Site icon Suddi Belthangady

ಉಜಿರೆ : ಜಿಲ್ಲಾ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆ

ಉಜಿರೆ :ಹೆಚ್ಚಿನ ಯೋಜನೆ ಹಾಗೂ ಪೂರ್ವ ತಯಾರಿಯೊಂದಿಗೆ ಸಮ್ಮೇಳನವು ಮಾದರಿಯಾಗಿ ಮೂಡಿ ಬರಲಿ. ಅರ್ಥಪೂರ್ಣ ಗೋಷ್ಠಿಗಳನ್ನು ಸಂಯೋಜಿಸುವ ಜತೆ ಅತಿಥಿ, ಗಣ್ಯರಿಗೆ ಉತ್ತಮವಾದ ಆದರಾತಿಥ್ಯ ದೊರಕಿ ತಾಲೂಕಿನ ಘನತೆಯನ್ನು ಇನ್ನಷ್ಟು ಹೆಚ್ಚಿಸುವ ಕೆಲಸ ಸಾಹಿತ್ಯ ಸಮ್ಮೇಳನದ ಮೂಲಕ ನಡೆಯಲಿ ಎಂದು ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಹೇಳಿದರು.
ಫೆ.3ರಿಂದ 5ರ ತನಕ ಉಜಿರೆಯಲ್ಲಿ ಜರಗಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಗೌರವಾಧ್ಯಕ್ಷರಾಗಿರುವ ಅವರು ಸಮ್ಮೇಳನದ ಲಾಂಛನವನ್ನು ಜ. 17 ರಂದು ಧರ್ಮಸ್ಥಳದಲ್ಲಿ ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಕಸಾಪ ಜಿಲ್ಲಾಧ್ಯಕ್ಷ ಡಾ. ಎಂ.ಪಿ.ಶ್ರೀನಾಥ್, ತಾಲೂಕು ಘಟಕದ ಅಧ್ಯಕ್ಷ ಯದುಪತಿ‌ ಗೌಡ, ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪಾವತಿ ಆರ್.ಶೆಟ್ಟಿ, ಸಮ್ಮೇಳನದ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ಭಟ್ ಬೆಳಾಲು, ಕಚೇರಿ ಸಹಾಯಕ ಹರ್ಷ ಕುಮಾರ್, ನಿವೃತ್ತ ಪ್ರಿನ್ಸಿಪಾಲ್ ಎ. ಕೃಷ್ಣಪ್ಪ ಪೂಜಾರಿ ಉಪಸ್ಥಿತರಿದ್ದರು.
ಚಿತ್ರಕಲಾ ಶಿಕ್ಷಕ ವಿ.ಕೆ.ವಿಟ್ಲ ಲಾಂಛನವನ್ನು ರಚಿಸಿದ್ದಾರೆ.

Exit mobile version