Site icon Suddi Belthangady

ನೆರಿಯ ಅಯ್ಯಪ್ಪ ದೀಪೋತ್ಸವ ಹಾಗೂ ಭಜನಾ ವಾರ್ಷಿಕೋತ್ಸವ

ನೆರಿಯ: ಇಲ್ಲಿಯ 38ನೇ ವರ್ಷದ ಅಯ್ಯಪ್ಪ ದೀಪೋತ್ಸವ ಹಾಗೂ ಭಜನಾ ವಾರ್ಷಿಕೋತ್ಸವ ಅಖಿಲ ಭಾರತ ಅಯ್ಯಪ್ಪ ಸೇವಾ ಸಂಘ ಇದರ ವತಿಯಿಂದ ಜ.8ರಂದು ಅಯ್ಯಪ್ಪ ಭಜನಾ ಮಂದಿರದಲ್ಲಿ ನಡೆಯಿತು.

ಬೆಳಿಗ್ಗೆ ಗಣಹೋಮ, ಕಲ್ಕುಡ ದೈವಕ್ಕೆ ಪರ್ವ, ಶ್ರೀ ಸತ್ಯನಾರಾಯಣ ಪೂಜೆ. ಸಂಜೆ ಅಪ್ಪೆಲ ಶ್ರೀ ಉಮಾ ಪಂಚಲಿಂಗೇಶ್ವರ ದೇವಸ್ಥಾನದಿಂದ ಪಾಲುಕೊಂಬು ಉತ್ಸವ ನಡೆಯಿತು. ದೀಪಾರಾಧನೆ ಹಾಗೂ ವಿವಿಧ ಪೂಜಾ ವಿಧಿ ವಿಧಾನ ಹಾಗೂ ಭಜನಾ ಕಮ್ಮಟ ಭಜನಾ ಮಂಗಳೋತ್ಸವ ನಡೆಯಿತು.

Exit mobile version