ಪತ್ರಿಕಾಗೋಷ್ಠಿ
ಬೆಳ್ತಂಗಡಿ: ರೋಟರಿ ಕ್ಲಬ್ ಬೆಳ್ತಂಗಡಿ, ಗ್ರಾಮ ಪಂಚಾಯತ್, ಉಜಿರೆ ಹಾಗೂ ಪ್ರೇರಣಾ ಸಂಜೀವಿನಿ ಮಹಿಳಾ ಒಕ್ಕೂಟ, ಉಜಿರೆ ಇವುಗಳ ಜಂಟಿ ಆಶ್ರಯದಲ್ಲಿ ಬಿ. ಹ್ಯೂಮನ್ ಮಂಗಳೂರು ಮತ್ತು ಯೇನೋಪೋಯ ಆಸ್ಪತ್ರೆ ದೇರಳಕಟ್ಟೆ, ಸಹಕಾರದೊಂದಿಗೆ ಸಾರ್ವಜನಿಕರಿಗಾಗಿ ಬೃಹತ್ ಉಚಿತ ವೈದ್ಯಕೀಯ ಶಿಬಿರವನ್ನು ಜ.21ರಂದು ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಹಿರಿಯ ಪ್ರಾಥಮಿಕಯಲ್ಲಿ ಏರ್ಪಡಿಸಲಾಗಿದೆ ಎಂದು ರೋಟರಿ ಕ್ಲಬ್ ಅಧ್ಯಕ್ಷೆ ಮನೋರಮ ಭಟ್ ಹೇಳಿದರು.
ಅವರು ಜ.17ರಂದು ಬೆಳ್ತಂಗಡಿ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಅಂದು ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 2 ಗಂಟೆ ತನಕ ನಡೆಯುವ ಈ ವೈದ್ಯಕೀಯ ಶಿಬಿರದಲ್ಲಿ ಯೇನೋಪೋಯ ಆಸ್ಪತ್ರೆಯ 40 ಮಂದಿ ತಜ್ಞ ವೈದ್ಯರ ತಂಡದವರು ಜನರಲ್ ಮೆಡಿಸಿನ್, ಮೂತ್ರಪಿಂಡ ತಪಾಸಣೆ, ಸ್ತ್ರೀರೋಗಗಳ ತಪಾಸಣೆ, ಕಣ್ಣಿನ ತಪಾಸಣೆ, ಹಲ್ಲಿನ ತಪಾಸಣೆ, ಸಕ್ಕರೆ ಕಾಯಿಲೆ ತಪಾಸಣೆ, ರಕ್ತದೊತ್ತಡ ತಪಾಸಣೆಯನ್ನು ತಜ್ಞ ವೈದ್ಯರು ನಡೆಸಿಕೊಡಲಿದ್ದಾರೆ. ಎರಡು ಹೈಟೆಕ್ ವೈದ್ಯಕೀಯ ಸೇವಾ ವಾಹನಗಳಲ್ಲಿ ಸ್ಥಳದಲ್ಲ್ಲಿಯೇ ಪ್ರಾಥಮಿಕ ಚಿಕಿತ್ಸೆ ನೀಡಲಾಗುವುದು ಎಂದು ತಿಳಿಸಿದರು.
ತಪಾಸಣೆಯ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಉಚಿತ ಬಿ-ಕ್ಯೂಮನ್ ಆರೋಗ್ಯ ಕಾರ್ಡ್ ವಿತರಣೆ ಮಾಡಲಾಗುವುದು. ಡಯಾಲೀಸಿಸ್ ಅಗತ್ಯ ಇದ್ದವರಿಗೆ ಪ್ರತ್ಯೇಕವಾಗಿ ಒಂದು ವರ್ಷದ ಅವಧಿಗೆ ಕಾರ್ಡ್ ನೀಡಲಾಗುವುದು. ಶಸ್ತ್ರ ಚಿಕಿತ್ಸೆ ಅಗತ್ಯವಿದ್ದವರಿಗೆ ಯೇನೋಪೋಯ ಆಸ್ಪತ್ರೆಯಲ್ಲಿ ವ್ಯವಸ್ಥೆ ಹಾಗೂ ಬಿ.ಹ್ಯೂಮನ್ ಸಂಸ್ಥೆಯಿಂದ ಉಚಿತ ಜೌಷಧಿ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರೋಟರಿ ಕ್ಲಬ್ ಸದಸ್ಯ ಅಬೂಬಕ್ಕರ್ ಹಾಗೂ ಬಿ-ಹ್ಯೂಮನ್ ಸಂಸ್ಥೆಯ ಜಾಕಿರ್ ಹುಸೇನ್ ಉಪಸ್ಥಿತರಿದ್ದರು.
ಹೆಚ್ಚಿನ ಮಾಹಿತಿಗೆ : 9632711610, 9448770501, 9449208924 ಈ ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸಬಹುದು.