಾಡಿದರು. ಕ್ಷೇತ್ರ ಸಂಪನ್ಮೂಲ ಅಧಿಕಾರಿ ಮೋಹನ್, ಗ್ರಾಮ ಪಂಚಾಯತ್ ಸದಸ್ಯರಾದ ಹರೀಶ್ ಕುಮಾರ್.ಬಿ, ಅಬ್ದುಲ್ ಕರೀಂ ಕೆ.ಎಮ್, ಇಂದಿರಾ ಬಿ.ಶೆಟ್ಟಿ, ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಸ.ಪ್ರಾ.ಶಾಲೆ ಕೊರಂಜ, ಪಿಲಿಚಂಡಿಕಲ್ಲು ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿ ಅಧ್ಯಕ್ಷರು ಅಬ್ದುಲ್ ಹಕೀಂ, ಬೊಳ್ಳುಕಲ್ಲು ಶಾಲಾಭಿವೃದ್ಧಿ ಮೇಲುಸ್ತವಾರಿ ಸಮಿತಿ ಅಧ್ಯಕ್ಷ ಹಸನಬ್ಬ, ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿ ಸದಸ್ಯ ಡಾ| ಅನಂತ್ ಭಟ್ , ಕೊರಂಜ ಶಾಲಾ ಮುಖ್ಯ ಶಿಕ್ಷಕಿ ಶಾಂತಾ.ಎಸ್, ದೈಹಿಕ ಶಿಕ್ಷಣ ಶಿಕ್ಷಕರ ತಾಲೂಕು ಸಂಘದ ಅಧ್ಯಕ್ಷ, ಬೆಳ್ತಂಗಡಿ ರವಿರಾಜ ಗೌಡ, ಶಾಲಾಭಿವೃದ್ಧಿ ಮೇಲುಸ್ತವಾರಿ ಸಮಿತಿ ಸದಸ್ಯರಾದಯಾದವ ಗೌಡ.ಎಮ್, ಮಲ್ಲಿಕಾ ಜಗದೀಶ್, ಜ್ಯೋತಿ ಚಂದ್ರಶೇಖರ್, ರೀತಾ ಚಂದ್ರಶೇಖರ್, ಸ.ಕಿ.ಪ್ರಾ.ಬೊಳ್ಳುಕಲ್ಲು ಶಾಲಾ ಮುಖ್ಯಶಿಕ್ಷಕ ಶಿವಾನಂದ ಭಂಡಾರಿ, ಸ.ಕಿ.ಪ್ರಾ.ಓಡಿಲ್ನಾಳ ಶಾಲಾ ಮುಖ್ಯ ಶಿಕ್ಷಕಿ ಸಿಸಿಲಿಯಾ ಪಾಯಸ್- ಪಿಲಿಚಂಡಿಕಲ್ಲು , ಸ.ಕಿ.ಪ್ರಾ.ಓಡಿಲ್ನಾಳ ನಯನಾ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭಹಾರೈಸಿದರು. ಸಂಪನ್ಮೂಲ ವ್ಯಕ್ತಿಗಳಾದ ವಿ.ಕೆ.ವಿಟ್ಲ ವೇದಿಕೆಯಲ್ಲಿ ಕಲಿಕಾ ಹಬ್ಬದ ಕಲಾಕುಂಚವನ್ನು ಅನಾವರಣಗೊಳಿಸಿದರು.
ಗುರುವಾಯನಕೆರೆ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬದಲ್ಲಿ 16 ವಿದ್ಯಾ ಸಂಸ್ಥೆಗಳ 120 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಹಾಗೂ ಶಾಲಾ ಶಿಕ್ಷಕರು, ಪೋಷಕರು, ವಿದ್ಯಾಭಿಮಾನಿಗಳು, ಹಿರಿಯ ಪದವೀದರ ಸಹಾಯಕ ರಾಜೇಂದ್ರ ಕೃಷ್ಣ, ಕಲಾ ಶಿಕ್ಷಕಿ ಮಮತಾ, ಕನ್ನಡ ಭಾಷಾ ಶಿಕ್ಷಕಿ ಜ್ಯೋತಿ, ಆಂಗ್ಲ ಭಾಷಾ ಶಿಕ್ಷಕ ದಿನೇಶ್, ಹಿಂದಿ ಭಾಷಾ ಶಿಕ್ಷಕಿ ಜೋಸ್ವಿನ್ ಅಮಿತಾ ಫೆರ್ನಾಂಡಿಸ್, ಕಛೇರಿ ಸಹಾಯಕ ಶಿವಶಂಕರ್ ಮತ್ತು ಬಿಸಿಯೂಟ ಸಿಬ್ಬಂದಿಗಳು ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸಿದರು.ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.ಶಾಲಾ ಉಪಪ್ರಾಂಶುಪಾಲರಾದ ಈಶ್ವರಿ.ಕೆ.ಶರ್ಮಾ ಸ್ವಾಗತಿಸಿದರು. ಕಾರ್ಯಕ್ರಮ ನಿರೂಪಣೆ ವಿಜ್ಞಾನ ಶಿಕ್ಷಕಿ ಕಿಶೋರಿ, ವಿದ್ಯಾರ್ಥಿಗಳಾದ ಸಿಂಚನ, ಸುಜಿತ್ ನಿರ್ವಹಿಸಿದರು.ದೈಹಿಕ ಶಿಕ್ಷಣ ಶಿಕ್ಷಕರಾದ ಅಜಿತ್ ಕುಮಾರ್ ವಂದಿಸಿದರು.
ಗೇರುಕಟ್ಟೆ ಕೊರಂಜ ಶಾಲಾ ಮೈದಾನದಿಂದ ಸಮವಸ್ತ್ರ ಧರಿಸಿ, ಬ್ಯಾಂಡ್ ವಾದ್ಯಗಳ ಮೂಲಕ ವಿದ್ಯಾರ್ಥಿಗಳಿಂದ ಹುಲಿ ವೇಷ, ವಿವಿಧ ವೇಷ-ಭೂಷಣಗಳೊಂದಿಗೆ ಶಿಕ್ಷಕರು, ಮಕ್ಕಳ ಪೋಷಕರು, ಜನಪ್ರತಿನಿಧಿಗಳು, ವಿದ್ಯಾಭಿಮಾನಿಗಳೊಂದಿಗೆ ವಿಜೃಂಭಣೆಯ ಮೆರವಣಿಗೆ ಗೇರುಕಟ್ಟೆ ಪ್ರೌಢಶಾಲಾ ಕ್ರೀಡಾಂಗಣಕ್ಕೆ ಸಾಗಿತು.