ನ್ಯಾಯತರ್ಪು : ಇಲ್ಲಿಯ ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಡಿ.16 ರಂದು ಧನು ಸಂಕ್ರಮಣ ದಿಂದ ಪೂರ್ವಾಹ್ನ ಧನು ಪೂಜೆ ಪ್ರಾರಂಭವಾಗಿ ಜ.14 ರ ಮಕರ ಸಂಕ್ರಮಣ ಸಂದರ್ಭದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಸಮಾಪಾನಗೊಂಡಿತು.
ಪ್ರಧಾನ ಅರ್ಚಕರಾದ ವೇ.ಮೂ.ರಾಘವೇಂದ್ರ ಅಸ್ರಣ್ಣರ ನೇತೃತ್ವದಲ್ಲಿ ಪೂಜಾ ವೈದಿಕ, ಧಾರ್ಮಿಕ, ವಿಧಿ- ವಿಧಾನಗಳೊಂದಿಗೆ ಧನು ಪೂಜೆ ನಡೆಯಿತು.
ಭಕ್ತರಿಂದ ದೇವರಿಗೆ ವಿಶೇಷ ಬೆಳ್ಳಿಯ ಕಿರೀಟವನ್ನು ಸಮರ್ಪಿಸಲಾಯಿತು.
ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಭುವನೇಶ್ ಜಿ, ನಿಕಟಪೂರ್ವ ಅಧ್ಯಕ್ಷ ವಸಂತ ಮಜಲು, ವ್ಯವಸ್ಥಾಪನ ಸಮಿತಿ ಸದಸ್ಯರಾದ, ಜನಾರ್ದನ ಪೂಜಾರಿ ಗೇರುಕಟ್ಟೆ, ದಿನೇಶ್ ಗೌಡ ಕಲಾಯಿತೊಟ್ಟು, ಅಂಬಾ ಬಿ.ಅಳ್ವ ನಾಳ, ವಿಜಯ ಹೆಚ್.ಪ್ರಸಾದ್ ಕುಂಠಿನಿ, ಉಮೇಶ್ ಕೇಲ್ದಡ್ಕ, ರಾಜೇಶ್ ಶೆಟ್ಟಿ ಅಡ್ಡ ಕೊಡಂಗೆ, ಅಭಿವೃದ್ಧಿ ಸಮಿತಿ ಅಧ್ಯಕ್ಷ ಯಾದವ ಗೌಡ ಮುದ್ದುಂಜ, ಪ್ರ.ಕಾರ್ಯದರ್ಶಿ ರಾಜೇಶ್ ಪೆಂರ್ಬುಡ,ಡಾ.ಅನಂತ ಭಟ್. ಗೇರುಕಟ್ಟೆ, ದೇವಸ್ಥಾನದ ವ್ಯವಸ್ಥಾಪಕ ಗಿರೀಶ್ ಶೆಟ್ಟಿ ಗೇರುಕಟ್ಟೆ,ಜಾತ್ರಾ ಮಹೋತ್ಸವ ಸಮಿತಿ ಸದಸ್ಯರಾದ ಪೂವಪ್ಪ ಶೆಟ್ಟಿ ಬಿಳಿಬೈಲು, ಆರ್.ಎನ್.ಸುರೇಶ್ ಗೇರುಕಟ್ಟೆ, ಅಶೋಕ ಆಚಾರ್ಯ ಗಂಪದಡ್ಡ, ಕೇಶವ ಪೂಜಾರಿ ನಾಳ, ಸುಧಾಕರ ಮಜಲು, ಪುರಂದರ ಶೆಟ್ಟಿ ನಾಳ, ನಾಳ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಅಧ್ಯಕ್ಷ ವ್ಯವಸ್ಥಾಪನ ಸಮಿತಿ, ಅಭಿವೃದ್ಧಿ ಸಮಿತಿ, ಜಾತ್ರಾಮಹೋತ್ಸವ ಸಮಿತಿ, ರಾಜ ಕೇಸರಿ ಸಂಘದ ಸದಸ್ಯರು ಹಾಗೂ ಭಜನಾ ಮಂಡಳಿ ಪದಾಧಿಕಾರಿಗಳು ಮತ್ತು ನ್ಯಾಯತರ್ಪು, ಕಳಿಯ ಮತ್ತು ಓಡಿಲ್ನಾಳ ಗ್ರಾಮ ಪರ ಊರಿನ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.