ಬೆಳ್ತಂಗಡಿ : ಸಂತ ತೆರೇಸಾ ಪ್ರೌಢಶಾಲೆಯ 1987-88 ರ ಸಾಲಿನ 10 ನೇ ತರಗತಿಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮವು ಸಿವಿಸಿ ಹಾಲ್ ನಲ್ಲಿ ನಡೆಯಿತು
ಪ್ರಾರಂಭದಲ್ಲಿ ಎಲ್ಲಾ ಹಳೇ ವಿದ್ಯಾರ್ಥಿಗಳು ಶಾಲೆಯ ವಠಾರಕ್ಕೆ ಆಗಮಿಸಿ 10 ನೇ ತರಗತಿಯ ಶಾಲಾ ನೆನಪುಗಳನ್ನು ಮಗದೊಮ್ಮೆ ನೆನಪಿಸಿಕೊಂಡು ಆನಂದಿಸಿದರು.
ನಂತರ ಅಂದಿನ ವರ್ಷದ ವಿದ್ಯಾ ಭೋದನೆಯನ್ನು ಭೋದಿಸಿದ ಗುರುವರ್ಯರು ಸೇರಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಶಾಂತಿ ಡಿಸೋಜಾ ಮತ್ತು ಮೀನಾಕ್ಷಿ ಇವರ ವಿಶೇಷ ಸ್ವಾಗತ ನೃತ್ಯದ ಬಳಿಕ, ರೇಮಿಜಿಯಸ್ ಸ್ವಾಗತಿಸಿದರು. ಶಾಂತಿ ಬಾಳಿಗ ಪ್ರಾರ್ಥನಾ ಗೀತೆ ಹಾಡಿದರು. ಎಲ್ಲಾ ಗುರುಗಳಿಗೆ ಶಾಲು ಹೊದಿಸಿ ಉಡುಗೊರೆಗಳನ್ನು ನೀಡಿ ಗೌರವಿಸಲಾಯಿತು.
ಆಗಮಿಸಿದ ಎಲ್ಲಾ ಅತಿಥಿಗಳನ್ನು ಗ್ರೂಪಿನ ಅಡ್ಮಿನ್ ಗಳಾದ ರೆಮ್ಮಿ, ಅರುಣ್, ಮತ್ತು ಅಶ್ರಪ್ ಬರಮಾಡಿಕೊಂಡರು.
ಪ್ರಮೀಳಾರವರು ಗುರುಗಳನ್ನು ಉದ್ದೇಶಿಸಿ ಮಾತನಾಡಿ ವಿದ್ಯಾಭೋಧನೆಯಿಂದ ನಾವು ಪಡೆದ ವಿದ್ಯೆ ಬಗ್ಗೆ ಮಾತನಾಡಿದರು. ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹಳೇ ನೆನಪುಗಳನ್ನು ನೆನಪಿಸಿಕೊಂಡರು.
ಸನ್ಮಾನ:
ಅಂದು 1987-88ರಲ್ಲಿ 10 ನೇ ತರಗತಿಯಲ್ಲಿ ಗರಿಷ್ಟ ಅಂಕ ಗಳಿಸಿದ ಪ್ರಮೀಳಾ ಮತ್ತು ಆಶಾದೇವಿ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಹಳೇ ವಿದ್ಯಾರ್ಥಿಗಳ ಪರವಾಗಿ ಜಯಂತಿಯವರು ಮಾತನಾಡಿದರು. ಸಿ| ಸುಶೀಲ, ಮೇರಿ ಟೀಚರ್ ,ಗಂಗಾಧರ್, ಪಿ ಪಿ ಜೋಯ್ , ಮುರಳಿಧರ್ ಮತ್ತು ಪ್ರಸ್ತುತ ಸಾಲಿನ ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಲೀನಾ ರವರು ಅಭಿನಂದಿಸಿದರು.
35 ವರ್ಷಗಳ ನಂತರ 75 ವಿದ್ಯಾರ್ಥಿಗಳನ್ನು ಸಂಪರ್ಕಿಸಿ ಅವರನ್ನು ಒಟ್ಟುಗೂಡಿಸುವ ಮಹಾತ್ತ್ಕಾರ್ಯಕ್ಕೆ ಎಲ್ಲಾ ಗುರುವರ್ಯರು ಹೊಗಳಿಕೆಯನ್ನು ನೀಡಿದರು
ಎಲ್ಲಾ ಹಳೇ ವಿದ್ಯಾರ್ಥಿಗಳನ್ನು ಒಟ್ಟು ಸೇರಿಸಲು ಶ್ರಮಿಸಿದ ರೆಮ್ಮಿ, ಅರುಣ್ ಮತ್ತು ಅಶ್ರಫ್ ಇವರನ್ನು ಸನ್ಮಾನಿಸಲಾಯಿತು.
ಅನಿತಾ ಪಿಂಟೋ ಧನ್ಯವಾದ ಸಮರ್ಪಿಸಿ,ಭೋಜನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.