ಬೆಳ್ತಂಗಡಿ : ಕರ್ನಾಟಕ ವಿಧಾನ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಕರಾವಳಿ ಕರ್ನಾಟಕದ ಪ್ರಚಾರ ಸಮಿತಿಯ ಸಹ ಸಂಚಾಲಕರಾಗಿ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಮಾಜಿ ಸದಸ್ಯ ಧರಣೇ0ದ್ರ ಕುಮಾರ್ ಹೊಸಂಗಡಿ ಇವರನ್ನು ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಅನುಮೋದಿಸಿ ವಿಷಯಕ್ಕೆ ಸಂಬಂಧಿಸಿದಂತೆ ಎಐಸಿಸಿ ಮಹಾ ಕಾರ್ಯದರ್ಶಿ ವೇಣುಗೋಪಲ್ ರವರು ಅದೇಶ ನೀಡಿದ್ದಾರೆ.
ಪಿ ಧರ್ಣೇಂದ್ರ ಕುಮಾರ್ ರವರು ಹೊಸಂಗಡಿ ಇವರು ರಾಜ್ಯ ಪ್ರಶಸ್ತಿ ವಿಜೇತ ಹೊಸಂಗಡಿ ಪ್ರೆಂಡ್ಸ್ ಕ್ಲಬ್ ನಲ್ಲಿ ಅಧ್ಯಕ್ಷ ರಾಗಿ ದುಡಿದು ಸಮಾಜ ಸೇವೆ ಮತ್ತು ನಾಯಕತ್ವ ಗುಣವನ್ನು ಬೆಳೆಸಿಕೊಂಡವರು. ಬೆಳ್ತಂಗಡಿ ತಾಲೂಕು ಪಂಚಾಯತ್ ಸದಸ್ಯರಾಗಿ, ಬೆಳ್ತಂಗಡಿ ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಅಧ್ಯಕ್ಷರಾಗಿ , ದ.ಕ ಜಿಲ್ಲಾ ಪಂಚಾಯತ್ ಗೆ ಎರಡು ಬಾರಿ ಸದಸ್ಯರಾಗಿ, ಉಪಾಧ್ಯಕ್ಷರಾಗಿ ಹಾಗು ದ.ಕ ಜಿಲ್ಲಾ ಕೆಡಿಪಿ ಸದಸ್ಯರಾಗಿ ದುಡಿದಿದ್ದಾರೆ.