Site icon Suddi Belthangady

ವೇಣೂರು ಬ್ರಾಹ್ಮೀ ಮಹಿಳಾ ಸಂಘದ ಪದಗ್ರಹಣ

ವೇಣೂರು: ಇಲ್ಲಿಯ ಬ್ರಾಹ್ಮೀ ಮಹಿಳಾ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವು ವೇಣೂರಿನ ಯಾತ್ರಿ ನಿವಾಸದಲ್ಲಿ ನಡೆಯಿತು.
ನೂತನ ಅಧ್ಯಕ್ಷೆಯಾಗಿ ಸರೋಜ ಜಿ. ಜೈನ್, ಕಾರ್ಯದರ್ಶಿಯಾಗಿ ಆಶಾಲತಾ ಜೈನ್‌ ಹಾಗೂ ಕೋಶಾಧಿಕಾರಿಯಾಗಿ ವಾಗ್ದೇವಿ ಅವರನ್ನು ಆಯ್ಕೆ ಮಾಡಲಾಯಿತು. ಬಳಂಜದ ಚಂದನ ಉದಯಕುಮಾರ್ ಪಡಿವಾಳ್, ನಿಕಟಪೂರ್ವ ಅಧ್ಯಕ್ಷೆ ಸುನೀತಾ ನವೀನ್ ಚಂದ್ ಬಲ್ಲಾಳ್ ಉಪಸ್ಥಿತರಿದ್ದರು. ನಿಕಟಪೂರ್ವ ಕಾರ್ಯದರ್ಶಿ ರಾಜಶ್ರೀ ಸುಧೀರ್ ಕಾರ್ಯಕ್ರಮ ನಿರೂಪಿಸಿದರು.

Exit mobile version