ಬೆಳ್ತಂಗಡಿ: ಸ್ವಾಮಿ ವಿವೇಕಾನಂದರ ಜನ್ಮದಿನೋತ್ಸವದ ಪ್ರಯುಕ್ತ ದ.ಕ ಜಿಲ್ಲಾಡಳಿತ, ದ.ಕ ಜಿಲ್ಲಾ ಯುವಜನ ಒಕ್ಕೂಟ, ಜಿಲ್ಲೆಯ ಎಲ್ಲಾ ತಾಲೂಕು ಯುವಜನ ಒಕ್ಕೂಟಗಳು ಮತ್ತು ಸಂಘ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ವಿವೇಕರಥ ಯುವಪಥ ಯುವಜಾಗ್ರತಿ ಜಾಥಾ ಜ.13 ರಂದು ಸರಕಾರಿ ಪ.ಪೂ. ಕಾಲೇಜಿನಲ್ಲಿ ಜರುಗಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಹರೀಶ್ ಪೂಂಜ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ತಾ. ಯುವಜನ ಒಕ್ಕೂಟದ ಅಧ್ಯಕ್ಷ ರಮಾನಂದ ಸಾಲಿಯಾನ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಪ.ಪಂ. ಉಪಾಧ್ಯಕ್ಷ ಜಯಾನಂದ ಗೌಡ, ಉಜಿರೆ ಎಸ್.ಡಿ.ಎಮ್ ಪ.ಪೂ ಕಾಲೇಜಿನ ಉಪನ್ಯಾಸಕ ಮಹಾವೀರ ಜೈನ್, ಮಂಗಳೂರು ಯುವಜನ ಒಕ್ಕೂಟ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು, ಜಿಲ್ಲಾ ನೋಡೆಲ್ ಅಧಿಕಾರಿ ಮಾಮಚ್ಚನ್, ಜಿಲ್ಲಾ ಯುವಜನ ಒಕ್ಕೂಟದ ಗೌರವಾಧ್ಯಕ್ಷ ರಾಜೀವ ಸಾಲಿಯಾನ್, ತಾ. ಯುವ ಜನ ಒಕ್ಕೂಟ ಗೌರವಾಧ್ಯಕ್ಷ ಪ್ರಭಾಕರ ಉಪ್ಪಡ್ಕ, ತಾ| ಯುವಜನ ಒಕ್ಕೂಟದ ಸ್ಥಾಪಕಧ್ಯಕ್ಷ ಕೆ.ಜಿ ಗೋಖಲೆ, ತಾ.ಪಂ. ವ್ಯವಸ್ಥಾಪಕ ಪ್ರಶಾಂತ್ ಡಿ. ಬಳಂಜ, ಉಪಪ್ರಾಂಶುಪಾಲ ಆನಂದ ಡಿ, ಯುವ ಜನ ಒಕ್ಕೂಟದ ಮಾಜಿ ಅಧ್ಯಕ್ಷ ಲೋಕೇಶ್ ಶೆಟ್ಟಿ, ಕಾರ್ಯಕ್ರಮದ ಸಂಚಾಲಕರಾಗಿ ಹರಿಪ್ರಸಾದ್ ಹೊಸಂಗಡಿ, ಸ್ಮಿತೇಶ್ ಬಾರ್ಯ, ವಿಜಯ ಗೌಡ, ಹೇಮಾವತಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಯುವ ಸಬಲೀಕರಣ ಮೇಲ್ವಿಚಾರಕ ಸಾಂತಪ್ಪ, ಪ್ರಧಾನ ಕಾರ್ಯದರ್ಶಿ ಸದಾಶಿವ ಹೆಗ್ಡೆ, ಉಪಸ್ಥಿತರಿದ್ದರು.