Site icon Suddi Belthangady

ಅಂಡಿಂಜೆ: ಜೇನುಕೃಷಿ ತರಬೇತಿ ಹಾಗೂ ಇಲಾಖೆಯ ಯೋಜನೆಗಳ ಬಗ್ಗೆ ರೈತರಿಗೆ ತರಬೇತಿ ಪ್ರಾತ್ಯಕ್ಷತೆ

ಅಂಡಿಂಜೆ: ತೋಟಗಾರಿಕೆ ಇಲಾಖೆ ಬೆಳ್ತಂಗಡಿ ಹಾಗೂ ಗ್ರಾ.ಪಂ. ಅಂಡಿಂಜೆ ಇದರ ಸಹಭಾಗಿತ್ವದಲ್ಲಿ ಜೇನುಕೃಷಿ ತರಬೇತಿ ಹಾಗೂ ಇಲಾಖೆಯ ಯೋಜನೆಗಳ ಬಗ್ಗೆ ತರಬೇತಿ ಕಾರ್ಯಕ್ರಮವು ಜ.19 ರಂದು ಗ್ರಾಮ ಪಂಚಾಯತು ಸಭಾಭವನದಲ್ಲಿ ನಡೆಯಿತು.


ತರಬೇತಿ ಕಾರ್ಯಕ್ರಮವನ್ನು ಗ್ರಾ.ಪಂ. ಉಪಾಧ್ಯಕ್ಷೆ ಶ್ವೇತಾ ದೀಪ ಬೆಳಗಿಸಿ ಉದ್ಘಾಟಿಸಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬೆಳ್ತಂಗಡಿ ತೋಟಗಾರಿಕಾ ಇಲಾಖೆಯ ಹಿರಿಯ ನಿರ್ದೇಶಕ ಚಂದ್ರಶೇಖರ್ ಕೆ.ಎಸ್. ಇಲಾಖೆಯಿಂದ ಸಿಗುವ ಸೌಲಭ್ಯಗಳು ಹಾಗೂ ಅಡಿಕೆ ಗಿಡಗಳಿಗೆ ಎಲೆಚುಕ್ಕಿ ರೋಗದ ಲಕ್ಷಣಗಳು ಮತ್ತು ಔಷಧಗಳ ಬಗ್ಗೆ ಮಾತನಾಡಿದರು. ಸಂಪನ್ಮೂಲ ವ್ಯಕ್ತಿ, ಪ್ರಗತಿಪರ ಜೇನು ಕೃಷಿಕ ಶ್ಯಾಮ್‌ಭಟ್ ವಾದ್ಯಕೋಡಿ ಮಾಹಿತಿ ನೀಡಿದರು.


ಈ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯರಾದ ಜಗದೀಶ್ ಹೆಗ್ಡೆ, ಶೋಭಾ ನಾಯ್ಕ, ಪರಮೇಶ್ವರ, ಸುಜಾತ, ಪಂ.ಅ.ಅಧಿಕಾರಿ ರಾಘವೇಂದ್ರ ಪಾಟೀಲ್, ಗ್ರಾಮಕರಣಿಕ ಅಕ್ಷತ್, ಪಂಚಾಯತ್ ಕಾರ್ಯದರ್ಶಿ ಚಂಪಾ, ಸಂಜೀವಿನಿ ಒಕ್ಕೂಟದ ಮಲ್ಲಿಕಾ, ಸುರೇಖಾ ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು. ಸದಸ್ಯ ಹರೀಶ್ ಹೆಗ್ಡೆ ಸ್ವಾಗತಿಸಿದರು. ಗ್ರಾ.ಪಂ. ಸಿಬ್ಬಂದಿ ಶೀನ ಕೆ. ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಪಂಚಾಯತ್ ಸಿಬ್ಬಂದಿಗಳು ಸಹಕರಿಸಿದರು.

Exit mobile version