ವೇಣೂರು: ಜೀರ್ಣೋದ್ಧಾರಗೊಳ್ಳುತ್ತಿರುವ ಅಜಿಲಸೀಮೆಗೆ ಒಳಪಟ್ಟ ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಮಂಗಳತೇರು ಶ್ರೀ ದೇವಿ ಮಹಾಮ್ಮಾಯಿ ಮಾರಿಗುಡಿ ಸೇವಾ ಟ್ರಸ್ಟ್ ಇದರ ವತಿಯಿಂದ ರೂ. 25000 ಮೊತ್ತದ ದೇಣಿಗೆಯನ್ನು ನೀಡಲಾಯಿತು. ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪಿ.ಯನ್. ಪುರುಷೋತ್ತಮ ರಾವ್ ಅವರಿಗೆ ಮಾರಿಗುಡಿಯ ಅರ್ಚಕ ಬಾಬು ಗೌಡರವರು ಹಸ್ತಾಂತರಿಸಿದರು. ಟ್ರಸ್ಟಿನ ಅಧ್ಯಕ್ಷ ಪದ್ಮನಾಭ ಗೌಡ, ಗೌರವ ಸಲಹೆಗಾರರು, ಪದಾಧಿಕಾರಿಗಳು ಹಾಗೂ ಸದಸ್ಯರು ಜತೆಗಿದ್ದರು.