Site icon Suddi Belthangady

ಮಚ್ಚಿನ : ಗೌಡರ ಯಾನೆ ಒಕ್ಕಲಿಗರ ಸಂಘದ ವಾರ್ಷಿಕ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ

ಮಚ್ಚಿನ : ಗೌಡರ ಯಾನೆ ಒಕ್ಕಲಿಗರ ಸಂಘ, ಗ್ರಾಮ ಸಮಿತಿ ಮಚ್ಚಿನ ಇದರ 2022-2023ನೇ ಸಾಲಿನ ವಾರ್ಷಿಕ ಮಹಾಸಭೆಯನ್ನು ಹಾಗೂ 2023-2024 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆಯು  ಜ.15 ರಂದು ನಡೆಯಿತು. ಸಂಘದ ನೂತನ ಅಧ್ಯಕ್ಷರಾಗಿ ದಾಮೋದರ ಗೌಡ ಹಟ್ಟೆತ್ತೋಡಿ, ಉಪಾಧ್ಯಕ್ಷರಾಗಿ  ಶ್ರೀನಿವಾಸ  ಗೌಡ ಪುಳಿಕ್ಕಲ, ಕಾರ್ಯದರ್ಶಿಯಾಗಿ ರಾಮಣ್ಣ ಗೌಡ  ಬೀರ್ಲೊಟ್ಟು, ಜೊತೆಕಾರ್ಯದರ್ಶಿಯಾಗಿ ಮೋಹನ್ ಗೌಡ ಮಾಯಿಲೋಡಿ, ಯುವ ವೇದಿಕೆಯ ಅಧ್ಯಕ್ಷರಾಗಿ ವಿನಯಚಂದ್ರ ಗೌಡ ಗುಂಪಕಲ್ಲು, ಉಪಾಧ್ಯಕ್ಷರಾಗಿ ಮನೋಜ್ ಗೌಡ ಕಜೆ, ಕಾರ್ಯದರ್ಶಿಯಾಗಿ ಚೇತನ್ ಕೋಡಿ, ಜೊತೆಕಾರ್ಯದರ್ಶಿಯಾಗಿ ಸಂಕೇತ್ ಗೌಡ ಮಾಯಿಲೋಡಿ ಹಾಗೂ ಸಂಘದ ಹಲವಾರು ಸದಸ್ಯರನ್ನು ಕಾರ್ಯಕಾರಿಣಿ ಸದಸ್ಯರಾಗಿ ಆಯ್ಕೆಗೊಳಿಸಲಾಯಿತು. 

ಸಂಘದ ಗೌರವಧ್ಯಕ್ಷರಾಗಿ ಶ್ರೀನಿವಾಸ ಗೌಡ ಪಲ್ಲತಲ, ಹಾಗೂ ಗೌರವ ಸಲಹೆಗರಾರನ್ನಾಗಿ ಅನಂತ್ರಾಮ ಗೌಡ ಪಲ್ಲತಲ ಇವರುಗಳನ್ನು ಪುನರ್ ಆಯ್ಕೆ ಗೊಳಿಸಿ ಸಂಘದ ಎಲ್ಲಾ ಸದಸ್ಯರ ಪರವಾಗಿ ಸರ್ವಾನುಮತದಿಂದ ಅನುಮೋದಿಸಲಾಯಿತು. ಸಭೆಯಲ್ಲಿ ಸಂಘದ ಅಧ್ಯಕ್ಷ ವಸಂತ ಮರಕಡರವರು ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯದರ್ಶಿಯಾದ ಜಗದೀಶ್ ನೆಕ್ಕಿಲಾಜೆರವರು ವಾರ್ಷಿಕ ವರದಿಯನ್ನು ಮಂಡಿಸಿದರು. ಹಾಗೂ ಸಂಘದ ನೂತನ ಅಧ್ಯಕ್ಷ ದಾಮೋದರ ಗೌಡ ಹಟ್ಟೆತ್ತೋಡಿಯವರು ಮಾತನಾಡಿ ಪ್ರಸಕ್ತ ವರ್ಷದ ಕಾರ್ಯಕ್ರಮಗಳಿಗೆ ಯೋಜನೆ ರೂಪಿಸಲಾಯಿತು. ಕಾರ್ಯಕ್ರಮವನ್ನು ಸುಕುಮಾರ್ ಪೆರೂರು ನಿರೂಪಿಸಿ, ನೂತನ ಕಾರ್ಯದರ್ಶಿಯಾದ ರಾಮಣ್ಣ ಗೌಡ ಬೀರ್ಲೊಟ್ಟು ಇವರು ಧನ್ಯವಾದವಿತ್ತರು.
Exit mobile version