Site icon Suddi Belthangady

ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ಪ್ರಕರಣದ ಪ್ರಮುಖ ಆರೋಪಿ ಬಂಧನ

ಬೆಳ್ತಂಗಡಿ: ಕಡಿರುದ್ಯಾವರ ಅಪ್ರಾಪ್ತ ಬಾಲಕಿ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದ ಪ್ರಮುಖ ಆರೋಪಿ ಸುಧೀರ್ ಎಂಬಾತನನ್ನು ‌ಪೊಲೀಸರು‌ ಬಂಧಿಸಿರುವುದಾಗಿ ವರದಿಯಾಗಿದೆ.
ಕಡಿರುದ್ಯಾವರ ಗ್ರಾಮದ ಬಾಲಕಿ ಯೋರ್ವಳ ಮೇಲೆ ನಡೆದ ಲೈಂಗಿಕ ದೌರ್ಜನ್ಯ ನಡೆಸಿ, ಗಭ೯ಪಾತ ಮಾಡಿಸಿದ ಪ್ರಕರಣದಲ್ಲಿ ಕೇಸು‌‌ದಾಖಲಾದ ಬಳಿಕ ತಲೆಮರೆಸಿಕೊಂಡಿದ್ದ
ಪ್ರಮುಖ ಆರೋಪಿ ಸುಧೀರ್ ಬಂಧನಕ್ಕೆ‌ ಒತ್ತಾಯಿಸಿ ಇತ್ತೀಚೆಗೆ ಬಿಲ್ಲವ ಸಂಘಟನೆಗಳಿಂದ ಪೊಲೀಸರಿಗೆ ಮನವಿ ಸಲ್ಲಿಸಲಾಗಿತ್ತು.
. ಈ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದ್ದು .ಈತನನ್ನು ಜ.17 ರಂದು ಪೊಲೀಸರು ಬಂಧಿಸಿದ್ದಾರೆ.

Exit mobile version