Site icon Suddi Belthangady

ಉಜಿರೆ ಶ್ರೀ ಧ. ಮಂ. ಪ. ಪೂ. ಕಾಲೇಜು ಎನ್. ಎಸ್. ಎಸ್. ವತಿಯಿಂದ ಯುವ ದಿನಾಚರಣೆ

ಉಜಿರೆ :ಜಗತ್ತಿನಾದ್ಯಂತ ಇದೀಗ ಕೃಷಿ, ಕೈಗಾರಿಕೆ, ವಿಜ್ಞಾನ , ತಂತ್ರಜ್ಞಾನ ಹಾಗೂ ಸೇವಾ ಕ್ಷೇತ್ರದಲ್ಲಿ ಬಹಳ ಆವಿಷ್ಕಾರವಾಗುತ್ತಿದೆ. ಇದಕ್ಕೆ ಎಲ್ಲರ ಸಾಂಘಿಕ ಶಕ್ತಿ ಕಾರಣ. ಯಾವ ಕೆಲಸವೂ ಹೀನವಲ್ಲ. ಕನಸು ಹಾಗೂ ಆಕಾಂಕ್ಷೆ ಇದ್ದಾಗ ನಮ್ಮ ಕೆಲಸದಲ್ಲಿ ನೈಪುಣ್ಯ ಪಡೆಯಬಹುದು. ಇದರೊಂದಿಗೆ ಚಿಂತನೆ ಹಾಗೂ ಶ್ರಮವಿದ್ದರೆ ಯಶಸ್ಸು ಸಾಧ್ಯ ಎಂದು ಬೆಳ್ತಂಗಡಿ ವೃತ್ತ ನಿರೀಕ್ಷಕ ಶಿವಕುಮಾರ ಬಿ. ಹೇಳಿದರು.

ಇವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ನಡೆದ ಯುವ ದಿನ ಹಾಗೂ ವಾರ್ಷಿಕ ಚಟುವಟಿಕೆಗಳ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಪ್ರೊ. ದಿನೇಶ ಚೌಟ ಅವರು ಯುವ ದಿನದ ಮಹತ್ವದ ಬಗ್ಗೆ ಮಾತನಾಡಿದರು. ನಾಯಕರಾದ ವಂಶಿ ಭಟ್, ವರ್ಧಿನಿ , ಪ್ರಣಮ್ಯಾ ಜೈನ್ ಹಾಗೂ ಜಯಂತ್ ಅವರನ್ನು ಸನ್ಮಾನಿಸಲಾಯಿತು.
ಯೋಜನಾಧಿಕಾರಿ ಡಾ.ಪ್ರಸನ್ನಕುಮಾರ ಐತಾಳ್ ಹಾಗೂ ಸಹ ಯೋಜನಾಧಿಕಾರಿ ಚೇತನಾ ಕುಮಾರಿ ಉಪಸ್ಥಿತರಿದ್ದರು.

ಪ್ರಣಮ್ಯಾ ಜೈನ್ ವಾರ್ಷಿಕ ವರದಿ ವಾಚನ ಮಾಡಿದರು. ನಾಯಕ ವಂಶಿ ಭಟ್ ಹಾಗೂ ವರ್ಧಿನಿ ಅನಿಸಿಕೆ ವ್ಯಕ್ತಪಡಿಸಿ ವಂದಿಸಿದರು. ಪಲ್ಲವಿ ಕಾರ್ಯಕ್ರಮ ನಿರೂಪಿಸಿದರು. ಸ್ವಯಂ ಸೇವಕರಿಂದ ಸಾಂಸ್ಕತಿಕ ಕಾರ್ಯಕ್ರಮ ಜರುಗಿತು.

Exit mobile version