Site icon Suddi Belthangady

ನಾರಾವಿ ಗ್ರಾ.ಪಂ.ಯಲ್ಲಿ ಮಳೆ ನೀರು ಕೊಯ್ಲು ಹಾಗೂ ಬೂದು ನೀರು ನಿರ್ವಾಹಣೆಯ ಕಾರ್ಯಾಗಾರ

ನಾರಾವಿ : ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ದ.ಕ ಜಿಲ್ಲಾ ಪಂಚಾಯತ್ ಹಾಗೂ ಅನುಷ್ಠಾನ ಬೆಂಬಲ ಸಂಸ್ಥೆ -2 ಗ್ರಾಮ್ಸ್ ಮಂಗಳೂರು ಇವರ ಸಹಯೋಗದಲ್ಲಿ ಜಲ ಜೀವನ್ ಮಿಷನ್ ಯೋಜನೆಯಡಿಯಲ್ಲಿ ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಾರಾವಿ ಗ್ರಾಮ ಪಂಚಾಯತ್ ಯಲ್ಲಿ ಮಳೆ ನೀರು ಕೊಯ್ಲು ಮತ್ತು ಬೂದು ನೀರು ನಿರ್ವಹಣೆ ಯ ಪ್ರೆರೇಪಣಾ ಕಾರ್ಯಾಗಾರವನ್ನು ಜ.16 ರಂದು ನಡೆಸಲಾಯಿತು.

ಜಲ ಜೀವನ್ ಮಿಷನ್ ನ ಅನುಷ್ಠಾನ ಬೆಂಬಲ ಸಂಸ್ಥೆಯ ತಂಡದ ನಾಯಕ ಶಿವರಾಮ್ ರವರು ಮಳೆ ನೀರು ಕೊಯ್ಲು ಘಟಕ ರಚನೆಯ ಮೂಲಕ ನೀರಿನ ಸಂರಕ್ಷಣೆ ಮಾಡುವ ಬಗ್ಗೆ ,ಬೂದು ನೀರು ನಿರ್ವಹಣೆ ಮತ್ತು ಸ್ವಚ್ಛತೆಯ ಬಗ್ಗೆ ಮಾಹಿತಿ ನೀಡಿದರು.

ತರಬೇತಿಯಲ್ಲಿ ಕ್ಲಸ್ಟರ್ ಮೇಲ್ವಿಚಾರಕ ಜಯಾನಂದ್, ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕಿ ಪ್ರತಿಮ, ಪಂಚಾಯತ್ ಅಭಿವೃದ್ದಿ ಅಧಿಕಾರಿ ಸುಧಾಕರ್ ಡಿ, ಸಂಜೀವಿನಿ ಒಕ್ಕೂಟದ ಉಪಾಧ್ಯಕ್ಷೆ ಮಲ್ಲಿಕ ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಂಜೀವಿನಿ ಒಕ್ಕೂಟದ ಸದಸ್ಯರು, ಸ್ವ ಸಹಾಯ ಸಂಘದ ಸದಸ್ಯರು ಸೇರಿ ಒಟ್ಟು 25 ಮಂದಿ ಭಾಗವಹಿಸಿದ್ದರು.

ಕಾರ್ಯಕ್ರಮವನ್ನು ಎಮ್.ಬಿ.ಕೆ ಅನುಷಾ ನಿರೂಪಿಸಿದರು. ಬೆಳ್ತಂಗಡಿ ತಾಲೂಕಿನ ಅನುಷ್ಠಾನ ಬೆಂಬಲ ಸಂಸ್ಥೆಯ ಸಿಬ್ಬಂದಿ ಶ್ರೀಮತಿ ವಿಶಾಲಾಕ್ಷಿ ಆಯೋಜಿ‌ಸಿದರು.

Exit mobile version