ಬೆಳ್ತಂಗಡಿ : ಇಲ್ಲಿಯ ಚರ್ಚ್ ರಸ್ತೆಯ ಲೋಬೊ ನಿವಾಸದ ನಿವೃತ್ತ ಸೇಲ್ಸ್ ಟ್ಯಾಕ್ಸ್ ಅಧಿಕಾರಿ ದಿ. ತೋಮಸ್ ಲೋಬೊ ರವರ ಪತ್ನಿ ನಿವೃತ್ತ ಶಿಕ್ಷಕಿ ಶ್ರೀಮತಿ ಬ್ರಿಜಿತ್ ಫೆರ್ನಾಂಡಿಸ್ ಜ.19ರಂದು ಅಲ್ಪ ಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ.
ಇವರ ಪತಿ ಕಳೆದ ಜೂನ್ ತಿಂಗಳಲ್ಲಿ ನಿಧನರಾಗಿದ್ದರು. ಮೃತರು ಗುರುವಾಯನಕೆರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು.
ಮೃತರ ಅಂತಿಮ ಕ್ರಿಯೆಯು ಜ.20ರಂದು ಅಪರಾಹ್ನ 3.30 ಕ್ಕೆ ಹೊರಟು 4ಗಂಟೆಗೆ ಬೆಳ್ತಂಗಡಿ ಹೊಲಿ ರೆಡೀಮರ್ ಚರ್ಚ್ ನಲ್ಲಿ ನಡೆಯಲಿದೆ.