ಬೆಳ್ತಂಗಡಿ: ಕರ್ನಾಟಕ ರಾಜ್ಯ ಸರ್ಕಾರದ ಆದೇಶದನ್ವಯ 2022-23 ನೇ ಸಾಲಿಗೆ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ನೇರವಾಗಿ ಕರಾವಳಿ ಜಿಲ್ಲೆಯ ಸ್ಥಳೀಯ ಭತ್ತದ ತಳಿಗಳಾದ ಕಜೆ, ಜಯ, ಜ್ಯೋತಿ, ಪಂಚಮುಖಿ, ಸಹ್ಯಾದ್ರಿ, ಉಮಾ, ಅಭಿಲಾಷ ಮತ್ತು MO–4 ಭತ್ತವನ್ನು ಖರೀದಿ ಮಾಡಲಾಗುವುದು. ಅದರಂತೆ ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ, ನಿಯಮಿತ, ಮಂಗಳೂರು ಇವರಿಂದ ದಕ್ಷಿಣ ಕನ್ನಡ ಜಿಲ್ಲೆಯ ಕೆಳಕಂಡ ಸ್ಥಳಗಳಲ್ಲಿ ಖರೀದಿ ನೋಂದಣಿ ಕೇಂದ್ರಗಳನ್ನು ತೆರೆಯಲಾಗಿದೆ. ಭತ್ತ ಖರೀದಿ ನೋಂದಣಿ ಸ್ಥಳ ಎ.ಪಿ.ಎಮ್.ಸಿ ಆವರಣ ಬೆಳ್ತಂಗಡಿ (ಪ್ರತಿ ರೈತರಿಂದ ಎಕರೆಗೆ 16 ಕ್ವಿಂಟಾಲ್‌ನಂತೆ ಗರಿಷ್ಟ 40.00 ಕ್ವಿಂಟಾಲ್ ಮಾತ್ರ ಖರೀದಿಸಲಾಗುವುದು) ಇಲ್ಲಿ 1-12-2022 ರಿಂದ 28-02-2023 ಚಾಲ್ತಿಯಲ್ಲಿರುತ್ತದೆ.
ಗುಣಮಟ್ಟ ಶೇಕಡವಾರು ಗರಿಷ್ಟ ಮಿತಿ ತೇವಾಂಶ 17.0, ಜೊಳ್ಳು 3.0, ಬಣ್ಣ ಮಾಸಿದ, ಮುರಿದ, ಮೊಳಕೆಯೊಡೆದ ಮತ್ತು ಹುಳು ಹಿಡಿದ ಕಾಳು 5.0, ಇತರೆ ಮಿಶ್ರಣ 1. ಸಾವಯವ 1.,
ನಿರವಯುವ 1, ಮುರಿದ, ಮೊಳಕೆಯೊಡೆದ ಮತ್ತು ಹುಳು ಹಿಡಿದ ಕಾಳು ಶೇಕಡಾ 4 % ಕ್ಕಿಂತ ಮೀರಿರಬಾರದು. ಧಾನ್ಯ ದರ (ಪ್ರತಿ ಕ್ವಿಂಟಾಲ್ ಗೆ) ರೂ. ಗಳಲ್ಲಿ ಭತ್ತ ಸಾಮಾನ್ಯ 2040.00, ಭತ್ತ ಗ್ರೇಡ್ – ಎ 2060.00,
1.ಭತ್ತ ಬೆಳೆದಿರುವ ರೈತರು ಕೃಷಿ ಇಲಾಖೆಯಿಂದ ನೀಡಿರುವ “ರೈತರ ನೋಂದಣಿ” ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ (ಫ್ರೂಟ್ಸ್) Farmer Registration and Unified Beneficiary Information system (Fruits) ಗುರುತಿನ ಸಂಖ್ಯೆಯೊಂದಿಗೆ ನೋಂದಣಿ ಕೇಂದ್ರಕ್ಕೆ ಬಂದು ನೋಂದಣಿ ಮಾಡಿಸಿಕೊಳ್ಳತಕ್ಕದ್ದು. FRUITS ID ಯೊಂದಿಗೆ ಬ್ಯಾಂಕ್ ಖಾತೆ ಕಡ್ಡಾಯವಾಗಿ ಲಿಂಕ್ ಆಗಿರುವ ಬಗ್ಗೆ ಖಚಿತ ಪಡಿಸಿಕೊಳ್ಳತಕ್ಕದ್ದು. 