
ಪುಂಜಾಲಕಟ್ಟೆ : ಸರಕಾರಿ ಪ್ರಥಮ ದರ್ಜೆ ಕಾಲೇಜು ಪುಂಜಾಲಕಟ್ಟೆ ಇಲ್ಲಿ ಜ.18 ರಂದು ಷೇರು ಮಾರುಕಟ್ಟೆ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಕಾಲೇಜಿನ ಹಳೆವಿದ್ಯಾರ್ಥಿಯಾದ ಅವಿನಾಶ್ Financial Analyst Mangalore ಇವರು ಆಗಮಿಸಿದ್ದು, ಇವರು ಷೇರು ಮಾರುಕಟ್ಟೆಯಲ್ಲಿ ವ್ಯವಹರಿಸುವ ಬಗ್ಗೆ, ಷೇರು ಮಾರುಕಟ್ಟೆಯ ಗಳಿಕೆ, ನಷ್ಟ ಅದೇ ರೀತಿ Sensex ಹಾಗೂ Niftyಇದು ಯಾವ ರೀತಿ ಕಾರ್ಯ ನಿರ್ವಹಿಸುತ್ತದೆ ಹೀಗೆ ಸಂಪೂರ್ಣ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ವಾಣಿಜ್ಯ ವಿಭಾಗದ ಸಂಚಾಲಕರಾದ ಡಾ. ವಿಶಾಲ್ ಪಿಂಟೋ ಉಪಸ್ಥಿತರಿದ್ದರು, ಹಾಗೆಯೇ ವಾಣಿಜ್ಯ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳು ಭಾಗಿಯಾಗಿದ್ದರು.