Site icon Suddi Belthangady

ಬಂಗಾಡಿ ಶಾಲೆಯಲ್ಲಿ ಶತಮಾನೋತ್ತರ ದಶಮಾನೋತ್ಸವದ ಪ್ರಾರಂಭ

ಬಂಗಾಡಿ : ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಬಂಗಾಡಿ ಯಲ್ಲಿ ಶತಮಾನೋತ್ತರ ದಶಮಾನೋತ್ಸವ ಕಾರ್ಯಕ್ರಮ ಹಾಗೂ ವಿವಿಧ ಕಾಮಗಾರಿಗಳ ಉದ್ಘಾಟನೆಯು ಜ.08 ರಂದು ಜರುಗಿತು.

ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಆಶಾಲತಾರವರು ವಹಿಸಿದ್ದರು. ಸಮಾರಂಭದ ಉದ್ಘಾಟನೆಯನ್ನು ನಿವೃತ್ತ ಶಿಕ್ಷಕರಾದ ಶಿವರಾಮ್ ತುಂಬೆಯವರು ನೆರವೇರಿಸಿದರು. ಈ ಸಂದರ್ಭದಲ್ಲಿ ಶಾಲೆಯಲ್ಲಿ ಹೊಸದಾಗಿ ರಚಿತವಾದ ಸ್ಮಾರ್ಟ್ ಕ್ಲಾಸ್. ಸಿಸಿ ಕ್ಯಾಮೆರಾ, ನವೀಕೃತ ಕೊಠಡಿ ಹಾಗೂ ಟೈಲ್ಸ್ ಅಳವಡಿಕೆಯ ಉದ್ಘಾಟನೆಯನ್ನು ನೆರವೇರಿಸಲಾಯಿತು. ಶಿಕ್ಷಕರಾದ ಯೋಗೀಶ್ ಹಾಗೂ ಶ್ರೀಮತಿ ಶಿವಮ್ಮ ರವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ನೂರು ವರ್ಷಗಳನ್ನು ಪೂರೈಸಿದ ಶತಾಯುಷಿ ಬಂಗಾಡಿ ಅರಮನೆಯ ರವಿರಾಜ್ ಬಲ್ಲಾಳ್ ರವರನ್ನು ಅಭಿನಂದಿಸಲಾಯಿತು. ಈ ಶಾಲೆಯಲ್ಲಿ ವಿದ್ಯಾರ್ಜನೆ ಮಾಡಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಅಭಿನಂದಿಸಲಾಯಿತು. ಹಳೆ ವಿದ್ಯಾರ್ಥಿಯಾದ ಭುಜಬಲಿಯವರು ಶಾಲೆಯ ಬೆಳವಣಿಗೆ ಅಭಿವೃದ್ಧಿ ಹಾಗೂ ಮುಂದಿನ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ಪಂಚಾಯತ್ ಸದಸ್ಯರಾದ ಸತೀಶ್, ಪ್ರಮೋದ್ ಹಾಗೂ ಶ್ರೀಮತಿ ಹರಿಣಾಕ್ಷಿ ಮತ್ತು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಬೆಳ್ತಂಗಡಿ ಘಟಕದ ಅಧ್ಯಕ್ಷ ಕಿಶೋರ್ ಕುಮಾರ್ , ಶತಮಾನೋತ್ತರ ದಶಮಾನೋತ್ಸವ ಸಮಿತಿಯ ಅಧ್ಯಕ್ಷ ವಿಶ್ವನಾಥ ಉದ್ಧಾರ, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷೆ ಶ್ರೀಮತಿ ಪ್ರೇಮ, ಉಪಾಧ್ಯಕ್ಷ ಉಮೇಶ್, ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿಯಾದ ಹರೀಶ್ ಸುವರ್ಣ ಉಪಸ್ಥಿತರಿದ್ದರು.

ಮುಖ್ಯೋಪಾಧ್ಯಾಯರಾದ ಸುಭಾಷ್ ಜಾದವ್ ವರದಿ ವಾಚಿಸಿದರು ಸಮಿತಿಯ ಕಾರ್ಯದರ್ಶಿ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಅಮಿತಾನಂದ ಹೆಗ್ಡೆಯವರು ಸ್ವಾಗತಿಸಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರಮಾನಂದ ರವರು ಧನ್ಯವಾದವಿತ್ತರು. ಪೆರ್ಲ ಬೈಪಾಡಿ ಶಾಲೆಯ ಶಿಕ್ಷಕರಾದ ಮಹೇಶ್ ರವರು ಕಾರ್ಯಕ್ರಮ ನಿರೂಪಿಸಿದರು.

Exit mobile version