ಗುರುವಾಯನಕೆರೆ: ಬೆಳ್ತಂಗಡಿ ಬುಲೆಟಿನ್ ಎಂಬ ಫೇಸ್ ಬುಕ್ ಪೇಜ್ ನಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷನ ವಿರುದ್ಧ ಮೂರು ಎಕರೆ ಡಿಸಿಮನ್ನಾ ಜಾಗ ಕಬಳಿಸಿ 18 ಲಕ್ಷ ರೂಪಾಯಿಗೆ ಮಾರಾಟ ಮಾಡಲು ಯತ್ನಿಸಲಾಗುತ್ತಿದೆ ಎಂದು ಬರೆಯಲಾಗಿತ್ತು. ಇದು ಗುರುವಾಯನಕೆರೆಯ ಸುತ್ತಮುತ್ತ ಭಾರೀ ಚರ್ಚೆಗೆ ಕಾರಣವಾಗಿತ್ತು. ಈ ಪೇಜ್ ಬಗ್ಗೆಯೂ ಚರ್ಚೆಗಳು ಆರಂಭವಾಗಿತ್ತು
ಫೇಸ್ ಬುಕ್ ಪೇಜ್ ವಿರುದ್ಧ ದೂರು ದಾಖಲು:
ಬೆಳ್ತಂಗಡಿ ಬುಲೆಟಿನ್ ಪೇಜ್ ನಲ್ಲಿ ಬರೆಯಲಾದ ಬರಹದಿಂದ ನೊಂದ ಕುವೆಟ್ಟು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಪ್ರದೀಪ್ ಅವಹೇಳನಕಾರಿ ಬರಹದ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.
ಗ್ರಾಮ ಪಂಚಾಯತ್ ಉಪಾಧ್ಯಕ್ಷನಾಗಿ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸುತ್ತಿದ್ದೇನೆ. ಅಲ್ಲದೆ ನನ್ನ ವಿರುದ್ಧ ಅಪಪ್ರಚಾರ ನಡೆಸುವ ಹುನ್ನಾರ ಮಾಡುತ್ತಿದ್ದಾರೆ ಎಂದು ಆರೋಪಿಸಿ ಫೇಸ್ ಬುಕ್ ಪೇಜ್ ಬೆಳ್ತಂಗಡಿ ಬುಲೆಟಿನ್ ವಿರುದ್ಧ ಮತ್ತು ಸ್ಥಳೀಯವಾಗಿ ಕಾರ್ಯ ನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯ ವಿರುದ್ಧ ಪ್ರದೀಪ್ ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದಾರೆ.
ಪ್ರದೀಪ್ ಜೊತೆಗೆ ಅವರ ಸಂಘಟನೆಯ,ಪಕ್ಷದ ಪ್ರಮುಖರು,ಸ್ನೇಹಿತರು ಉಪಸ್ಥಿತರಿದ್ದರು.