ಪಿಲಾತಬೆಟ್ಟು: ಸಂಸ್ಕಾರ ಸಂಘಟನೆ ಸೇವೆ ಎಂಬ ದ್ಯೇಯವನ್ನಿಟ್ಟುಕೊಂಡು ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ, ನೇತ್ರಾವತಿ ವಲಯ, ಮಂಗಳೂರು ಮಹಾನಗರ ಬಂಟ್ವಾಳ ತಾಲೂಕು, ಶ್ರೀ ಮುರುಘೇಂದ್ರ ಶಾಖೆ, ಪಿಲಾತಬೆಟ್ಟು ವ್ಯವಸಾಯ ಸೇವಾ ಸಹಕಾರಿ ಸಂಘದಿಂದ ಮಾತೃ ಪೂಜನ, ಮಾತೃ ವಂದನಾ ಹಾಗೂ ಮಾತೃ ಭೋಜನ ಕಾರ್ಯಕ್ರಮ ಬಹಳ ವಿಶಿಷ್ಟ ರೀತಿಯಲ್ಲಿ ಯೋಗಬಂಧುಗಳು ಹಾಗೂ ಯೋಗೇತರ ಬಂಧುಗಳು, ಪುಟಾಣಿ ಮಕ್ಕಳ ಸಮ್ಮಿಲನದೊಂದಿಗೆ ಅಮ್ಮನ ಪ್ರೀತಿ -ವಾತ್ಸಲ್ಯದ ನೆನಪಿನ ಲೋಕದಲ್ಲಿ ಭಾವಾನಾತ್ಮಕವಾಗಿ ಕೌಟುಂಬಿಕ ಸಂಬಂಧಗಳ ಮಹತ್ವ ತಿಳಿದುಕೊಳ್ಳುವ ಮೂಲಕ ಎಲ್ಲಾ ಯೋಗಬಂಧುಗಳ ಉತ್ಸಾಹ ಸಂಭ್ರಮ-ಸಡಗರ ಮಾತೃಶಾಖೆಯವರ ಸಂಪೂರ್ಣ ಸಹಕಾರದಿಂದ ಮಾತೃ ವಂದನಾ ಕಾರ್ಯಕ್ರಮ ಜ. 15 ರಂದು ನಡೆಯಿತು.
ಶಾಖೆಯ ಯೋಗ ಬಂಧುಗಳು ಸಾಮೂಹಿಕ ಭಜನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಆಟೋಟಗಳನ್ನು ತಾಲೂಕು ಪ್ರಮುಖರು ಸೇರಿ ನಡೆಸಿಕೊಟ್ಟರು.
ನಗುವೇ ಯೋಗದೊಂದಿಗೆ ಸಭಾ ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಯನ್ನು ಜಿಲ್ಲಾ ಸಂಸ್ಕಾರ ಪ್ರಮುಖರು ಲಕ್ಷ್ಮಿ ನಾರಾಯಣ ತಾಯಿಯ ಬಗೆಗಿನ ಪ್ರೀತಿ -ವಾತ್ಸಲ್ಯ ತುಂಬಿದ ವಿಚಾರ ಹಾಗೂ ಸಮಿತಿಯ ಪರಿಚಯಗಳನ್ನು ವಿವರಿಸಿದರು.
ಮುಖ್ಯ ಅತಿಥಿಯಾಗಿ ಅಂಚೆ ಪಾಲಕರು ಶ್ರೀಮತಿ ಈಶ್ವರಿ ವಿ ಶರ್ಮಾ ಮಾತೃತ್ವ ದ ಬಗ್ಗೆ ಬೌದ್ಧಿಕ್ ನೀಡಿದರು. ಅಧ್ಯಕ್ಷತೆಯನ್ನು ಬಾಳಪ್ಪ ಶಾಖೆಯ ಶಿಕ್ಷಕಿ ಶ್ರೀಮತಿ ಮಲ್ಲಿಕಾ ವಹಿಸಿಕೊಂಡು ಸಮಿತಿಯು ನಡೆಸುವಂತ ಕಾರ್ಯಕ್ರಮಗಳ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರು.
ಕಾರ್ಯಕ್ರಮವನ್ನು ಕಿಶೋರಿ ನಿರೂಪಿಸಿ , ವಿದ್ಯಾ ಸ್ವಾಗತಿಸಿ, ಯಶೋಧಾ ವರದಿ ವಾಚಿಸಿ, ಉಮಾ ವಂದಿಸಿದರು.
ಹಲವಾರು ತಿಂಗಳುಗಳಿಂದ ಶಾಖೆಯೂ ಮುಂಜಾನೆ 4:50ರಿಂದ 6 :30 ಗಂಟೆಯವರೆಗೆ ಉಚಿತ ಯೋಗ ಶಿಕ್ಷಣ ನೀಡುತ್ತಾ ಬಂದಿದೆ. ನೂರಾರು ಯೋಗ ಬಂಧುಗಳು ಇದರ ಸದುಪಯೋಗ ಪಡೆಯುತಿದ್ದಾರೆ, ಇಂತಹ ಸಂಸ್ಕಾರ ಯುತ ಶಿಕ್ಷಣ ಇಂದಿನ ಜೀವನಕ್ಕೆ ಬಹಳ ಪ್ರಾಮುಖ್ಯತೆ ಇದೆ ಹಾಗೂ ಸಮಿತಿಯ ಕಾರ್ಯ ವೈಖರಿ ಸ್ಥಳೀಯರಿಂದ ಬಹಳ ಮೆಚ್ಚುಗೆ ವ್ಯಕ್ತಪಡಿಸಿದ್ದರು.