2. ತಾತ್ಕಾಲಿಕ ನೋಂದಣಿಗೆ ಅವಕಾಶವಿಲ್ಲದಿರುವುದರಿಂದ ‘ಫ್ರೂಟ್ಸ್’ ದತ್ತಾಂಶದಲ್ಲಿ ನೋಂದಣಿ ಮಾಡಿಕೊಂಡಿರುವ ರೈತರು ಬೆಳೆ ವಿವರ ನಮೂದಾಗಿರುವ ಬಗ್ಗೆ ಮತ್ತೊಮ್ಮೆ ಪರಿಶೀಲಿಸಿ ನೋಂದಣಿ ಕೇಂದ್ರಕ್ಕೆ ಬರುವುದು.3. ‘ಫ್ರೂಟ್ಸ್’ ಗುರುತಿನ ಸಂಖ್ಯೆಯೊಂದಿಗೆ ಆನ್‌ಲೈನ್‌ನಲ್ಲಿ ಭತ್ತದ ಬೆಳೆಯನ್ನು ಖಾತ್ರಿ ಪಡಿಸಲಾಗುವುದು.4. ಪ್ರತಿ ರೈತರಿಂದ ಎಕರೆಗೆ 16 ಕ್ವಿಂಟಾಲ್‌ನಂತೆ ಗರಿಷ್ಟ 40 ಕ್ವಿಂಟಾಲ್ ಭತ್ತವನ್ನು ಮಾತ್ರ ಖರೀದಿಸಲಾಗುವುದು.5. ರೈತರು ಖರೀದಿ ಕೇಂದ್ರದಲ್ಲಿ “ಫ್ರೂಟ್ಸ್” ಗುರುತಿನ ಸಂಖ್ಯೆಯೊಂದಿಗೆ ನೋಂದಾಯಿಸಿಕೊಂಡ ನಂತರ ಖರೀದಿ ಕೇಂದ್ರದಲ್ಲಿ ಭತ್ತದ ಸ್ಯಾಂಪಲ್ ತರಲು ದಿನಾಂಕವನ್ನು ನೀಡಲಾಗುತ್ತದೆ. 6. ಕೃಷಿ ಇಲಾಖೆಯ ಗುಣಮಟ್ಟ ಪರೀಕ್ಷಕರು (ಗ್ರೇಡರ್) ಭತ್ತವನ್ನು ಪರೀಕ್ಷಿಸಿದಾಗ (FAQ) ಗುಣಮಟ್ಟ ಹೊಂದಿದೆಯೆಂದು ದೃಢೀಕರಿಸಿದ ನಂತರ ಖರೀದಿ ದಿನಾಂಕವನ್ನು ನೀಡಲಾಗುವುದು.7. 2022-23 ನೇ ಸಾಲಿನಲ್ಲಿ ಕೇಂದ್ರ ಸರ್ಕಾರವು ಘೋಷಿಸಿರುವ ಬೆಂಬಲ ಬೆಲೆ ಪ್ರತಿ ಕ್ವಿಂಟಾಲ್ ಭತ್ತಕ್ಕೆ ರೂ.2040/- ಜೊತೆಗೆ ರೂ. 500/- ಕರ್ನಾಟಕ ರಾಜ್ಯ ಸರ್ಕಾರದ ಪ್ರೋತ್ಸಾಹ ಧನ ನೀಡಲಾಗುವುದು.8. ರೈತರು ಖರೀದಿ ಕೇಂದ್ರಕ್ಕೆ ತಂದ ಸ್ಯಾಂಪಲ್ ಭತ್ತದ ಗುಣಮಟ್ಟ ಪರೀಕ್ಷಿಸಿದಾಗ ಈ ಕೆಳಗೆ ನಮೂದಿಸಿದ ಮಾದರಿಯ ಅಂಶಗಳನ್ನು ಕಡ್ಡಾಯವಾಗಿ ಹೊಂದಿರಬೇಕು.
ಭತ್ತದ ಖರೀದಿಗೆ ಸಂಬಂಧಿಸಿದಂತೆ ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ಕಛೇರಿಯಲ್ಲಿ ಸಹಾಯವಾಣಿ ಕೇಂದ್ರವನ್ನು ಆರಂಭಿಸಿದ್ದು, ದೂರವಾಣಿ ಸಂಖ್ಯೆ : 991669809, 7975869107, 7483117624
ಹೆಚ್ಚಿನ ಮಾಹಿತಿಗಾಗಿ ರವೀಂದ್ರ ಸಾಲಿಯನ್, ದಾಸ್ತಾನು ಮಳಿಗೆ ನಿರ್ವಾಹಕರು, ದೂರವಾಣಿ ಸಂಖ್ಯೆ : 8861520995 ರೈತ ಬಾಂಧವರು ಈ ಯೋಜನೆಯ ಸದುಪಯೋಗ ಪಡೆಯಲು ಕೋರಲಾಗಿದೆ.